ಬೆಂಗಳೂರು:ಗಡಿ ಪ್ರದೇಶದಲ್ಲಿರುವ ಕನ್ನಡಿಗರ ಶಿಕ್ಷಣ, ಕೈಗಾರಿಕೆ, ಮೂಲಸೌಕರ್ಯ, ಕನ್ನಡ ಅಭಿವೃದ್ಧಿ ಕೆಲಸಗಳಿಗಾಗಿ ಮಾ.31ರೊಳಗೆ 100 ಕೋಟಿ ರೂ. ಅನುದಾನ ಮತ್ತು ಮುಂದಿನ ವರ್ಷ ಕೂಡ ಮತ್ತೆ 100 ಕೋಟಿ ರೂ. ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರವು ಗುರುವಾರ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ 2022-23ನೇ ಸಾಲಿನ ‘ಗಡಿನಾಡ ಚೇತನ’ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಯಾಗಿ ಕನ್ನಡದ ರಕ್ಷಣೆ, ಪೋಷಣೆ ಮತ್ತು ಭವಿಷ್ಯವನ್ನು ಕಾಪಾಡುವುದು ನನ್ನ ಕರ್ತವ್ಯವಾಗಿದೆ. ಆದ್ದರಿಂದ ಗಡಿನಾಡ ಕನ್ನಡಿಗರು ಮತ್ತು ಅವರ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದರು.
ಹಿಂದಿನ ಸರ್ಕಾರಗಳು ಗಡಿ ಅಭಿವೃದ್ಧಿಗೆ 8ರಿಂದ 10 ಕೋಟಿ ರೂ.ಗಳನ್ನು ನೀಡುತ್ತಿದ್ದವು. ಆದರೆ, ನಮ್ಮ ಸರ್ಕಾರ 25 ಕೋಟಿ ರೂ.ಗಳನ್ನು ನೀಡಿದೆ. ಇದರ ಜತೆಗೆ ನಮ್ಮ ಗಡಿಯಲ್ಲಿರುವ ಜನರಿಗೆ ಸೌಕರ್ಯ, ಅವಕಾಶ ಮತ್ತು ಭವಿಷ್ಯ ರೂಪಿಸುವುದಕ್ಕಾಗಿ ಮಾ.31ರೊಳಗೆ 100 ಕೋಟಿ ರೂ. ನೀಡಲಾಗುವುದು. ಗಡಿ ಅಭಿವೃದ್ಧಿಗೆ ಸರಿಯಾದ ಕ್ರಿಯಾ ಯೋಜನೆ ರೂಪಿಸಿಕೊಟ್ಟರೆ ಮುಂದಿನ ವರ್ಷ ಮತ್ತೆ 100 ಕೋಟಿ ರೂ. ನೀಡುತ್ತೇವೆ ಎಂದು ಭರವಸೆ ನೀಡಿದರು.
ಜನರಿಗಿಲ್ಲದ ಸಮಸ್ಯೆ ಬೆಳೆಸುವುದು ಸರಿಯಲ್ಲ:ಭಾಷಾವಾರು ಪ್ರಾದೇಶಿಕ ರಾಜ್ಯಗಳು ವಿಂಗಡಣೆಯಾದ ಸಂದರ್ಭದಲ್ಲಿ ಗಡಿ ಪ್ರದೇಶದಲ್ಲಿ ನೇರವಾಗಿ ರೇಖೆ ಎಳೆಯಲು ಸಾಧ್ಯವಿಲ್ಲ. ಸಹಜವಾಗಿ ಕೆಲವೊಂದು ವ್ಯತ್ಯಾಸಗಳು ಸಂಭವಿಸುತ್ತವೆ. ಆದರೆ, ಕಾಲ ಉರುಳಿದಂತೆ ಆಗಿರುವ ವ್ಯತ್ಯಾಸಗಳು ಮತ್ತು ಗಾಯಗಳನ್ನು ಮರೆತು ಸಾಮರಸ್ಯದಿಂದ ಒಂದಾಗಿರಬೇಕು. ಅದು ಸಾಧ್ಯವಾಗುಲಿಲ್ಲ ಎಂಬ ಕೊರಗು ಕನ್ನಡಿಗರಿಗೆ ಇದೆ ಎಂದರು.
