ಹಾವೇರಿ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿಯಲ್ಲಿಂದು (ಏಪ್ರಿಲ್​ 15) ಸಾಂಕೇತಿಕವಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ. ಈ ವೇಳೆ ಅವರು ತಮ್ಮ ಸಂಪತ್ತಿನ ವಿವರವನ್ನು ಬಹಿರಂಗ ಪಡಿಸಿದ್ದಾರೆ. ಸ್ವಾರಸ್ವಕರ ಸಂಗತಿಯೆಂದರೆ, ತಾವಾಗಲಿ, ತಮ್ಮ ಕುಟುಂಬದವರ ಬಳಿಯಾಗಲಿ ಯಾವುದೇ ವಾಹನಗಳಿಲ್ಲ ಎಂದು ಬೊಮ್ಮಾಯಿ ಅಫಿಡವಿಟ್‌ನಲ್ಲಿ ಹೇಳಿಕೊಂಡಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಅವರ ಆಸ್ತಿ ವಿವರ ಹೀಗಿದೆ. 5.98 ಕೋಟಿ ರೂ. ಚರಾಸ್ತಿ ಹಾಗೂ 22.95 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಸ್ವಂತ ವಾಹನ ಇಲ್ಲ ಎಂದು ಘೋಷಣೆ ‌ಮಾಡಿರುವ ಸಿಎಂ, ಒಟ್ಟು 5.79 ಕೋಟಿ ರೂ. ಸಾಲ ಹೊಂದಿದ್ದಾರೆ. 3 ಲಕ್ಷ ರೂ. ನಗದು ಹೊಂದಿದ್ದಾರೆ.
ಇದನ್ನೂ ಓದಿ:ಕಳೆದ 6 ವರ್ಷಗಳಲ್ಲಿ 10,933 ಎನ್​ಕೌಂಟರ್​! ಕ್ರಿಮಿನಲ್​ಗಳ ವಿರುದ್ಧ ಯೋಗಿ ಸರ್ಕಾರ ಕ್ರಮ
ಬೊಮ್ಮಾಯಿ ಅವರ ಪತ್ನಿ ಯಾವುದೇ ಸ್ಥಿರಾಸ್ತಿ ಹೊಂದಿಲ್ಲ ಎಂದು ಉಲ್ಲೇಖಿಸಿದ್ದಾರೆ. ಸಿಎಂ ಪತ್ನಿ 1.14 ಕೋಟಿ ರೂ. ಚರಾಸ್ತಿ ಹೊಂದಿದ್ದಾರೆ. ತಮ್ಮ ಹಿಂದೂ ಅವಿಭಜಿತ ಕುಟುಂಬದಲ್ಲಿ 1.57 ಕೋಟಿ ರೂ. ಚರಾಸ್ತಿ ಮತ್ತು 19.20 ಕೋಟಿ ರೂ. ಸ್ಥಿರಾಸ್ತಿ ಇದೆ ಎಂದು ಬಹಿರಂಗಪಡಿಸಿದ್ದಾರೆ. ಪತ್ನಿ 50,000 ರೂ. ನಗದು ಹೊಂದಿದ್ದಾರೆ.
ಬಸವರಾಜ ಬೊಮ್ಮಾಯಿ ಪುತ್ರಿ ಅದಿತಿ ಬೊಮ್ಮಾಯಿ ಹೆಸರಿನಲ್ಲಿ 1.28 ಕೋಟಿ ರೂ. ಚರಾಸ್ತಿ ಹಾಗೂ 25,000 ನಗದು ಇರಿಸಿಕೊಂಡಿದ್ದಾರೆ. ಪುತ್ರಿ ಹೆಸರಿನಲ್ಲಿ 23 ಲಕ್ಷ ರೂ.ಗೂ ಹೆಚ್ಚು ಹೂಡಿಕೆ ಇದೆ.
ಸಿಎಂ ಬೊಮ್ಮಾಯಿ ವಿವಿಧ ಬ್ಯಾಂಕ್‌ಗಳಲ್ಲಿ 40 ಲಕ್ಷ ರೂ.ಗೂ ಹೆಚ್ಚು ಠೇವಣಿ ಹೊಂದಿದ್ದರೆ, ಪತ್ನಿ ಬಳಿ 27.6 ಲಕ್ಷ ರೂ. ಠೇವಣಿ ಹೊಂದಿದ್ದಾರೆ. ವಿವಿಧ ಕಂಪನಿಗಳಲ್ಲಿ 3.23 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಪತ್ನಿ ಸುಮಾರು 7 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್​-ಬಿಜೆಪಿ ಉತ್ತರ-ದಕ್ಷಿಣ ಗುರಿ; ಹೆಚ್ಚು ಸ್ಥಾನಕ್ಕೆ ಎರಡೂ ಪಕ್ಷಗಳಿಂದ ಸ್ಪಷ್ಟ ಲೆಕ್ಕಾಚಾರ
ಪುತ್ರ ಭರತ್‌ ಬೊಮ್ಮಾಯಿ ಹಾಗೂ ಸುಗುಣ ಎನ್ನುವವರಿಗೆ ಬೊಮ್ಮಾಯಿ ಅವರು ಕ್ರಮವಾಗಿ 14.74 ಲಕ್ಷ ರೂ. ಹಾಗೂ 2 ಲಕ್ಷ ರೂ. ಸಾಲ ನೀಡಿದ್ದಾರೆ. ಅವಿಭಕ್ತ ಕುಟುಂಬದಿಂದ ಬಸವರಾಜ ಬೊಮ್ಮಾಯಿ 1.42 ಕೋಟಿ ರೂ. ಸಾಲ ಪಡೆದಿದ್ದಾರೆ.
