ಬೆಂಗಳೂರು:ಮೈಸೂರು-ಬೆಂಗಳೂರು ದಶಪಥ ಇದೀಗ ಕ್ರೆಡಿಟ್​ ವಾರ್​ಗೆ ವೇದಿಕೆಯಾಗಿ ಪರಿಣಮಿಸಿದ್ದು, ಎಲ್ಲ ಪಕ್ಷಗಳವರೂ ರಸ್ತೆಗೆ ಕಾರಣ ನಾವು ಎಂದು ಕ್ರೆಡಿಟ್​ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಈ ಮಧ್ಯೆ ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಕ್ರೆಡಿಟ್ ಯಾರಿಗೆ ಸಲ್ಲಬೇಕು ಎಂಬುದನ್ನೂ ಹೇಳಿದ್ದಾರೆ.
ಇದನ್ನೂ ಓದಿ:ಸದ್ಯಕ್ಕಿಲ್ಲ 5 ಮತ್ತು 8ನೇ ತರಗತಿ ಪರೀಕ್ಷೆ; ಮುಂದೂಡುವುದಾಗಿ ಹೇಳಿದ ಸರ್ಕಾರ
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ 2014ರಲ್ಲಿ ಘೋಷಣೆ ಆಗಿ, ಡಿಪಿಆರ್​ ಕೂಡ ಆಯಿತು. ಅದು ಅಲೈನ್ಮೆಂಟ್ ಆಗಿದ್ದು 2015ರಲ್ಲಿ ಆಗ ಎನ್​ಡಿಎ ಸರ್ಕಾರವಿತ್ತು‌. ಬೆಂಗಳೂರು-ಮೈಸೂರು ಹೈವೇ 2016ರಲ್ಲಿ ನ್ಯಾಷನಲ್ ಹೈವೇ ಅಥಾರಿಟಿಗೆ ಹ್ಯಾಂಡ್ ಓವರ್ ಆಯ್ತು‌. ಆಗಲೂ ಎನ್​ಡಿಎ ಸರ್ಕಾರವಿತ್ತು‌. ಆಮೇಲೆ ಟೆಂಡರ್ ಪ್ರಕ್ರಿಯೆ ಮುಗಿದು ಹಣ ಬಿಡುಗಡೆ ಕೂಡ ಆಗಿ, 2023ರಲ್ಲಿ ದಶಪಥ ನಿರ್ಮಾಣ ಕೂಡ ಮುಗಿದಿದೆ ಎಂದು ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:ಈ ಸಮಯದಲ್ಲಿ ಮಲಗಿದರೆ ಹೃದಯಾಘಾತ ಸಾಧ್ಯತೆ ಕಡಿಮೆ ಅಂತೆ; ಅಧ್ಯಯನದಲ್ಲಿ ಬಯಲಾಯಿತು ಹೃದಯದ ಆರೋಗ್ಯ ಮಾಹಿತಿ
ಸಂಪೂರ್ಣ ಎನ್​​ಡಿಎ ಅವಧಿಯಲ್ಲೇ ಈ ಯೋಜನೆ ಆಗಿದ್ದು, ಮೋದಿಯವರ ನೇತೃತ್ವದಲ್ಲಿ ಈ ಯೋಜನೆಯಾಗಿದೆ. ಜನರಿಗೆ ಮಾಹಿತಿ ಕೊಡಬೇಕು ಅಂತ ನಾನು ಕೊಟ್ಟಿದ್ದೇನೆ. ಈ ಮಧ್ಯೆ ನೈಸ್ ರೋಡ್ ಮಾಡ್ತೀವಿ ಅಂತ ನಿಲ್ಲಿಸಿದ್ದರು, ನೈಸ್ ರೋಡ್ ಸಹ ಬರಲಿಲ್ಲ ಇದು ಆಗಲಿಲ್ಲ. ಆಗ ವಾಹನ ದಟ್ಟಣೆ ಜಾಸ್ತಿ ಆಯ್ತು ಅಂತ ಮೋದಿ ನೇತೃತ್ವದ ಸರ್ಕಾರ ಈ ಯೋಜನೆ ಮುಗಿಸಿದಿದೆ. ಯಾರಿಗೆ ಕ್ರೆಡಿಟ್ ಎನ್ನುವುದನ್ನು ಜನರು ತೀರ್ಮಾನ ಮಾಡಲಿ, ಮೋದಿ ನೇತೃತ್ವದ ಸರ್ಕಾರ ತಾನೇ ಹಣ ಬಿಡುಗಡೆ ಮಾಡಿ ಯೋಜನೆ ಮುಗಿಸಿದ್ದು. ಮೋದಿ ಸರ್ಕಾರವೇ ಈ ಯೋಜನೆ ಮಾಡಿದ್ದು ಅಂತ ಜನರಿಗೂ ಗೊತ್ತಾಗಿದೆ ಅಂತ ನಾನು ಭಾವಿಸುತ್ತೇನೆ. ಇದರ ಸಂಪೂರ್ಣ ಕ್ರೆಡಿಟ್ ನರೇಂದ್ರ ಮೋದಿ ಅವರಿಗೇ ಎಂದು ಸಿಎಂ ಹೇಳಿದರು.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:9 − 5 =
Remember me
