ಬೆಂಗಳೂರು:ಗುಜರಾತ್​ನಲ್ಲಿ ನಿರೀಕ್ಷೆಗೂ ಮೀರಿ ಜಯಭೇರಿ ಬಾರಿಸಿದ ಬೆನ್ನಲ್ಲೇ ಬಿಜೆಪಿ ವರಿಷ್ಠರ ಚಿತ್ತ ಕರ್ನಾಟಕದತ್ತ ನೆಟ್ಟಿದೆ‌‌. ಈ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ಗೆ ರಾಷ್ಟ್ರೀಯ ಸ್ವಯಂ ಸೇವಕಸಂಘದ ಮತ್ತೊಬ್ಬ ಪ್ರಭಾವಿ ಪ್ರಮುಖ ಶುಕ್ರವಾರ ದಿಢೀರ್ ಭೇಟಿ ಮಾಡಿರುವುದು ಕುತೂಹಲ ಹೆಚ್ಚಿಸಿದೆ‌.
ಸಿಎಂ ಅಧಿಕೃತ ನಿವಾಸ ರೇಸ್ ವ್ಯೂ ಕಾಟೇಜ್ ಗೆ ಸಂಘದ ಸರಕಾರ್ಯವಾಹ ಮುಕುಂದ್ ಆಗಮಿಸಿ, ಗೌಪ್ಯ ಮಾತುಕತೆ ನಡೆಸಿದರು. ಇದರಿಂದಾಗಿ ಸರ್ಕಾರ ಮತ್ತು ಪಕ್ಷದ ಮಟ್ಟದಲ್ಲಿ ನಿಗೂಢ ಬೆಳವಣಿಗೆಗಳ ಬಗ್ಗೆ ಪಕ್ಷದೊಳಗೆ ತರ್ಕ ಹುಟ್ಟಿಹಾಕಿದೆ.
ಗುಜರಾತ್ ಫಲಿತಾಂಶ ಪ್ರಕಟಣೆಗೆ ಮುನ್ನ ಬೊಮ್ಮಾಯಿ‌ ಅವರನ್ನು ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಫಲಿತಾಂಶ ಹೊರಬಿದ್ದ ನಂತರ ಮುಕುಂದ್ ಭೇಟಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ‌.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಮತ್ತೊಮ್ಮೆ ಗೆಲ್ಲಲೇಬೇಕು ಎಂದು ವರಿಷ್ಠರು ಪಣ ತೊಟ್ಟಿದ್ದು, ಇದಕ್ಕೆ ಪೂರಕವಾಗಿ ಸಂಘದ ಪ್ರಮುಖರು ನೇರ ಸಿಎಂ ಜತೆಗೆ ಚರ್ಚಿಸಿ ನೀಲನಕ್ಷೆಗೆ ನೆರವಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ‌.
ಸರ್ಕಾರ, ಪಕ್ಷ ಹಾಗೂ ಸಂಘದ ನಡುವೆ ಸಮನ್ವಯ ಸಾಧಿಸುವ ಜವಾಬ್ದಾರಿಯು ಕರ್ನಾಟಕದಲ್ಲಿ ಮುಕುಂದ್ ಅವರ ಹೆಗಲ ಮೇಲಿದ್ದು, ಕಾಲಕಾಲಕ್ಕೆ ಸಂಘದ ಕಚೇರಿಯಲ್ಲಿ ಮಾತುಕತೆ ನಡೆಸಿದ್ದಿದೆ. ಇದೀಗ ಹೊಸಬಾಳೆ ಹಾದಿಯಲ್ಲಿ ಸಾಗಿದ ಮುಕುಂದ್ ಅವರು ಬೊಮ್ಮಾಯಿ‌ ಜತೆಗೆ ಚರ್ಚಿಸಿದ್ದು, ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಕನ್ನಡ ಚಿತ್ರರಂಗದಿಂದ ನಿಷೇಧ ವದಂತಿ: ಖಡಕ್​ ಪ್ರತಿಕ್ರಿಯೆ ನೀಡಿದ ನಟಿ ರಶ್ಮಿಕಾ ಮಂದಣ್ಣ

ಯುವಕರಿಗೆ ಸ್ಫೂರ್ತಿಯಾಗಿದ್ದ ಐಪಿಎಸ್​ ಅಧಿಕಾರಿ ಅಮಿತ್​ ಲೋಧಾ ವಿರುದ್ಧ ಭ್ರಷ್ಟಾಚಾರ ಆರೋಪ: FIR ದಾಖಲು

ಯುವ ಮನಸ್ಸುಗಳಿಗೆ ವಿಜಯಾನಂದ ಸಿನಿಮಾ ಸ್ಫೂರ್ತಿ ನೀಡುವುದಂತೂ ಖಂಡಿತ: ನಟಿ ಆಶಿಕಾ ರಂಗನಾಥ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 1 =
Remember me
