ವಿಜಯಪುರ:ಕಾವೇರಿಗಿಂತ ಮೊದಲೇ ಕೃಷ್ಣೆಗೆ ಬಾಗಿನ ಅರ್ಪಿಸುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದರು. ಆಲಮಟ್ಟಿಯ ಲಾಲ್​ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಶನಿವಾರ ಭೇಟಿ ನೀಡಿ ಸಾಂಪ್ರದಾಯಿಕವಾಗಿ ಬಾಗಿನ ಅರ್ಪಿಸಿದರು. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಚಿವೆ ಶಶಿಕಲಾ ಜೊಲ್ಲೆ ಸೇರಿ ಹಲವು ಸಚಿವರು, ಶಾಸಕರು ಸಾಥ್ ನೀಡಿದರು. ಶಾಸಕ ಶಿವಾನಂದ ಪಾಟೀಲರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಿತು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಕೃಷ್ಣೆಗೆ ಮೊದಲ ಪ್ರಾಶಸ್ಱ ಕೊಡಬೇಕೆಂಬ ಒತ್ತಾಸೆ ಮೇರೆಗೆ ಮೊದಲು ಆಲಮಟ್ಟಿಗೆ ಬಂದು ಬಾಗಿನ ಅರ್ಪಿಸಿದ್ದೇನೆ. ಸಕಾಲಕ್ಕೆ ಮಳೆ ಬೆಳೆ ಬಂದು ರೈತನಿಗೆ ಸುಭಿಕ್ಷೆಯಾಗಲಿ ಎಂಬ ಆಶಯದೊಂದಿಗೆ ಪೂಜೆ ಸಲ್ಲಿಸಿರುವುದಾಗಿ ತಿಳಿಸಿದರು. ಹವಾಮಾನ ವೈಪರೀತ್ಯದ ನಡುವೆ ರೈತ ಬೆಳೆ ತೆಗೆಯುತ್ತಿದ್ದಾನೆ. ಎಷ್ಟೋ ಸಂದರ್ಭಗಳಲ್ಲಿ ಉದ್ಯೋಗ ಕ್ಕಾಗಿ ವಲಸೆ ಹೋಗುವ ಸ್ಥಿತಿ ನಿರ್ವಣವಾಗಿದೆ. ರೈತರ ಆರ್ಥಿಕತೆ ಸುಧಾರಿಸುವುದರ ಜತೆಗೆ ಆತನ ಮಕ್ಕಳಿಗೆ ಪಿಯುಸಿಯಿಂದ ಪಿಜಿವರೆಗೆ ಸ್ಕಾಲರ್​ಷಿಪ್ ನೀಡಲು ಯೋಜನೆ ರೂಪಿಸಿದ್ದೇನೆ. ಮುಂದಿನ ತಿಂಗಳು ಪ್ರತಿ ಜಿಲ್ಲೆಯಿಂದ ಐವರು ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ಕರೆಯಿಸಿ ಯೋಜನೆ ಉದ್ಘಾಟಿಸುವುದಾಗಿ ತಿಳಿಸಿದರು.
ಪೊಲೀಸ್ ಗೌರವ ವಂದನೆಗೆ ಸಿಎಂ ಬೇಸರ:ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಣೆಗೆ ಮುನ್ನ ಹೆಲಿಕಾಪ್ಟರ್ ಮೂಲಕ ಬಂದಿಳಿದ ಸಿಎಂ ಬಸವರಾಜ ಬೊಮ್ಮಾಯಿ ಪೊಲೀಸ್ ಗೌರವ ವಂದನೆಗೆ ಸಿದ್ಧತೆ ಮಾಡಿಕೊಂಡಿದ್ದು ಕಂಡು ಬೇಸರ ವ್ಯಕ್ತಪಡಿಸಿದರು. ಪೊಲೀಸ್ ಗೌರವ ವಂದನೆ ಬೇಡವೆಂದು ತಿಳಿಸಿದ್ದರೂ ಇದೆಲ್ಲ ಬೇಕಿತ್ತಾ? ನಾನು ಸ್ಪಷ್ಟವಾಗಿ ತಿಳಿಸಿದ್ದೇನೆ, ಇದು ಸರಿಯಲ್ಲ ಎಂದು ಹಿರಿಯ ಅಧಿಕಾರಿಗಳ ಮೇಲೆ ಅಸಮಾಧಾನ ಹೊರಹಾಕಿದರು.
