ಬೆಂಗಳೂರು: ಹೇಳಿಕೆಗಳು, ಪುಕ್ಕಟೆ ಭರವಸೆಗಳು ಅರ್ಥ ಕಳೆದುಕೊಂಡಿವೆ. ಯಾರೋ ಹೇಳಿಕೆ ಕೊಟ್ಟಾಕ್ಷಣ ಈಡೇರುವುದಿಲ್ಲ. ಅತ್ಯಂತ ಪ್ರೀತಿ, ಮನದಾಳದಿಂದಲೇ ರಾಜ್ಯ ತಿಗಳ ಸಮುದಾಯ ಅಭಿವೃದ್ಧಿ ಮಂಡಳಿಯನ್ನು ಸರ್ಕಾರ ಸ್ಥಾಪಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪರೋಕ್ಷವಾಗಿ ಕಾಂಗ್ರೆಸ್‌ಗೆ ಕುಟುಕಿದರು.
ಸಿಎಂ ಅಧಿಕೃತ ನಿವಾಸ ‘ರೇಸ್‌ವ್ಯೆ ಕಾಟೇಜ್’ನಲ್ಲಿ ತಿಗಳ ಸಮುದಾಯದ ನಿಯೋಗ ಭಾನುವಾರ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹೇಳಿಕೆ ಕೊಟ್ಟಿದ್ದರಿಂದಲೇ ಈ ಮಂಡಳಿ ರಚನೆಯಾಯಿತು ಎಂದು ಯಾರೋ ಹೇಳಿಕೊಂಡಿದ್ದಾರೆ. ಬೀದಿಯಲ್ಲಿ ನಿಂತು ಹೇಳಿಕೆ ಕೊಡುವುದಕ್ಕೂ ಕೆಲಸ ಮಾಡಿ ತೋರಿಸುವುದಕ್ಕೂ ವ್ಯತ್ಯಾಸವಿದೆ ಎಂದರು.
ಇದನ್ನೂ ಓದಿ:ಡ್ರೈ ಕ್ಲೀನ್‌ಗೆ ಬಟ್ಟೆ ಕೊಡೋಕೆ ಹೋದ ಮದುಮಗಳು 6 ಮಕ್ಕಳ ತಂದೆ ಜತೆ ಎಸ್ಕೇಪ್!
ಬೆಂಗಳೂರು ಸುತ್ತಮುತ್ತಲ ನಾಲ್ಕೈದು ಜಿಲ್ಲೆಗಳಲ್ಲಿ ನೆಲೆಸಿರುವ ತಿಗಳ ಸಮುದಾಯದ ಅಹರ್ನಿಶಿ ದುಡಿಮೆ ಶ್ಲಾಘನೀಯ, ಬೆಂಗಳೂರಿಗೆ ಉದ್ಯಾನನಗರಿ ಎಂಬ ಹೆಸರು ಬರುವುದಕ್ಕೆ ಸಮುದಾಯದ ತೆರೆಮರೆ ಕೊಡುಗೆ ದೊಡ್ಡದಿದೆ ಎಂದು ಶ್ಲಾಸಿದರು.
ಇದನ್ನೂ ಓದಿ:ಹೆರಿಗೆ ರಜೆಯಲ್ಲಿಯೇ ಪರೀಕ್ಷೆ ತಯಾರಿ ನಡೆಸಿ IPS ಅಧಿಕಾರಿಯಾದ ಐಟಿ ಉದ್ಯೋಗಿ!
ಸಮುದಾಯದ ಯುವ ಜನರು ಸೇರಿ ಸರ್ವಾಂಗೀಣ ಅಭಿವೃದ್ಧಿಗೆ ಸ್ಥಾಪಿಸಿದ ಮಂಡಳಿಗೆ ಸೂಕ್ತ ಅನುದಾನ ಒದಗಿಸುವ ಜತೆಗೆ ಕಾರ್ಯಕ್ರಮ ಪ್ರಕಟಿಸಲಾಗುವುದು. ಸಮುದಾಯದ ಜನರು ಈ ನೆರವು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಿಎಂ ಬೊಮ್ಮಾಯಿ ಕೋರಿದರು. ತಿಗಳ ಸಮುದಾಯದ ತುಮಕೂರಿನ ಜ್ಞಾನಾಂದಪುರಿ ಸ್ವಾಮೀಜಿ, ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು, ಸಮುದಾಯದ ಮುಖಂಡರು ಇದ್ದರು.
ಭಾರೀ ಮಳೆ; ನೀರಲ್ಲಿ ಕೊಚ್ಚಿಹೋದ 5 ಜನ ವಾಪಸ್​​ ಬರಲೇ ಇಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
