ಮೈಸೂರು:ಬೇಸಾಯ ಸಂಸ್ಕೃತಿಗೆ ಸಾಕ್ಷಿಯಾಗಲು ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದೆ. ಕನ್ನಡದ ನಂ. 1 ದಿನಪತ್ರಿಕೆ “ವಿಜಯವಾಣಿ’ ಹಾಗೂ “ದಿಗ್ವಿಜಯ’ ಸುದ್ದಿವಾಹಿನಿ ಆಯೋಜಿಸಿರುವ ಮೂರು ದಿನಗಳ “ರಾಜ್ಯಮಟ್ಟದ ಕೃಷಿ ಮೇಳ’ವನ್ನು ಇದೀಗ (ಜ.27) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದು ಅರಮನೆ ನಗರಿಯಲ್ಲಿ ಕೃಷಿ ಸಂಸ್ಕೃತಿ ಅನಾವರಣಗೊಳಿಸಲಿದ್ದಾರೆ.
ಈ ಬಾರಿ ರಾಜ್ಯ ಸರ್ಕಾರದ ಸಹಕಾರ ಮತ್ತು ಮೈಸೂರು ವಿಶ್ವವಿದ್ಯಾಲಯ ಸಹಯೋಗದಲ್ಲಿ ನಗರದ ಮಹಾರಾಜ ಕಾಲೇಜು ಮೈದಾನ ಭಾನುವಾರದವರೆಗೆ ನಡೆಯುವ ಮೇಳದಲ್ಲಿ 120 ಮಳಿಗೆಗಳನ್ನು ತೆರೆಯಲಾಗಿದೆ. ಸಮಗ್ರ ಕೃಷಿ, ಸಾವಯವ ಕೃಷಿ, ಆಧುನಿಕ ಬೇಸಾಯ, ಉತ್ತಮ ಬಿತ್ತನೆ ಬೀಜಗಳು, ಕೃಷಿ ಅನ್ವೇಷಣೆ ಇನ್ನಿತರ ಮಾಹಿತಿ ಸಿಗಲಿವೆ. ಬೀಜೋತ್ಪಾದನೆ, ಬೀಜ ಪೂರೈಕೆ ಮಾಡುವ ಪ್ರತಿನಿಧಿಗಳ ಸಮಾಗಮವೂ ಆಗಲಿದೆ. ಇದರೊಂದಿಗೆ ಕೃಷಿಯ ಸಂಕಷ್ಟಗಳ ಕುರಿತು ವಿಚಾರ ಮಂಥನವಾಗಲಿದೆ.
ಕಂಸಾಳೆ, ವೀರಗಾಸೆ, ಸುಗ್ಗಿ ಕುಣಿತ, ಕೊಡವ ಸಾಂಸ್ಕೃತಿಕ ನೃತ್ಯ, ಗೀತಾ ಗಾಯನ, ಚಂಡೆ ವಾದನ, ಸುಗಮ ಸಂಗೀತ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳಕ್ಕೆ ಇನ್ನಷ್ಟು ಕಳೆ ತರಲಿವೆ. ರೈತರಿಗೆ ಅನುಕೂಲವಾಗುವ ಮಾಹಿತಿಗಳು ಮೇಳದಲ್ಲಿ ಲಭ್ಯವಿದೆ. 50ಕ್ಕೂ ಮಳಿಗೆಗಳಲ್ಲಿ ತನ್ನ ಪ್ರದರ್ಶಿಸಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 14 =
Remember me
