ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರಿಗೆ ನಾನು ಶುಭಕೋರುತ್ತೇನೆ. ಅವರು ನೂರು ವರ್ಷಕ್ಕೂ ಅಧಿಕ ವರ್ಷ ಬಾಳಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಬಿಎಸ್​ವೈಗೆ ಹಾರೈಸಿದರು.
ಸಿಎಂ ಬಿಎಸ್​ವೈ 78ನೇ ಹುಟ್ಟುಹಬ್ಬ ಆಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಅರಮನೆ ಮೈದಾನಲ್ಲಿ ನಡೆಯುತ್ತಿರುವ ಅಭಿನಂದನಾ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ಪಾಲ್ಗೊಂಡು​ ಮಾತನಾಡಿದರು.
ರಾಜಕೀಯ ಬೇರೆ, ಮಾನವ ಸಂಬಂಧವೇ ಬೇರೆ. ಹೀಗಾಗಿ ನಾನು ಒಪ್ಪಿಕೊಂಡು ಅಭಿನಂದನಾ ಸಮಾರಂಭಕ್ಕೆ ಬಂದೆ. ನಾನು ಎಷ್ಟು ವಿರೋಧ ಮಾಡಿದರೂ ಮನುಷ್ಯ ಸಂಬಂಧಕ್ಕೆ ಧಕ್ಕೆ ಬರಬಾರದು. ನಮ್ಮ ಸಿದ್ಧಾಂತವೇ ಬೇರೆ, ಬಿಜೆಪಿ ಮತ್ತು ಬಿಎಸ್​ವೈ ಸಿದ್ಧಾಂತವೇ ಬೇರೆಯಾಗಿದೆ. ಆದರೆ, ನಾವು ಜನರ ಮುಂದೆ ನಮ್ಮ ಸಿದ್ಧಾಂತ ಇಡುತ್ತೇವೆ. ಕೊನೆಗೆ ಜನರೇ ಸಿದ್ಧಾಂತವನ್ನು ಆಯ್ಕೆ ಮಾಡ್ತಾರೆ ಎಂದರು.
ರಾಜಕೀಯ ಜೀವನದಲ್ಲಿ ವೈಯಕ್ತಿಕ ಸಂಬಂಧಗಳು ಅಡ್ಡಿ ಬರಬಾರದು. ನಾನು ಹೃದಯಪೂರ್ವಕವಾಗಿ ಬಿಎಸ್​ವೈಗೆ ಶುಭಾಶಯ ಕೋರುತ್ತೇನೆ. ಅವರು ನೂರು ವರ್ಷಕ್ಕೂ ಅಧಿಕ ವರ್ಷ ಬಾಳಲಿ. ಮನುಷ್ಯ ಎಷ್ಟು ವರ್ಷ ಬದುಕಿದ ಎನ್ನುವುದಕ್ಕಿಂತ ಎಷ್ಟು ವರ್ಷ ಕ್ರೀಯಾಶೀಲನಾಗಿ ಬದುಕಿದ ಎಂಬುದು ಮುಖ್ಯ ಎಂದು ತಿಳಿಸಿದರು.
ಬಿಎಸ್​ವೈ ನೇರವಾಗಿ ಸಿಎಂ ಸ್ಥಾನಕ್ಕೆ ಬರಲಿಲ್ಲ, ಅವರು ಸಾಮಾನ್ಯ ಕುಟುಂಬದಿಂದ ಬಂದು, ಸ್ವಂತ ಪರಿಶ್ರಮ, ಹೋರಾಟದಿಂದ ಸಿಎಂ ಆದವರು. ಹೋರಾಟ ಬದುಕಿನಿಂದ ಬಂದವರಿಗೆ ಜನರ ಬದುಕು ಅರ್ಥ ಆಗುತ್ತದೆ. ರಾಜ್ಯದ ರಾಜಕೀಯ ಅರ್ಥ ಮಾಡಿಕೊಂಡವರಲ್ಲಿ ಕೆಲವೇ ಕೆಲವು ರಾಜ್ಯಕಾರಣಿಗಳಲ್ಲಿ ಬಿಎಸ್​ವೈ ಒಬ್ಬರು. ಸಿಎಂ ಆದವರಿಗೆ ಒತ್ತಡಗಳು ಇರೋದು ಸಹಜ. ಒತ್ತಡ ಸಹಿಸಿಕೊಳ್ಳುವ ಶಕ್ತಿ ಬಿಎಸ್​ವೈ ಅವರಿಗೆ ಬರಲಿ ಎಂದರು.(ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 15 =
Remember me
