ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಪಕ್ಷಗಳ ನಾಯಕರು ಅಬ್ಬರದ ಪ್ರಚಾರದಲ್ಲಿ ಮುಳುಗಿದ್ಧಾರೆ.
ಇನ್ನು ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಒಂದು ಹೆಜ್ಜೆ ಮುಂದಿಟ್ಟಿದ್ದು ಮ್ಯಾರಥಾನ್ ಕ್ಯಾಂಪೇನ್ ಮಾಡಲು ಮುಂದಾಗಿದ್ಧಾರೆ.
ಏಪ್ರಿಲ್​ 23ರಂದು ಬಸವ ಜಯಂತಿ ಪ್ರಯುಕ್ತ‘ಜಯವಾಹಿನಿ’ಹೆಸರಿನಲ್ಲಿ ಯಾತ್ರೆ ಆರಂಭವಾಗಲಿದ್ದು ಮೇ 7ರವರೆಗೆ ಮ್ಯಾರಥಅನ್ ಕ್ಯಾಂಪೇನ್​ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಇದಕ್ಕಾಗಿ ವಿಶೇಷ ಬಸ್​ ಒಂದನ್ನು ತಯಾರಿ ಮಾಡಿಸಿರುವ ಸಿಎಂ ಟೀಂ ಭರ್ಜರಿ ಪ್ರಚಾರ ಕಾರ್ಯಕ್ಕರ ಮುನ್ನುಡಿ ಹಾಡಲಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಇದು ನನ್ನ ವೃತ್ತಿ ಜೀವನದ ಕೊನೆ ಹಂತ; ನಿವೃತ್ತಿ ಸುಳಿವು ನೀಡಿದ ಎಂಎಸ್​ಡಿ
ಜನವಾಹಿನಿ ಯಾತ್ರೆಯ ಅಂಗವಾಗಿ ಏಪ್ರಿಲ್​ 23 ಭಾನುವಾರದಂದು ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ 11 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಯಲಹಂಕ, ದೊಡ್ಡಬಳ್ಳಾಪುರ, ನೆಲಮಂಗಲ, ತುಮಕೂರು ‌ಗ್ರಾಮಾಂತರ, ತುಮಕೂರು ನಗರ, ಗುಬ್ಬಿ , ತಿಪಟೂರು, ಅರಸೀಕೆರೆ, ಕಡೂರು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಜನವಾಹಿನಿ ಯಾತ್ರೆ ಸಾಗಲಿದೆ ಎಂದು ವರದಿಯಾಗಿದೆ.
ಯಲಹಂಕ – 17 ಕಿಮೀ ರೋಡ್ ಶೋ + ಸಾರ್ವಜನಿಕ ಸಭೆ, ದೊಡ್ಡಬಳ್ಳಾಪುರ – 27 ಕಿಮೀ ರೋಡ್ ಶೋ + ಸಾರ್ವಜನಿಕ ಸಭೆ, ನೆಲಮಂಗಲ – 31 ಕಿಮೀ ರೋಡ್ ಶೋ + ಸಾರ್ವಜನಿಕ ಸಭೆ, ದಾಬಸಪೇಟೆ – 22 ಕಿಮೀ ರೋಡ್ ಶೋ + ಸಾರ್ವಜನಿಕ ಸಭೆ, ತುಮಕೂರು ಗ್ರಾ. ಗೊಳೂರು – 25 ಕಿಮೀ ರೋಡ್ ಶೋ, ತುಮಕೂರು ನಗರ – 6 ಕಿಮೀ ರೋಡ್ ಶೋ + ಸಾರ್ವಜನಿಕ ಸಭೆ, ಗುಬ್ಬಿ – 20 ಕಿಮೀ ರೋಡ್ ಶೋ + ಸಾರ್ವಜನಿಕ ಸಭೆ, ಕೆ.ಬಿ ಕ್ರಾಸ್ – 33 ಕಿಮೀ ರೋಡ್ ಶೋ + ಸಾರ್ವಜನಿಕ ಸಭೆ, ತಿಪಟೂರು – 21 ಕಿಮೀ ರೋಡ್ ಶೋ + ಸಾರ್ವಜನಿಕ ಸಭೆ, ಅರಸಿಕೇರೆ – 27 ಕಿಮೀ ರೋಡ್ ಶೋ + ಸಾರ್ವಜನಿಕ ಸಭೆ, ಬಾಣವರ – 15 ಕಿಮೀ ರೋಡ್ ಶೋ, ಕಡೂರು – 23 ಕಿಮೀ ರೋಡ್ ಶೋ ಮತ್ತು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಸಿಎಂ ಬಸವರಾಜ್​ ಬೊಮ್ಮಾಯಿ ಮಾತನಾಡಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
