ಹುಬ್ಬಳ್ಳಿ:ನಟ ಶಿವರಾಜ್​ ಕುಮಾರ್ ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪರ ಭರ್ಜರಿ ಪ್ರಚಾರ ನಡಿಸಿದ್ದಾರೆ. ಈ ಬಗ್ಗೆ ಸಂಸದ ಪ್ರತಾಪ್ ಸಿಂಹ್ ಸಾಮಾಜಿಕ ಜಾಲತಾಣದ ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದರು. ಇದೀಗ ಬಹುಭಾಷಾ ನಟ ಪ್ರಕಾಶ್ ರಾಜ್ ಟ್ವೀಟ್ ಮಾಡಿ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದ್ದರು.
ಇದೀಗ ಈ ಬಗ್ಗೆ ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದಲ್ಲಿ ನಟರು ಯಾವ ಪಕ್ಷದ ಪರವಾಗಿ ಬೇಕಾದರೂ ಪ್ರಚಾರ ಮಾಡಬಹುದು. ಪ್ರತಾಪ್ ಸಿಂಹ ಮತ್ತು ಶಿವರಾಜ್ ಕುಮಾರ್ ನುಡವಿನ ಟೀಕೆ ಅವರಿಗೆ ಬಿಟ್ಟ ವಿಚಾರ. ಶಿವರಾಜ್ ಕುಮಾರ್ ಪ್ರಚಾರದ ಬಗ್ಗೆ ನನಗೇನು ಅಭ್ಯಂತರ ಇಲ್ಲ. ಅದು ಅವರ ಪಕ್ಷದ ಪ್ರಚಾರ ಎಂದು ಹೇಳಿದರು.
“ಪುನೀತ್ ರಾಜಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ, ಮನಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕಿಳಿದ ಶಿವಣ್ಣ! ಅವರವರ ಭಾವ ಭಕುತಿಗೆ…” ಎಂದು ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

ಪುನೀತ್ ರಾಜಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ, ಮನಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕಿಳಿದ ಶಿವಣ್ಣ!ಅವರವ ಭಾವ ಭಕುತಿಗೆ…pic.twitter.com/AwsuZHzmHA
ಪ್ರತಾಪ್ ಸಿಂಹ ಮಾಡಿರುವ ಟ್ವೀಟ್​ನ್ನು ಪ್ರಕಾಶ್ ರಾಜ್ ರಿ-ಟ್ವೀಟ್ ಮಾಡಿದ್ದಾರೆ. “ನಿಮ್ಮ ಹೊಲಸು ರಾಜಕಾರಣಕ್ಕೆ ನಮ್ಮೆಲ್ಲರ ‘ಅಪ್ಪು’ ಅವರನ್ನು ಯಾಕೆ ಎಳೆಯುತ್ತೀರಿ? ಇದು ತುಂಬಾ ದೊಡ್ಡ ತಪ್ಪು” ಎಂದು ಪ್ರತಾಪ್ ಸಿಂಹ ಅವರ ವಿರುದ್ಧ ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದರು.
ನಟ ಪುನೀತ್ ರಾಜ್​ಕುಮಾರ್ ಹೆಸರಿನಲ್ಲಿ ಸಚಿವ ಸೋಮಣ್ಣ ಆಸ್ಪತ್ರೆ ಕಟ್ಟಿದ್ದರು. ಈ ಆಸ್ಪತ್ರೆ ಉದ್ಘಾಟನೆಗೆ ಆಗಮಿಸಿದ್ದ ರಾಘವೇಂದ್ರ ರಾಜ್​ಕುಮಾರ್, ಸೋಮಣ್ಣ ಅವರ ಕಾರ್ಯವನ್ನು ಮೆಚ್ಚಿ ಶ್ಲಾಘಿಸಿದ್ದರು. 2023ರ ಈ ಕಾಲದಲ್ಲಿ ಬಡವರಿಗಾಗಿ ಇಂತಹ ಉಚಿತ ಆಸ್ಪತ್ರೆ ಯಾರು ಕಟ್ಟುತ್ತಾರೆ? ಎಷ್ಟು ಪುಣ್ಯ ಮಾಡಿದ್ದೇವೆ ನಾವು ನೀವು, ಸೋಮಣ್ಣ ಅವರಿಗೆ ಸೆಲ್ಯೂಟ್ ಬಿಟ್ಟರೆ ಬೇರೆ ಏನೂ ಹೇಳಲು ಸಾಧ್ಯವಿಲ್ಲ ಎಂದು ರಾಘವೇಂದ್ರ ರಾಜ್​ಕುಮಾರ್ ವೇದಿಕೆಯಲ್ಲಿ ಹೇಳಿದ್ದರು. ಈ ವಿಡಿಯೋ ತುಣುಕನ್ನು ಮುಂದಿಟ್ಟುಕೊಂಡು ಶಿವರಾಜ್ ಕುಮಾರ್ ಅವರಿಗೆ ಪ್ರತಾಪ್ ಸಿಂಹ ಟಾಂಗ್ ಕೊಟ್ಟಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 8 =
Remember me
