ಬೆಂಗಳೂರು:ಕ್ರಿಕೆಟ್​ ಜಗತ್ತಿನಲ್ಲಿ ಕ್ಯಾಪ್ಟನ್​ ಕೂಲ್​ ಎಂದೇ ಹೆಸರು ಪಡೆದಿರುವ ಮಹೀ, ಅಲ್ಲಿ ತಮ್ಮದೇ ಆದ ಅಸ್ತಿತ್ವವನ್ನು ಸ್ಥಾಪಿಸಿಕೊಂಡಿದ್ದು ಹಲವಾರು ಸಾಧನೆಗಳನ್ನು ಮಾಡಿದ್ದಾರೆ. ಇದೀಗ ಕ್ರಿಕೆಟ್​ನಿಂದ ಸಿನಿಮಾ ಜಗತ್ತಿಗೂ ಕಾಲಿಟ್ಟಿರುವ ಧೋನಿ, ತಮ್ಮದೇ ಆದ ಪ್ರೊಡಕ್ಷನ್​ ಹೌಸ್​ ಕಟ್ಟಿದ್ದಾರೆ. ಅವರ ಬ್ಯಾನರ್​ನ ಹೆಸರು ‘ಧೋನಿ ಎಂಟರ್​ಟೈನ್​ಮೆಂಟ್​’ ಎಂದಿದೆ.
ಇದೀಗ ಕೂಲ್ ಕ್ಯಾಪ್ಟನ್ ಮಾಹಿ ಹೋಮ್ ಬ್ಯಾನರ್ ನ ಮೊದಲ ಸಿನಿಮಾ ಅನೌನ್ಸ್ ಆಗಿದ್ದು ತಮ್ಮ ಮೊದಲ ಸಿನಿಮಾವನ್ನು ಕಾಲಿವುಡ್​ನಿಂದ ಎಮ್ಎಸ್ ಧೋನಿ ಶುರು ಮಾಡಲಿದ್ದಾರೆ. ಇನ್ನು ಈ ಸಿನಿಮಾದ ನಿರ್ದೇಶನದ ಜವಾಬ್ದಾರಿಯನ್ನು ಡೆಬ್ಯೂ ಡೈರೆಕ್ಟರ್​ಗೆ ಧೋನಿ ವಹಿಸಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ರಮೇಶ್ ತಮಿಳ್ಮಣಿ ಎನ್ನುವ ಹೊಸ ನಿರ್ದೇಶಕರ ನಿರ್ದೆಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ಚೈನ್ನೈ ಟೀಮ್​ನಿಂದಾಗಿ ಧೋನಿಗೆ ಕಾಲಿವುಡ್ ಸಿನಿಮಾ ನಂಟು ಹತ್ತಿತ್ತು. ಹೀಗಾಗಿ ತಮ್ಮ ಮೊದಲ ಸಿನಿಮಾವನ್ನು ತಮಿಳು ಭಾಷೆಯಲ್ಲೇ ನಿರ್ಮಾಣ ಮಾಡಲಿದ್ದಾರೆ.
ಈ ಚಿತ್ರದಲ್ಲಿ ನಟ ಹರೀಶ್ ಕಲ್ಯಾಣ್ ಹಾಗೂ ನಟಿ ಇವಾನ ಅಭಿನಯಿಸಲಿದ್ದು ಮೊದಲ ಚಿತ್ರಕ್ಕೆ LGM- ಲೈಫ್ ಗೆಟ್ ಮ್ಯಾರೀಡ್ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ಕಾಲಿವುಡ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ಪರ್ವ ಶುರುವಾಗಿದ್ದು ಕ್ರಿಕೆಟ್ ಜತೆಗೆ ಸಿನಿಮಾ ನಿರ್ಮಾಣಕ್ಕೆ ಧೋನಿ ಮುಂದಾಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಮಾಹಿಯ ಮೊದಲ ತಮಿಳು ಸಿನಿಮಾವಾಗಿದ್ದು ಧೋನಿ ಎಂಟರ್ಟೈ್ನ್ಮೆಂಟ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗಲಿದೆ. ಪ್ಯಾರ್ ಪ್ರೇಮ್ ಕಾದಲ್ ಎಂಬ ಹಿಟ್ ಸಿನಿಮಾ ನಾಯಕನಿಗೆ ಧೋನಿ ಮಣೆ ಹಾಕಿದ್ದು ಲವ್ ಟುಡೇಸ್ ಖ್ಯಾತಿಯ ಇವಾನಾ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
