ದಾವಣಗೆರೆ:ದಾವಣಗೆರೆಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಪ್ರತಿಪಕ್ಷ ಕಾಂಗ್ರೆಸ್​ಗೆ ಧನ್ಯವಾದ ತಿಳಿಸಿದ್ದಾರೆ.
ಸಿಎಂ ಬೊಮ್ಮಾಯಿ “ರಾಜ್ಯ ಕಾಂಗ್ರೆಸ್ ನಾಯಕರಿಗೆ ಧನ್ಯವಾದ ಹೇಳುತ್ತೇನೆ. ಈ ಬಾರಿ ಲಿಂಗಾಯತ ಸಮುದಾಯದ ಮತಗಳು ಹೆಚ್ಚಿನದಾಗಿ ಬಿಜೆಪಿಗೆ ಬರ್ತವೆ. ಕಳೆದ ಬಾರಿಗಿಂತ ಹೆಚ್ಚನ ಲಿಂಗಾಯತ ಮತಗಳು ಬಿಜೆಪಿಗೆ ಬರ್ತಾವೆ. ಕಾಂಗ್ರೆಸ್ ನಾಯಕರ ಹೇಳಿಕೆಗಳು ಬಿಜೆಪಿಗೆ ಪ್ಲಸ್ ಆಗುತ್ತೆ
ಸಿದ್ದರಾಮಯ್ಯ ಹೇಳಿಕೆ ತಿರುಚಿಲ್ಲ, ಅವರೇ ಬದಲಾವಣೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಮೊದಲ ಹೇಳಿಕೆಗೂ, ಎರಡನೇ ಹೇಳಿಕೆಗೂ ವ್ಯತ್ಯಾಸ ಇದೆ. ಸಿದ್ದರಾಮಯ್ಯ ಹೇಳಿಕೆ ಸ್ಪಷ್ಟವಾಗಿದೆ, ಜನ ದಡ್ಡರಲ್ಲ” ಎಂದಿದ್ದಾರೆ.
ಈ ಸಂದರ್ಭ, ಮುಖ್ಯಮಂತ್ರಿ ಬೊಮ್ಮಾಯಿ ಯಡಿಯೂರಪ್ಪ ಜತೆ ಲಿಂಗಾಯತ ನಾಯಕರ ಸಭೆ ಬಗ್ಗೆ ಪ್ರತಿಕ್ರೆಯೆ ನೀಡಿದ್ದು “ಯಡಿಯೂರಪ್ಪನವರು ಈ ಮೊದಲು ಚುನಾವಣೆ ಮಾಡಿದಂತೆಯೇ ಈ ಬಾರಿಯೂ ಮಾಡುತ್ತಿದ್ದಾರೆ, ಅದರಲ್ಲಿ ಬೇರೆ ವಿಶೇಷ ಇಲ್ಲ. ರಾಷ್ಟ್ರೀಯ ನಾಯಕರು ಬರ್ತಾರೆ, ಪ್ರಧಾನಿ ಬರ್ತಾರೆ, ಅಮಿತ್ ಷಾ ಈಗಾಗಲೇ ಬಂದಿದ್ದಾರೆ. ರಾಜನಾಥಸಿಂಗ್, ಸ್ಮೃತಿ ಇರಾನಿ, ಯೋಗಿ ಆದಿತ್ಯನಾಥ್ ಬರಲಿದ್ದಾರೆ. ರಾಹುಲ್ ರಾಜ್ಯ ಪ್ರವಾಸ ಸ್ವಾಗತಿಸುತ್ತೇನೆ, ರಾಹುಲ್ ಗಾಂಧಿ ತೋರಿಕೆಗಾದ್ರೂ ಮಠಗಳನ್ನು ಸುತ್ತುತ್ತಿದ್ದಾರೆ” ಎಂದಿದ್ದಾರೆ.
ಮುಂದಿನ ಸಿಎಂ ವಿಚಾರವಾಗಿಯೂ ಮುಖ್ಯಮಂತ್ರಿ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು “ಕೂಸು ಹುಟ್ಟುವುದಕ್ಕಿಂತ ಮುಂಚೆ ಕೂಲಾವಿ ಹೋಲಿಸೋದು ಬೇಡ. ಮುಂದಿನ ಸಿಎಂ ಯಾರೆಂದು ಹೈಕಮಾಂಡ್ ತೀರ್ಮಾನ ಮಾಡತ್ತದೆ” ಎಂದಿದ್ದು ಇದೇ ಸಂದರ್ಭದಲ್ಲಿ ಡಿಕೆಶಿ ಚಂಡಿಕಾಯಾಗಕ್ಕೆ ಪ್ರತಿಕ್ರೆಯೆ ನೀಡಿದ್ದು “ಡಿಕೆಶಿ ಭಾವನೆಗಳ ಜತೆ ಆಡ್ತಿದ್ದಾರೆ. ಅವ್ರು ಹೇಳೋದೊಂದು, ಮಾಡೋದೊಂದು. . ಅದು ಅವರ ವೈಯಕ್ತಿಕ, ಪೂಜೆ ಮಾಡ್ಲಿ. ದೇವರು ಯಾರಿಗೆ ಆಶೀರ್ವಾದ ಮಾಡ್ತಾನೋ ನೋಡಬೇಕು” ಎಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − four =
Remember me
