ಹಾವೇರಿ:ಸುಪ್ರೀಂ ಕೋರ್ಟ್ ಆದೇಶವನ್ನು ಯಾವ ರೀತಿ ತಿರುಚಬಹುದು ಎನ್ನುವುದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರಗತ ಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಕಿಡಿಕಾರಿದ್ದಾರೆ.
ಮೀಸಲಾತಿ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಶಿಗ್ಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ‌, ಸುಪ್ರೀಂ ಕೋರ್ಟ್ ಯಾವುದೇ ತಡೆಯಾಜ್ಞೆ ನೀಡಿಲ್ಲ. ನಾವು ಹೊರಡಿಸಿರುವ ಆಜ್ಞೆ ಇನ್ನೂ ಊರ್ಜಿತವಾಗಿದೆ ಎಂದು ಹೇಳಿದ್ದಾರೆ.
ಕೋರ್ಟ್ ಪ್ರಕ್ರಿಯೆ ನಡೆಯುವಾಗ ವಿಚಾರಣೆ ಅಗುವರೆಗೂ ಅನುಷ್ಟಾನ ಮಾಡುವುದಿಲ್ಲ. ಇದೊಂದು ಸಂಪ್ರದಾಯ. ಮಹದಾಯಿ ವಿಚಾರದಲ್ಲಿ ಕೂಡ ಹೀಗೆ ಆಗಿತ್ತು. ಕೋರ್ಟ್ನಲ್ಲಿ ಮುಂದಿನ ವಿಚಾರಣೆ ನಡೆಯುವವರೆಗೆ ಅದನ್ನು ಅನುಷ್ಠಾನ ಮಾಡುವುದಿಲ್ಲ ಎಂಬುದು ಸರ್ಕಾರದ ಸ್ವಯಂ ಹೇಳಿಕೆ ಆಗಿರುತ್ತದೆ. ಇದನ್ನು ಕೋರ್ಟ್ ತಡೆ ನೀಡಿದೆ ಎಂದು ಬಿಂಬಿಸುವಂತಹ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ‌. ಸತ್ಯದ ಮೇಲೆ ಹೊಡೆಯುವ ರೀತಿಯಲ್ಲಿ ಸುಳ್ಳು ಹೇಳಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
“ಮಲ್ಲಿಕಾರ್ಜುನ ಖರ್ಗೆ ಅವರೇ, ನೀವು ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ನಿಮಗೆ ಮಾಡಲು ಆಗಲಿಲ್ಲ. ಆಂತರಿಕ ಮೀಸಲಾತಿ ಕೊಡಲು ಮನಸ್ಸು ಇರಲಿಲ್ಲ. ನಿಮ್ಮ ಪಕ್ಷ, ನಿಮ್ಮ ಸ್ನೇಹಿತರು ಸುಪ್ರೀಂ ಕೋರ್ಟ್ ಗೆ ಹೋಗಿ ಬಂಜಾರ್, ಭೋವಿ ಸಮಾಜವನ್ನು ಎಸ್ಸಿ, ಎಸ್ಟಿಯಿಂದ ತೆಗೆಯಲು ಹಿಂಬಾಗಿಲಿನಿಂದ ಹುನ್ನಾರ ಮಾಡಿದ್ದು ಕರ್ನಾಟಕದ ಜನತೆಗೆ ಗೊತ್ತಿದೆ” ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ಬಹುಮಹಡಿ ಕಟ್ಟಡದಿಂದ ಜಿಗಿದು ಪ್ರಾಣ ಬಿಟ್ಟ NEET ಪರೀಕ್ಷಾರ್ಥಿ!
ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ, ಆಂತರಿಕ ಮೀಸಲಾತಿ ವಿಚಾರ ಕೋರ್ಟ್ ಗೆ ಬಂದಿಲ್ಲ.‌ ಹಿಂದುಳಿದ ಸಮಾಜದೊಂದಿಗೆ ಸೇರಿಸಿ ಮಲ್ಲಿಕಾರ್ಜುನ ಖರ್ಗೆ ಮಾತನಾಡುವುದು ಶೋಭೆ ತರುವುದಿಲ್ಲ. ನಾವು ಏನು ಮಾತನಾಡಿದ್ದೇವೆ, ಆ ರೀತಿ ನಡೆದುಕೊಂಡಿದ್ದೇವೆ. ಸಹಜವಾಗಿ ಇಂತಹ ವಿಚಾರದಲ್ಲಿ ಕೋರ್ಟ್ ನಲ್ಲಿ ವಿಚಾರಣೆ ಆಗುತ್ತದೆ. ಅದಕ್ಕೆ ಸಂವಿಧಾನ್ಮಕವಾಗಿ, ಕಾನೂನಾತ್ಮಕವಾಗಿ ಹೋರಾಟ ಮಾಡಲು ನಮ್ಮ ವಕೀಲರು ಸನ್ನದ್ಧರಾಗಿದ್ದೇವೆ. ಯಾವುದೇ ತಡೆ ಇಲ್ಲ.‌ ನಾವು ಮೀಸಲಾತಿ ಹಂಚಿಕೆಗೆ ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
ಯಾವುದನ್ನು ಕಾಂಗ್ರೆಸ್ 70 ವರ್ಷದಿಂದ ಮಾಡಲು ಆಗಿರಲಿಲ್ಲ, ಅದನ್ನು ನಾನು ನಮ್ಮ ಸರ್ಕಾರ ಮಾಡಿದೆ. ಅದನ್ನು ಕಾಂಗ್ರೆಸ್ ಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ.‌ ಕಾಂಗ್ರೆಸ್ ನ ತಿರುಚುವ ಹೇಳಿಕೆಯನ್ನು ನಂಬಬೇಡಿ. ಅನುಷ್ಠಾನ ಮುಂದೆ ಹಾಕಿದ್ದು, ಕೋರ್ಟ್ ನಲ್ಲಿ ನಾವು ವಿಜಯಶಾಲಿಯಾಗುವ ವಿಶ್ವಾಸ ನಮಗೆ ಇದೆ. ಕಾನೂನು, ಸಂವಿಧಾನ ನಮ್ಮ ಪರವಾಗಿದೆ.
ಕರ್ನಾಟಕದ ಎಲ್ಲ ವರ್ಗದ ಮತದಾರರು ಕಾಂಗ್ರೆಸ್ ನ ಇಷ್ಟು ವರ್ಷದ ಮೋಸದ, ಸುಳ್ಳಿನ ಆಟವನ್ನು ಧಿಕ್ಕರಿಸಬೇಕು. ನಮ್ಮ ಬದ್ಧತೆಯಂತೆ ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡಬೇಕು. ಅದಕ್ಕೆ ನಾವು ಎಸ್ಸಿ, ಎಸ್ಟಿ ಜನಾಂಗಕ್ಕೆ ನ್ಯಾಯ ಕೊಡಲು ನಾವು ಬದ್ಧರಿದ್ದೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 4 =
Remember me
