ಬೆಂಗಳೂರು:ರಾಜ್ಯದಲ್ಲಿ ವಿವಿಧ 25 ಕಂಪನಿಗಳ 65,000 ಕೋಟಿ ರೂಪಾಯಿಗೂ ಹೆಚ್ಚು ಬಂಡವಾಳ ಹೂಡಿಕೆ ಯೋಜನೆಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇನ್ನೂ 50 ಸಾವಿರ ಕೋಟಿ ರೂ. ಹೂಡಿಕೆಗೆ ವಿವಿಧ ಕಂಪನಿಗಳ ಜತೆ ಚರ್ಚೆ ನಡೆದಿದೆ. ಇದರಿಂದ ದಾವೋಸ್​ನಲ್ಲಿ ನಡೆದ ವಿಶ್ವ ಆಥಿರ್ಕ ಶೃಂಗ ಸಭೆ ಲಪ್ರದವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಶುಕ್ರವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕರೊನಾ ಕಾರಣಕ್ಕೆ ಎರಡು ವರ್ಷಗಳ ಬಳಿಕ ದಾವೋಸ್​ನಲ್ಲಿ ಆಯೋಜಿಸಿದ್ದ ಜಾಗತಿಕ ಆಥಿರ್ಕ ಸಮ್ಮೇಳನದಲ್ಲಿ ಉದ್ಯಮಪತಿಗಳು, ಹೂಡಿಕೆದಾರರಿಗೆ ಕರ್ನಾಟಕವೇ ಪ್ರಮುಖ ಆಕರ್ಷಣೆ ತಾಣವಾಗಿತ್ತು. ಉತ್ಸುಕತೆ ತೋರಿದ ವಿವಿಧ ಕಂಪನಿಗಳ ಮುಖ್ಯಸ್ಥರು, ಹೂಡಿಕೆದಾರರು ಮತ್ತು ಅನಿವಾಸಿ ಭಾರತೀಯರೊಂದಿಗೆ ವಿಸತ ಮಾತುಕತೆ ನಡೆಸಿದ್ದು, ನೀತಿ&ನಿರ್ಧಾರ ಹಾಗೂ 50&60 ಸಾವಿರ ಎಕರೆ ಭೂಮಿ ಲಭ್ಯತೆ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು.
ಯೋಜನಾ ಒಪ್ಪಂದಗಳಿಂದಾಗಿ ಇಟಾಚಿರ್ ಎನಜಿರ್ ಕಂಪನಿಯು 2,000 ಇಂಜಿನಿಯರ್​ಗಳನ್ನು ನೇಮಕ ಮಾಡಿಕೊಳ್ಳಲಿದ್ದರೆ, ಸೀಮೆನ್ಸ್​ ಹೆಲ್ತ್​ಕೇರ್​ ಸಂಸ್ಥೆ ಹೊಸದಾಗಿ 2,500 ಇಂಜಿನಿಯರ್​ಗಳಿಗೆ ಅವಕಾಶ ನೀಡಲಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಎಲ್ಲ ಭಾಗಗಳಿಗೆ ಆದ್ಯತೆ ನೀಡಿದ್ದು, ಆಸಕ್ತ ಕಂಪನಿಗಳಿಗೆ ಪ್ರೋತ್ಸಾಹಕ ಭರವಸೆ ನೀಡಲಾಗಿದೆ. ಸ್ತ್ರೀಶಕ್ತಿ ಸ್ವಹಾಯ ಗುಂಪುಗಳಿಗೆಂದು ರಾಜ್ಯ ಸರ್ಕಾರ ಸ್ಥಾಪಿಸಲು ಉದ್ದೇಶಿತ ಬ್ಯಾಂಕ್​ಗೆ ಆ್ಯಂಕರ್​ ಬ್ಯಾಂಕ್​ ಆಗಲು ಆಕ್ಸಿಸ್​ ಬ್ಯಾಂಕ್​ ಮುಖ್ಯಸ್ಥರಿಗೆ ಆಹ್ವಾನ ನೀಡಿದ್ದು, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಿಎಸ್​ಆರ್​ ನಿಧಿ ವಿನಿಯೋಗಿಸಲು ಆ್ಯಕ್ಸಿಸ್​ ಬ್ಯಾಂಕ್​ ಮುಂದೆ ಬಂದಿದೆ ಎಂದು ಬೊಮ್ಮಾಯಿ ವಿವರಿಸಿದರು.
