ಬೆಂಗಳೂರು:ನಾಯಕತ್ವ ಗುಣವಿಲ್ಲದ ಯಾಂತ್ರಿಕ ಕಾರ್ಯಶೈಲಿ ಬದಲಿಸಿಕೊಂಡು ಕೆಲಸ ಮಾಡಬೇಕು. ಇಲ್ಲದಿದ್ದರೆ ಬದಲಾಯಿಸಿ ಬೇರೆಯವರನ್ನು ತಂದು ಕೆಲಸ ಮಾಡಿಸಿಕೊಳ್ಳುವುದು ಗೊತ್ತಿದೆ ಎಂದು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್ ಎಚ್ಚರಿಕೆ ನೀಡಿದರು.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಪ್ರವಾಹ ಪರಿಹಾರ, ಮುನ್ನೆಚ್ಚರಿಕೆ ಕ್ರಮ, ಬಜೆಟ್ ಅನುಷ್ಠಾನದ ಪ್ರಗತಿ ಪರಿಶೀಲಿಸಿ ಕೆಲ ಜಿಲ್ಲೆಗಳು ಹಿಂದೆ ಬಿದ್ದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಪ್ರವಾಹ ಸಂತ್ರಸ್ತರಿಗೆ ಅಸಮರ್ಪಕ ಪರಿಹಾರ ವಿತರಣೆ, ಜಾನುವಾರುಗಳ ಚರ್ಮಗಂಟು ರೋಗ ತಡೆ ಲಸಿಕೆ ವಿತರಣೆ ವಿಳಂಬ, ಕೆರೆ ಒತ್ತುವರಿ ತೆರವು, ಅಭಿವೃದ್ಧಿ ಶ್ರೇಯಾಂಕದಲ್ಲಿ ಹಿನ್ನಡೆ ಇವು ಪುನರಾವರ್ತನೆಯಾಗಿದ್ದು, ಈ ಲೋಪಗಳಿಗೆ ನೀವೇ ಹೊಣೆಗಾರರು ಎಂದು ಗರಂ ಆಗಿ ಹೇಳಿದರು. ಕಾರ್ಯ ಚಟುವಟಿಕೆ ಕುಂಠಿತಕ್ಕೆ ಕಾರಣ ತಿಳಿದುಕೊಂಡರೆ ಸುಲಭ ಪರಿಹಾರ ಸಾಧ್ಯವಿದೆ. ಜಿಲ್ಲಾಹಂತಕ್ಕೆ ಅಸಾಧ್ಯ ಎಂದಾದರೆ ತಕ್ಷಣ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು ಎಂದರು.
ಚುರುಕುಮುಟ್ಟಿಸಲು ತಾಕೀತು:ಜಿಲ್ಲಾಧಿಕಾರಿ ಕಚೇರಿಯಲ್ಲಿ ಕುಳಿತುಕೊಳ್ಳದೆ ತಹಸೀಲ್ದಾರ್ ಕಚೇರಿಗಳು, ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ಆಡಳಿತಕ್ಕೆ ಚುರುಕು ಮುಟ್ಟಿಸಬೇಕು. ಬಜೆಟ್ ಕಾರ್ಯಕ್ರಮಗಳ ತ್ವರಿತ ಅನುಷ್ಠಾನಕ್ಕೆ ಪೂರಕವಾಗಿ ಆದೇಶಗಳಾಗಿದ್ದು, ತಳಹಂತದಲ್ಲಿ ಅವುಗಳ ಅನುಷ್ಠಾನಕ್ಕೆ ಕ್ರಮವಹಿಸಿ ವರ್ಷಾಂತ್ಯದೊಳಗೆ ಗುರಿ ತಲುಪಬೇಕು ಎಂದು ಬೊಮ್ಮಾಯಿ ಸೂಚಿಸಿದರು. ಡಿಸಿಗಳು ಕ್ರಿಯಾಶೀಲರಾಗಿ ಹೆಚ್ಚಿನ ಆಸಕ್ತಿವಹಿಸಿ ಕೆಲಸ ಮಾಡಿದರೆ ಯೋಜನೆಗಳ ಉದ್ದೇಶ ಈಡೇರಲಿದ್ದು, ಸರ್ಕಾರದ ಬಗ್ಗೆ ವಿಶ್ವಾಸ ಮೂಡುತ್ತದೆ. ಜನಪರ ಕೆಲಸ ಮಾಡುವುದಕ್ಕೆ ಹಿಂಜರಿಕೆ ಸಲ್ಲದು ಎಂದರು.
