ಬೆಂಗಳೂರು:ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಚುನಾವಣಾ ಫಲಿತಾಂಶ ಕುರಿತು ವಸ್ತುಸ್ಥಿತಿ ವಿಚಾರ ವಿನಿಮಯ ಮಾಡಿಕೊಂಡು, ಮುಂದಿನ ಹೆಜ್ಜೆಯ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಮತದಾನೋತ್ತರ ಅಂಕಿ-ಅಂಶಗಳ ವಿವರ ತರಿಸಿಕೊಂಡು ಖುದ್ದು ವರಿಷ್ಠರಿಗೆ ಕರೆ ಮಾಡಿ, ಮತ ಹಾಗೂ ಸ್ಥಾನಗಳ ಗಳಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ. ವರಿಷ್ಠರು ಕೂಡಾ ತೃಪ್ತಿ ವ್ಯಕ್ತಪಡಿಸಿ, ಸರ್ಕಾರ ರಚನೆಯ ವಿಶ್ವಾಸ ವ್ಯಕ್ತಪಡಿಸಿದರು ಎಂಬ ವಿಷಯವನ್ನು ಬಿಎಸ್​ವೈ ಗಮನಕ್ಕೆ ತಂದರು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಕುದರಗುಂಡಿ ಕೆರೆಗೆ ರಾಸಾಯನಿಕ ಮಿಶ್ರಿತ ನೀರು ಹರಿದ ಪರಿಣಾಮ: ಲಕ್ಷಾಂತರ ಮೀನುಗಳ ಮಾರಣಹೋಮ
ಬೊಮ್ಮಾಯಿ‌ ಬರುವುದಕ್ಕೆ ಮುನ್ನ ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಪಕ್ಷಕ್ಕೆ ಬಹುಮತ ಬರಲಿದೆ ಎಂಬ ವಿಶ್ವಾಸವನ್ನು ಬಿಎಸ್​ವೈ ತುಂಬಿದರು ಎನ್ನಲಾಗಿದೆ.
ಕಾವೇರಿ ನಿವಾಸದ ಬಳಿ ಎನ್.ರವಿಕುಮಾರ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ನಾವು ಏನೇ ಹೇಳಿದರೂ ನಾಳೆ ರಿಸಲ್ಟ್​ನಲ್ಲಿ ವಾಸ್ತವ ಗೊತ್ತಾಗಲಿದೆ. ನಾವು 105-120ರವರೆಗೆ ತಲುಪುತ್ತೇವೆ. ನನ್ನ ಪ್ರಕಾರ ಕಲ್ಯಾಣ ಕರ್ನಾಟಕದಲ್ಲಿ 15ಕ್ಕಿಂತ ಕಡಿಮೆ ಬರುವುದಿಲ್ಲ. ಬೆಂಗಳೂರಿನಲ್ಲಿ ಕೂಡ 15ಕ್ಕಿಂತ ಹೆಚ್ಚು ಸ್ಥಾನ ಗಳಿಸುತ್ತೇವೆ. ಕರಾವಳಿಯಲ್ಲಿ ಅತಿ ಹೆಚ್ಚು ಗೆಲ್ಲುತ್ತೇವೆ. ಒಟ್ಟಾರೆ ರಾಜ್ಯದ ವಿಚಾರ ತೆಗೆದುಕೊಂಡ್ರೆ 105ಕ್ಕಿಂತ ಹೆಚ್ಚು ಗೆಲುವು ನಿಶ್ಚಿತ. ಕಾಂಗ್ರೆಸ್ ಏನೇ ಹೇಳಬಹುದು, ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಭವಿಷ್ಯ ನುಡಿದರು.
ಬಾಜಿ ಕಟ್ಟುವವರಿದ್ದರೆ ಬನ್ನಿ! ದಾವಣಗೆರೆಯಲ್ಲಿ ಚುನಾವಣಾ ಬೆಟ್ಟಿಂಗ್ ಜೋರು, ಡಂಗುರ ಸಾರಿಸಿ ಪಂಥಾಹ್ವಾನ

1964ರಲ್ಲಿ 7 ಸಾವಿರ ರೂ.ಗೆ ಖರೀದಿ: ಈಗ ಹರಾಜಿನಲ್ಲಿ ರೊಲೆಕ್ಸ್​ ಸೇಲಾದ ಮೊತ್ತ ಕೇಳಿದ್ರೆ ಬೆರಗಾಗ್ತೀರಾ!​

ಮರಕ್ಕೆ ಡಿಕ್ಕಿ ಹೊಡೆದ 2 ಕೋಟಿ ರೂ. ಪೋರ್ಷೆ ಕಾರು ಸುಟ್ಟು ಭಸ್ಮ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − two =
Remember me