ಆರು ತಿಂಗಳಲ್ಲಿ ಮಂಜೂರು: ರಾಜ್ಯದಲ್ಲಿ ಲಭ್ಯ ತಂತ್ರಜ್ಞಾನ, ನುರಿತ ಮಾನವ ಸಂಪನ್ಮೂಲ, ಉತ್ತಮ ವಾತಾವರಣ, ಹೂಡಿಕೆ ಮತ್ತು ಉದ್ಯಮಸ್ನೇಹಿ ನೀತಿಗಳ ಕಾರಣ 25 ಕಂಪನಿಗಳು ಒಪ್ಪಂದ ಮಾಡಿಕೊಂಡಿವೆ. ಪ್ರಸ್ತಾವಿತ ಯೋಜನೆಗಳಿಗೆ ಆರು ತಿಂಗಳೊಳಗೆ ಅಗತ್ಯ ಮಂಜೂರಾತಿ ಒದಗಿಸಿ, ಒಂದು ವರ್ಷದಲ್ಲಿ ಅನುಷ್ಠಾನಕ್ಕೆ ತರಲು ಕ್ರಮವಹಿಸಲಾಗುವುದು. ಜಮೀನು, ಮೂಲ ಸವಲತ್ತು ಜತೆಗೆ ವ್ಯವಸ್ಥೆ ಸರಳೀಕರಣಕ್ಕೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಕೋಮು ಸಾಮರಸ್ಯಕ್ಕೆ ಧಕ್ಕೆ ಇಲ್ಲ
ರಾಜ್ಯದಲ್ಲಿ ಕೋಮು ಸಂರ್ಷದ ವಾತಾವರಣವಿಲ್ಲ, ಸಾಮರಸ್ಯಕ್ಕೂ ಧಕ್ಕೆಯಾಗಿಲ್ಲ. ಕೋಮು ವೈಷಮ್ಯದಿಂದಾಗಿ ಬಂಡವಾಳ, ಉದ್ಯಮಿಗಳು ಬರುತ್ತಿಲ್ಲವೆಂಬ ಪ್ರತಿಪಕ್ಷಗಳ ಆರೋಪಗಳಲ್ಲಿ ಹುರುಳಿಲ್ಲ ಎಂದು ಬೊಮ್ಮಾಯಿ ತಳ್ಳಿ ಹಾಕಿದರು. ವಿದೇಶಿ ನೇರ ಬಂಡವಾಳ ಆಕರ್ಷಣೆಯಲ್ಲಿ ರಾಜ್ಯವೇ ಮುಂಚೂಣಿಯಲ್ಲಿದೆ. ದಾವೋಸ್​ನಲ್ಲಿ ಒಪ್ಪಂದಗಳು, ಹಲವು ಪ್ರತಿಷ್ಠಿತ ಕಂಪನಿಗಳು ವ್ಯಕ್ತಪಡಿಸಿದ ಆಸಕ್ತಿ ನಿದರ್ಶನವಾಗಿದೆ. ರಾಜ್ಯವು ಯಾವುದೇ ನಷ್ಟ ಮಾಡಿಕೊಳ್ಳದು, ಹಾಗೆ ಆಗಲು ಸರ್ಕಾರ ಬಿಡುವುದಿಲ್ಲ ಎಂದರು.
ಅಸ್ಥಿರತೆ ಪ್ರಶ್ನೆಯೇ ಇಲ್ಲರಾಜ್ಯ ಸರ್ಕಾರದ ಅಸ್ಥಿರತೆಯ ಪ್ರಶ್ನೆಯೇ ಉದ್ಭವಿಸಿಲ್ಲ. ದಾವೋಸ್​ ಶೃಂಗ ಸಭೆಯಲ್ಲಿ ಈ ಕುರಿತು ಪ್ರಸ್ತಾಪ ಅಥವಾ ಚರ್ಚೆಯಾಗಿಲ್ಲ. ಉದ್ಯಮಿ ಲಕ್ಷಿ$್ಮ ಮಿತ್ತಲ್​ ಔಪಚಾರಿಕವಾಗಿ ಮಾತುಕತೆ ವೇಳೆ ಸರ್ಕಾರದ ಸ್ಥಿರತೆ ಬಗ್ಗೆ ಪ್ರಾಸಂಗಿಕವಾಗಿ ಪ್ರಸ್ತಾಪಿಸಿದ್ದಾರಷ್ಟೇ ಎಂದು ಸಿಎಂ ಸಮಜಾಯಿಷಿ ನೀಡಿದರು.