ಸಚಿವರಾದ ವಿ.ಸೋಮಣ್ಣ, ಆರ್.ಅಶೋಕ್, ಮಾಧುಸ್ವಾಮಿ, ಸಿ.ಸಿ.ಪಾಟೀಲ್, ಬೈರತಿ ಬಸವರಾಜ, ಸಿಎಸ್ ವಂದಿತಾ ಶರ್ಮ, ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಇದ್ದರು.
ಡಿಸಿಗಳಿಗೆ ವಿಶೇಷ ಕಾರ್ಯಾಗಾರ:ಕಂದಾಯ ಇಲಾಖೆ ಉಪ್ರಕಮಗಳು, ಕ್ರಾಂತಿಕಾರಿ ಬದಲಾವಣೆಗಳನ್ನು ತಿಳಿಸಿಕೊಡುವ ಜತೆಗೆ ಕಾರ್ಯದಕ್ಷತೆ ಸುಧಾರಿಸಲೆಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ವಿಶೇಷ ಕಾರ್ಯಾಗಾರ ಏರ್ಪಡಿಸಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಜತೆಗೆ ನಡೆದ ಸಭೆ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಮೈಸೂರಿನ ಸುತ್ತೂರು ಮಠದಲ್ಲಿ ಒಂದೂವರೆ ದಿನ ಕಾರ್ಯಾಗಾರ ನಡೆಸಲು ಉದ್ದೇಶಿಸಿದ್ದು, ಇಷ್ಟರಲ್ಲೇ ದಿನಾಂಕ ಅಂತಿಮಗೊಳಿಸಲಾಗುವುದು ಎಂದರು.
ಮೀಸಲಾತಿ ಹೆಚ್ಚಳ ಇಚ್ಛಾಶಕ್ತಿ ಪ್ರತೀಕ:ಮೀಸಲಾತಿ ಹೆಚ್ಚಳದ ಬೇಡಿಕೆ 50 ವರ್ಷದಿಂದ ಇತ್ತು. ಹಲವಾರು ಸರ್ಕಾರ ಬಂದಿದ್ದರೂ, ವಿವಿಧ ಕಾರಣಗಳಿಂದಾಗಿ ಈ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೂ ನಮ್ಮ ಸರ್ಕಾರದ ಇಚ್ಛಾಶಕ್ತಿಯಿಂದ ಎಸ್​ಸಿ-ಎಸ್​ಟಿ ಮೀಸಲಾತಿ ಹೆಚ್ಚಳದ ಐತಿಹಾಸಿಕ ನಿರ್ಣಯ ತೆಗೆದುಕೊಂಡು ಸಾಮಾಜಿಕ ನ್ಯಾಯ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಕಾರ್ಕಳ ವಿಧಾನಸಭಾ ಕ್ಷೇತ್ರದ ಎಸ್ಸಿ-ಎಸ್ಟಿ ಸಮುದಾಯದ ಮುಖಂಡರು ಭೇಟಿಯಾದ ಸಂದರ್ಭ ಅವರು ಮಾತನಾಡಿದರು. ಹಿಂದುಳಿದ ವರ್ಗದ ಸಮುದಾಯಗಳಿಗೂ ನ್ಯಾಯ ಒದಗಿಸುವ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಲಾಗುವುದು ಎಂದರು. ಸಚಿವರಾದ ವಿ. ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಇದ್ದರು.
ಬೀದರ್:ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಎರಡನೇ ಹಂತದ ಜನಸಂಕಲ್ಪ ಯಾತ್ರೆಗೆ ಮಂಗಳವಾರ ಗಡಿ ಜಿಲ್ಲೆಯಿಂದ ಚಾಲನೆ ನೀಡುತ್ತಿದೆ. ಔರಾದ್​ನ ಅಮರೇಶ್ವರ ಕಾಲೇಜು ಪಕ್ಕದಲ್ಲಿನ ಮೈದಾನ ಹಾಗೂ ಹುಮನಾಬಾದ್​ನ ಥೇರ್ ಮೈದಾನದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಕಾಲಿಗೆ ಬಿದ್ದು ಕೇಳ್ತೀನಿ, ಇದೊಂದು ಸಲ ದಯವಿಟ್ಟು ಕ್ಷಮಿಸಿ!; ಅಪ್ಪು ಅಭಿಮಾನಿಗಳ ಅಬ್ಬರಕ್ಕೆ ತತ್ತರಿಸಿದ ಕಿಡಿಗೇಡಿ

‘ಕಾಂತಾರ’ಕ್ಕೆ ಕರಾವಳಿ ಬೆಡಗಿಯರ ಮೆಚ್ಚುಗೆ: ಅನುಷ್ಕಾ ಶೆಟ್ಟಿ ಬಳಿಕ ಇದೀಗ ಶಿಲ್ಪಾ ಶೆಟ್ಟಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