ಗಡಿಯಲ್ಲಿ ವಾಸಿಸುವ ಯಾವುದೇ ಭಾಷೆ ಜನರು ನೆಮ್ಮದಿಯಿಂದ ಬಾಳುತ್ತಿದ್ದಾರೆ. ಜನರ ಮಧ್ಯೆ ಇಲ್ಲದ ಸಮಸ್ಯೆಯನ್ನು ಬೆಳೆಸಿಕೊಂಡು ಹೋಗುವುದು ಯಾವುದೇ ರಾಜ್ಯಕ್ಕಾಗಲಿ ಅಥವಾ ದೇಶಕ್ಕಾಗಲಿ ಸರಿಯಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಕನ್ನಡಕ್ಕೆ ಆತಂಕವಿಲ್ಲ, ಇಂಗ್ಲಿಷ್ ಅಡ್ಡಗೋಡೆ ಮೇಲಿನ ದೀಪ:ಕೆಲವರು ಹಲವು ಸಂದರ್ಭದಲ್ಲಿ ಕನ್ನಡಕ್ಕೆ ಆತಂಕವಿದೆ ಎಂದು ಹೇಳುತ್ತಾರೆ. ಆದರೆ, ಕನ್ನಡಕ್ಕೆ ಯಾವುದೇ ಆತಂಕವಿಲ್ಲ. ಏಕೆಂದರೆ, ಕನ್ನಡ ಅಕ್ಷರ, ಭಾವಾರ್ಥದಲ್ಲಿರುವ ಶಕ್ತಿ ಯಾವುದೇ ಭಾಷೆಯಲ್ಲಿ ಇಲ್ಲ. ಸಾಹಿತ್ಯ ರಚನೆ ಪೈಪೋಟಿ, ಪ್ರಶಸ್ತಿ ರಾಜಕೀಯ ಮತ್ತು ಪ್ರಭಾವಗಳ ನಡುವೆಯೂ ಅತಿ ಹೆಚ್ಚು ಜ್ಞಾನಪೀಠ ಬಂದಿದೆ. ಕನ್ನಡದಲ್ಲಿ ಸ್ಪಷ್ಟತೆ ಮತ್ತು ನಿಖರತೆ ಇದೆ. ಇಂಗ್ಲಿಷ್ ಅಡ್ಡಗೋಡೆ ಮೇಲೆ ದೀಪ ಇಟ್ಟ ಭಾಷೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್, ಹಿರಿಯ ಸಾಹಿತಿ ಡಾ, ಚಂದ್ರಶೇಖರ ಕಂಬಾರ, ಮಾಜಿ ಸಚಿವರಾದ ಲೀಲಾದೇವಿ ಆರ್. ಪ್ರಸಾದ್, ರಾಣಿ ಸತೀಶ್ ಉಪಸ್ಥಿತರಿದ್ದರು.
ಸಿಂಧೂರ, ಚಂದರಗಿ, ಎಡನೀರು ಮಠಕ್ಕೆ ಪ್ರಶಸ್ತಿಗಡಿನಾಡಿನ ಕನ್ನಡ ಹೋರಾಟಗಾರ ಮಹಾರಾಷ್ಟ್ರದ ಜತ್ತ ಗ್ರಾಮದ ಎಂ.ಎನ್. ಸಿಂಧೂರ ಅವರಿಗೆ ಡಾ. ಚನ್ನಬಸವ ಪಟ್ಟದೇವರು ಪ್ರಶಸ್ತಿ, ಬೆಳಗಾವಿಯ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಅವರಿಗೆ ಕನ್ನಡದ ಏಕೀಕರಣದ ಹೋರಾಟದ ವೀರಾಗ್ರಣಿ ಡಾ. ಜಯದೇವಿತಾಯಿ ಲಿಗಾಡೆ ಪ್ರಶಸ್ತಿ ಮತ್ತು ಕಾಸರಗೋಡಿನ ಎಡನೀರು ಸಾಂಸ್ಕೃತಿಕ ಮಠಕ್ಕೆ ನಾಡೋಪ ಡಾ. ಕಯ್ಯಾರ ಕಿಞ್ಞಣ್ಣ ರೈ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಬಹುಮಾನ ಮತ್ತು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ವಚನ ಸಾಹಿತ್ಯವನ್ನು ಜಗತ್ತಿನ ವಿವಿಧ 120 ದೇಶಗಳಲ್ಲಿ ಅಧ್ಗಯನ ನಡೆಸಲಾಗುತ್ತಿದೆ. ಹೊರ ರಾಜ್ಯ ಮತ್ತು ದೇಶಗಳಲ್ಲಿ ವಚನ ಸಾಹಿತ್ಯವು ತುಂಬಾ ಪ್ರಚಾರದಲ್ಲಿದೆ. ಜನಸಾಮಾನ್ಯರ ಭಾಷೆಯಲ್ಲಿರುವ ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯವು ಶ್ರೇಷ್ಠ ಸಾಹಿತ್ಯವಾಗಿದೆ.– ಡಾ. ಚಂದ್ರಶೇಖರ ಕಂಬಾರ, ಹಿರಿಯ ಸಾಹಿತಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 2 =
Remember me