ಬಸವರಾಜ ಬೊಮ್ಮಾಯಿ ಅವರ ಬಳಿ 1.50 ಕೋಟಿ ರೂ. ಮೌಲ್ಯದ ಚಿನ್ನಾಭರಣ ಇದೆ ಎಂದು ಉಲ್ಲೇಖಿಸಿದ್ದಾರೆ. ಪತ್ನಿ ಬಳಿ 78.83 ಲಕ್ಷ ರೂ., ಪುತ್ರಿ ಬಳಿ 53.84 ಲಕ್ಷ ರೂ. ಹಾಗೂ ಕುಟುಂಬದ ಬಳಿ 13.78 ಲಕ್ಷ ರು. ಮೌಲ್ಯದ ಚಿನ್ನಾಭರಣಗಳಿವೆ.
ಬಸವರಾಜ ಬಳಿ 1 ಕೃಷಿ ಜಮೀನಿದ್ದು, ಕುಟುಂಬದ ಬಳಿ ಒಂದು ಜಮೀನಿದೆ. ಬೆಂಗಳೂರಿನ ಯಲಹಂಕ ಹಾಗೂ ಹುಬ್ಬಳ್ಳಿಯಲ್ಲಿ ಬೊಮ್ಮಾಯಿ ಅವರಿಗೆ ತಲಾ ಒಂದು ಕೃಷಿಯೇತರ ಭೂಮಿಯೂ ಇದೆ. ಕುಟುಂಬದ ಹೆಸರಲ್ಲಿ ಹುಬ್ಬಳ್ಳಿಯಲ್ಲಿ ನಾಲ್ಕು ಕೃಷಿಯೇತರ ಭೂಮಿ ಇದೆ.
ಧಾರವಡದ ಇಂಡಸ್ಟ್ರಿಯಲ್‌ ಏರಿಯಾ, ದೊಡ್ಡಬಳ್ಳಾಪುರದಲ್ಲಿ ಹಾಗೂ ಕಾರಾವರದಲ್ಲಿ ಬೊಮ್ಮಾಯಿ ಅವರಿಗೆ ವಾಣಿಜ್ಯ ಕಟ್ಟಡಗಳಿವೆ. ಶಿಗ್ಗಾಂವಿಯಲ್ಲಿ ಮನೆಯಿದ್ದರೆ, ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿ ಫ್ಲ್ಯಾಟ್‌ ಇದೆ. ಕುಟುಂಬದ ಹೆಸರಲ್ಲಿ ಹುಬ್ಬಳ್ಳಿ ಹಾಗೂ ಬೆಂಗಳೂರಿನ ಆರ್‌ಟಿ ನಗರದಲ್ಲಿ ಮನೆಗಳಿವೆ.
ಇದನ್ನೂ ಓದಿ:ಸರ್ಕಾರಿ ನೌಕರರೇ ಹುಷಾರ್​; ಕರ್ತವ್ಯಕ್ಕೆ ಬಾರದಿದ್ರೆ ಅರೆಸ್ಟ್​!
ಬೊಮ್ಮಾಯಿ ಹತ್ತಾರು ಕಡೆಗಳಲ್ಲಿ ಕೈ ಸಾಲ ಪಡೆದುಕೊಂಡಿದ್ದಾರೆ. ಐಸಿಐಸಿಐ ಬ್ಯಾಂಕ್‌ನಲ್ಲಿ 47.35 ಲಕ್ಷ ರೂ., ಎಸ್‌ಬಿಐನಲ್ಲಿ 37.47 ಲಕ್ಷ ರೂ. ಗೃಹ ಸಾಲವಿದೆ. 79 ಸಾವಿರದ ಇನ್ನೊಂದು ಗೃಹ ಸಾಲವೂ ಎಸ್‌ಬಿಐನಲ್ಲಿದೆ. ಕುಟುಂಬದಿಂದ 1.42 ಕೋಟಿ ರೂ. ಸಾಲವನ್ನು ಬೊಮ್ಮಾಯಿ ಪಡೆದುಕೊಂಡಿದ್ದು, 9 ವ್ಯಕ್ತಿಗಳು ಹಾಗೂ ಸಂಸ್ಥೆಗಳಿಂದಲೂ ಅಪಾರ ಪ್ರಮಾಣದ ಸಾಲ ಪಡೆದುಕೊಂಡಿದ್ದಾರೆ. ಒಟ್ಟು 5.79 ಕೋಟಿ ರೂ. ಸಾಲ ಹೊಂದಿದ್ದಾರೆ.
ಇನ್ನು 2021-22ರಲ್ಲಿ 41.09 ಲಕ್ಷ ರೂ. ಆದಾಯ ಗಳಿಸಿರುವುದಾಗಿ ಬೊಮ್ಮಾಯಿ ಹೇಳಿದ್ದು, ಪತ್ನಿ ಆದಾಯ 2.69 ಲಕ್ಷ ರೂ. ಎಂದು ಘೋಷಿಸಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
