ಮೈಸೂರು:ಭಾರತ ಕಂಡ ಅಪರೂಪದ ದಿಟ್ಟ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಧಾನಿಯವರನ್ನು ಹಾಡಿಹೊಗಳಿದರು.
ಮಹಾರಾಜ ಕಾಲೇಜಿನ ಆವರಣದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಮಾತನಾಡಿದ ಅವರು, ಮೈಸೂರು ಎಂದರೆ ಪ್ರಧಾನಿ ಮೋದಿ ಅವರಿಗೆ ಅಚ್ಚುಮೆಚ್ಚು, ಕೆಲ ವರ್ಷಗಳ ಹಿಂದೆಯೇ ಇಲ್ಲಿ ಬರಲು ಇಚ್ಚಿಸಿದ್ದರು. ಆದರೆ ಈ ಬಾರಿ ಇಲ್ಲೇ ಯೋಗ ದಿನಾಚರಣೆ ನಡೆಸಲು ಸಮ್ಮತಿ ಸೂಚಿಸಿದರು ಎಂದು ಹೇಳಿದರು.
ಮಳೆ ಬಂದರೂ, ಚಳಿ ಇದ್ದರೂ ಮೈಸೂರಲ್ಲೇ ಯೋಗ ದಿನಾಚರಣೆ ನಡೆಸಬೇಕು ಎಂದು ಪ್ರಧಾನಿ ಅವರೇ ಹೇಳಿದ್ದರು. ಭಾರತ ಹಲವಾರು ಪ್ರಧಾನಿ ಅವರನ್ನು ಕಂಡಿದೆ. ಆದರೆ ಮೋದಿ ಅವರಂತಹ ನಾಯಕನನ್ನು ಇದೇ ಮೊದಲ ಬಾರಿಗೆ ಕಂಡಿದ್ದೇವೆ. ಮುಖ್ಯಮಂತ್ರಿ ಹಾಗೂ ಪ್ರಧಾನಿಯಾಗಿ ಒಟ್ಟು 20 ವರ್ಷ ಪೂರೈಸಿದ್ದಾರೆ. ನಮ್ಮ ಪ್ರಧಾನಿ ಅವರು ಜನರಾಜಕಾರಣ ಮಾಡಿದ್ದಾರೆ ಹೊರತು, ಅಧಿಕಾರಕ್ಕಾಗಿ ರಾಜಕಾರಣವನ್ನು ಮಾಡಿಲ್ಲ ಎಂದರು.
ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದೆ.ಮೈಸೂರಿಗೆ ಟೂರಿಸಂ ಸರ್ಕಿಟ್ ಆರಂಭ ಮಾಡುತ್ತೇವೆ.ಏರ್ ಪೋರ್ಟ್ ವಿಸ್ತರಣೆಗೆ ಅನುಮೋದನೆ ನೀಡಿದ್ದೇನೆ.ಕೆ.ಆರ್ ಎಸ್ ಆಸ್ಪತ್ರೆಗೆ ಹಣ ಬಿಡುಗಡೆ ಮಾಡಿದ್ದೇನೆ.ಮೈಸೂರಿಗೆ ಇಂಡಸ್ಟ್ರಿ ತರಲು ಪ್ರೋತ್ಸಾಹ ನೀಡುತ್ತೇವೆ.ನರೇಂದ್ರ ಮೋದಿ ಅವರ ಕೈ ಬಲ ಪಡಿಸಿ. 2023 ಕ್ಕೆ ಮತ್ತೊಮ್ಮೆ ಬಿಜೆಪಿಯನ್ನ ಅಧಿಕಾರಕ್ಕೆ ತನ್ನಿ.ಡಬಲ್ ಇಂಜಿನ್ ಸರ್ಕಾರ ಮತ್ತೊಮ್ಮೆ ಬರಲು ನೀವು ಸಹಕಾರ ನೀಡಿ ಎಂದು ಮುಖ್ಯಮಂತ್ರಿ ಮನವಿ ಮಾಡಿದರು.(ದಿಗ್ವಿಜಯ ನ್ಯೂಸ್​)
LIVE| ಮೈಸೂರಲ್ಲಿ ಪ್ರಧಾನಿ ಮೋದಿ… ಸಾರ್ವಜನಿಕ ಸಮಾವೇಶದ ನೇರ ಪ್ರಸಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 10 =
Remember me
