ಹುಬ್ಬಳ್ಳಿ:ರಾಜ್ಯ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ತಮ್ಮ ಪಕ್ಷಗಳ ಪರ ನಾಯಕರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.
ಇನ್ನು ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಜಯವಾಹಿನಿ ಎಂಬ ಹೆಸರಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ರೋಡ್​ ಶೋ ಹಮ್ಮಿಕೊಳ್ಳುವ ಮೂಲಕ ಮತಬೇಟೆಗೆ ಇಳಿದಿದ್ಧಾರೆ.
ಇನ್ನು ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಶಾಸಕ ಅರವಿಂದ್​ ಬೆಲ್ಲದ್​ ಪರ ನವಲೂರ ಬಡಾವಣೆ ಸೇರಿದಂತೆ ಸುತ್ತಮುತ್ತ ರೋಡ್​ ಶೋ ನಡೆಸಿದ್ಧಾರೆ.
ಇದನ್ನೂ ಓದಿ:ಚುನಾವಣಾ ಅಕ್ರಮ; ದಾಖಲೆ ಇಲ್ಲದೆ ಸಾಗಿಸುತ್ತಿದ್ದ 65 ಲಕ್ಷ ರೂ. ವಶಕ್ಕೆ
ಇನ್ನು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವ ವೇಳೆ ಮೈಕ್​ ಕೈ ಕೊಟ್ಟಿದ್ದು ಸಿಎಂ ಬೊಮ್ಮಾಯಿ ಆಯೋಜರ ವಿರುದ್ಧ ಸಿಡಿಮಿಡಿಗೊಂಡ ಘಟನೆ ನಡೆದಿದೆ.
ಇನ್ನು ಮೈಕ್​ ಕೈಕೊಟ್ಟಿದ್ದಕ್ಕೆ ಸಿಡಿಮಿಡಿಗೊಂಡ ಸಿಎಂ ಏನ್​ ದನ ಕಾಯ್ತಾರಪ್ಪ ಸೆಲ್ ಹಾಕಿಸಿ ತಗೊಂಡು ಬನ್ನಿ. ಇಲ್ಲವಾದಲ್ಲಿ ಬೇರೆ ವಾಹನದ ಅಥವಾ ಆಟೋಗೆ ಕಟ್ಟಿರುವ ಧ್ವನಿವರ್ಧಕದ ಮೈಕ್​ ತಗೊಂಡು ಬನ್ನಿ ಎಂದು ಸಿಎಂ ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