ಹತ್ತಾರು ಕಂಪನಿ ಆಸಕ್ತಿ
ಸೆಮಿಕಂಡಕ್ಟರ್​, ಮೆಗಾ ಡೇಟಾ ಸೆಂಟರ್​, ಸೌರ&ಪವನ ವಿದ್ಯುತ್​ ಉತ್ಪಾದನೆ, ಶೇಖರಣೆ, ಸಲಕಣೆಗಳ ತಯಾರಿಕೆ, ವಿದ್ಯುತ್​ಚಾಲಿತ ಕೇಂದ್ರಗಳ ಸ್ಥಾಪನೆ, ಆಧುನಿಕ ವೈದ್ಯಕಿಯ ಉಪಕರಣಗಳು ಸೇರಿ ಹಲವಾರು ಕ್ಷೇತ್ರಗಳಲ್ಲಿ ಅದಾನಿ ಗ್ರೂಪ್​, ಅಮೆರಿಕ ಇಂಡಿಯಾಸ್ಪೋರಾ, ಜಪಾನ್​ನ ಹಿಟಾಚಿ, ದಾಲ್ಮಿಯಾ ಸಿಮೆಂಟ್ಸ್​, ಜಾನ್ಸನ್​ ಕಂಟ್ರೋಲ್ಸ್​, ಹನಿವೆಲ್​, ಭಾತಿರ್ ಎಂಟರ್​ಪೆಸಸ್​, ಐಬಿಎಂ ಮುಂತಾದ ಹತ್ತಾರು ಕಂಪನಗಳು ಬಂಡವಾಳ ಹೂಡಿಕೆ, ಉದ್ಯಮ ನೆಲೆಗೊಳಿಸಲು ಆಸಕ್ತಿ ತೋರಿಸಿವೆ ಎಂದು ಬೊಮ್ಮಾಯಿ ವಿವರಿಸಿದರು.
ವಿಶೇಷ ವಿಮಾನದಲ್ಲಿ ಹೋಗಿ ಬಂದ ಆಂಧ್ರಪ್ರದೇಶ ತಂಡಬೆಂಗಳೂರು: ದಾವೋಸ್​ನಲ್ಲಿ ನಡೆದ ವಿಶ್ವ ಆಥಿರ್ಕ ಶೃಂಗ ಸಭೆಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡು ವಿಮಾನ ಬದಲಾವಣೆ ಮಾಡಿಕೊಂಡು ಹೋಗಿಬಂದರೆ, ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್​ಮೋಹನ್​ ರೆಡ್ಡಿ ವಿಶೇಷ ವಿಮಾನದಲ್ಲಿ ತಮ್ಮ ತಂಡದ ಜತೆಗೆ ಹೋಗಿ ಬಂದಿದ್ದಾರೆ. ಬಸವರಾಜ ಬೊಮ್ಮಾಯಿ ತಾವು ಮೊದಲಿನಂದಲೂ ಪ್ರತಿಪಾದಿಸುವಂತೆ ವೆಚ್ಚ ಮಿತಿಗೆ ಮುಂದಾಗಿದ್ದರು. ಆದರೆ ರಾಜ್ಯ ಬಂಡವಾಳ ಆಕರ್ಷಣೆಯಲ್ಲಿ ಮಾತ್ರ ಹಿಂದೆ ಉಳಿದಿಲ್ಲ. ಬೆಂಗಳೂರಿನಿಂದ ದುಬೈ, ಅಲ್ಲಿಂದ ಜೂರಿಚ್ಗೆ ವಿಮಾನದಲ್ಲಿ ಪ್ರಯಾಣ, ಅಲ್ಲಿಂದ ರಸ್ತೆ ಮೂಲಕ 3 ಗಂಟೆಗಳ ಪ್ರಯಾಣ ಮಾಡಿ ದಾವೋಸ್​ಗೆ ತಲುಪಿದ್ದರು. ಅದೇ ಮಾರ್ಗದಲ್ಲಿಯೇ ವಾಪಸ್​ ಬಂದಿದ್ದಾರೆ. ಜಗನ್​ ಮೋಹನ್​ ರೆಡ್ಡಿ ತಮ್ಮ ಪತ್ನಿ ಭಾರತಿ, ಸಚಿವರು ಹಾಗೂ ಅಧಿಕಾರಿಗಳು ಸೇರಿ ಒಟ್ಟು 17 ಮಂದಿ ವಿಶೇಷ ವಿಮಾನದಲ್ಲಿ ದಾವೋಸ್​ಗೆ ಹೋಗಿ ಬಂದಿದ್ದಾರೆ. ಆಂಧ್ರಪ್ರದೇಶ ಸರ್ಕಾರ ಹೇಳಿಕೊಂಡಿರುವಂತೆ 1.25 ಲಕ್ಷ ಕೋಟಿ ರೂ.ಗಳ ಬಂಡವಾಳ ಹೂಡಿಕೆ ಬರಲಿದೆಯಂತೆ. ಅದಕ್ಕೆ ಪ್ರತಿಯಾಗಿ ಬಸವರಾಜ ಬೊಮ್ಮಾಯಿ ನಮ್ಮ ರಾಜ್ಯಕ್ಕೂ ಆಂಧ್ರಪ್ರದೇಶದಷ್ಟೇ ಬಂಡವಾಳ ಬರುತ್ತದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
ಆಂಧ್ರಪ್ರದೇಶಕ್ಕೆ ಸಮಬಲಆಂಧ್ರಪ್ರದೇಶದ ನೀತಿಗಳ ಬಗ್ಗೆ ಲಕ್ಷಿ$್ಮ ಮಿತ್ತಲ್​ ಪ್ರಶಂಸೆ ವ್ಯಕ್ತಪಡಿಸಿದರು. ಕರ್ನಾಟಕದ ಪ್ರಮುಖ ನೀತಿ&ನಿರ್ಧಾರ ಬಗ್ಗೆ ಮಾಹಿತಿಯಿಲ್ಲದ ಕಾರಣಕ್ಕೆ ಪ್ರಸ್ತಾಪಿಸಿಲ್ಲ. ಸುಗಮ ವ್ಯವಹಾರ, ಉದ್ಯಮಗಳಿಗೆ ತ್ವರಿತ ಭೂಮಿ ಮಂಜೂರು, ಆಡಳಿತಾತ್ಮಕ ಅನುಮೋದನೆಗೆ ಏಕಗವಾ ವ್ಯವಸ್ಥೆ ಮಾಡಿದ್ದರ ಬಗ್ಗೆ ವಿವರಿಸಿದಾಗ ಮಿತ್ತಲ್​ ಹರ್ಷ ವ್ಯಕ್ತಪಡಿಸಿ, ಸ್ವಾಗತಿಸಿದರು ಎಂದು ಬೊಮ್ಮಾಯಿ ತಿಳಿಸಿದರು. ಬಂಡವಾಳ ಹೂಡಿಕೆ ಒಪ್ಪಂದಗಳ ಮೊತ್ತವನ್ನು ಮಾತ್ರ ಉಲ್ಲೇಖಿಸಿರುವೆ. ಒಡಂಬಡಿಕೆ, ಆಸಕ್ತಿ ವ್ಯಕ್ತಗೊಳಿಸಿದ ಬಂಡವಾಳ ಪ್ರಮಾಣವನ್ನು ಸೇರಿಸಿದರೆ ಒಂದು ಲಕ್ಷ ಕೋಟಿ ರೂ. ದಾಟಲಿದ್ದು, ಆಂಧ್ರಪ್ರದೇಶ ಲೆಕ್ಕದ ಪ್ರಕಾರ ಕರ್ನಾಟಕ ಸಮಬಲ ಸಾಧಿಸಿದೆ ಎಂದು ಸಮಥಿರ್ಸಿಕೊಂಡರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + ten =
Remember me