ಮಳೆಹಾನಿ ಸಮೀಕ್ಷೆಗೆ ಸೂಚನೆ:ನದಿಗಳ ಪ್ರವಾಹ ಮತ್ತು ಅತಿವೃಷ್ಟಿಯಿಂದ ಉಂಟಾಗಿರುವ ಮನೆ, ಬೆಳೆ ಹಾನಿ ಕುರಿತು ತಕ್ಷಣವೇ ಸಮೀಕ್ಷೆ ನಡೆಸಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, 2019ರಲ್ಲಿ ಸಂಭವಿಸಿದ್ದ ಪ್ರವಾಹ ಪರಿಹಾರ ವಿತರಣೆಯಲ್ಲಿ ಉಂಟಾದ ಲೋಪದೋಷಗಳು ಈ ಬಾರಿ ಮರುಕಳಿಸದಂತೆ ಎಚ್ಚರ ವಹಿಸುವಂತೆ ಹಾಗೂ ದಾಖಲೆಗಳು ಇಲ್ಲದಿರುವ ಮತ್ತು ಹೊಂದಿರುವ ಫಲಾನುಭವಿಗಳ ಪಟ್ಟಿ ಪ್ರತ್ಯೇಕವಾಗಿ ತಯಾರಿಸಲು ಸೂಚಿಸಲಾಗಿದೆ. ಬೆಳೆ ಹಾಗೂ ಮನೆಹಾನಿ ಸಮೀಕ್ಷೆ ಗೊಂದಲ ನಿವಾರಣೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎಷ್ಟು ಮನೆಗಳಿಗೆ ಹಾನಿ ಆಗಿದೆಯೆಂಬ ಕುರಿತು ಪಟ್ಟಿ ಸಿದ್ಧಪಡಿಸಲೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
350 ಕೋಟಿ ರೂ. ಬಿಡುಗಡೆ:ನೆರೆಹಾನಿಗೆ ಸಂಬಂಧಿಸಿದಂತೆ ಶುಕ್ರವಾರ ರಾತ್ರಿಯೇ ಎನ್​ಡಿಆರ್​ಎಫ್ ಅಡಿ 350 ಕೋಟಿ ರೂ. ಬಿಡುಗಡೆಯಾಗಿದೆ. ಶೀಘ್ರದಲ್ಲಿ ಪರಿಹಾರ ನೀಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಯುಕೆಪಿ ಹಂತ-3 ಅನುಷ್ಠಾನಕ್ಕೆ ಸಮಿತಿ
ಕೃಷ್ಣ ಮೇಲ್ದಂಡೆ ಯೋಜನೆ ಹಂತ-3 ಪೂರ್ಣ ಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ ನೀರಾವರಿ ಮಂತ್ರಿಯಾಗಿ ನಾನು ಕೆಲಸ ಮಾಡಿದ್ದರಿಂದ ಸಾಕಷ್ಟು ಅನುಭವ ಇದೆ. ಹೀಗಾಗಿ ಭೂಸ್ವಾಧೀನ, ಪುನರ್ವಸತಿ- ಪುನರ್ನಿರ್ವಣ ಕಾರ್ಯಕೈಗೊಳ್ಳಲು ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ ಪುನರ್ವಸತಿ ಹಾಗೂ ಪುನರ್​ನಿರ್ವಣಕ್ಕಾಗಿ 17,520 ಕೋಟಿ ರೂ. ಇದ್ದ ಯೋಜನಾ ವೆಚ್ಚ ಈಗ 57 ಸಾವಿರ ಕೋಟಿ ರೂ. ದಾಟಿ ಹೋಗಿದೆ. ಈ ವಿಷಯವಾಗಿ ಕೂಡಲೇ ಹೈಪವರ್ ಸಮಿತಿ ಸಭೆ ಕರೆಯಲಾಗುವುದು ಎಂದು ಆಲಮಟ್ಟಿಯಲ್ಲಿ ಬಾಗಿನ ಅರ್ಪಿಸಿದ ಬಳಿಕ ತಿಳಿಸಿದರು.
ಮಹಾರಾಷ್ಟ್ರ ಜತೆ ಜಂಟಿಯಾಗಿ ಹೋರಾಟ:ಯುಕೆಪಿ ಹಂತ-3 ಕ್ಕೆ ಸಂಬಂಧಿಸಿದಂತೆ ಕೆಲವು ತಾಂತ್ರಿಕ ಸಮಸ್ಯೆಗಳಿದ್ದು, ದೆಹಲಿಗೆ ಹೋಗಿ ಲೀಗಲ್ ಟೀಂ ಜತೆ ರ್ಚಚಿಸಿ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳು ಜಂಟಿಯಾಗಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಲಿವೆ ಎಂದರು. ಹಂತ 1 ಮತ್ತು 2 ರಲ್ಲಿ ವಿಸõತ ಯೋಜನೆಗಳಿವೆ. ಇದರಲ್ಲಿ ಹಲವು ಏತ ನೀರಾವರಿ ಯೋಜನೆಗಳಿವೆ. ಮುಂದಿನ ವಾರ ವರದಿ ನೀಡಲು ಸೂಚಿಸಲಾಗಿದೆ. 4-5 ಸಾವಿರ ಕೋಟಿ ರೂ. ಈ ಯೋಜನೆಗೆ ಬೇಕಾಗಲಿದ್ದು, 60:40 ರ ಅನುಪಾತದಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಸಹಯೋಗದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
ಅಭಿವೃದ್ಧಿಗೆ ಹಣ ಮಂಜೂರು:ನಾನು ನೀರಾವರಿ ಮಂತ್ರಿಯಾಗಿದ್ದಾಗ ಪುನರ್ವಸತಿ ಕೇಂದ್ರಗಳ ಅಭಿವೃದ್ಧಿಗೆ 200 ಕೋಟಿ ರೂ. ಬಿಡುಗಡೆ ಮಾಡಿದ್ದೆ. ಬಳಿಕ 197 ಕೋಟಿ ರೂ. ಬಿಡುಗಡೆಯಾಗಿದೆ. ಶೀಘ್ರದಲ್ಲಿ 100 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಪುನರ್ವಸತಿ ಕೇಂದ್ರಗಳ ಅಭಿವೃದ್ಧಿಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಬೊಮ್ಮಾಯಿ ಪ್ರತಿಕ್ರಿಯಿಸಿದರು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಿ ಯೋಜನೆ ರೂಪಿಸಲಾಗುವುದು. ಆರ್ ಆಂಡ್ ಆರ್​ಗೆ ಮೊದಲ ಆದ್ಯತೆ ನೀಡಲಾಗುವುದು. ಬಳಿಕ ಹಂತ ಹಂತವಾಗಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
‘ನೀವು ಯುವತಿ ಜತೆ ನಗ್ನವಾಗಿರುವ ವಿಡಿಯೋ ನನ್ನ ಬಳಿ ಇದೆ’ ಎಂದು ಬಿಜೆಪಿ ಮುಖಂಡನಿಗೆ ಬ್ಲ್ಯಾಕ್​ಮೇಲ್​ ಮಾಡಿದ ಅಪರಿಚಿತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
