ಯಡಿಯೂರಪ್ಪರದ್ದು ಸಿಡುಕಿನ ಸ್ವಭಾವ, ನಗುವುದೇ ಅಪರೂಪ, ಸದಾ ಪ್ರವಾಸದಲ್ಲಿರುವ ಅವರು ಕುಟುಂಬಕ್ಕೆ ಸಮಯ ನೀಡುವುದಿಲ್ಲ ಎಂದು ಹಲವರು ಭಾವಿಸಿದ್ದಾರೆ. ಆದರೆ, ಇದೆಲ್ಲ ಕಲ್ಪನೆಗಳು ಮಾತ್ರ. ಬಿಎಸ್​ವೈ ಹೃದಯದಲ್ಲಿ ಒಬ್ಬ ಕಲಾಭಿಮಾನಿ, ಶಿಸ್ತಿನ ಸಿಪಾಯಿ, ಮಾತೃಹೃದಯಿ ಇದ್ದಾನೆ. ಅವರದ್ದು ಸಾತ್ವಿಕ ಕೋಪ ಎಂಬುದು ಅನೇಕರಿಗೆ ಗೊತ್ತಿಲ್ಲ. ಅವರ ಬಗ್ಗೆ ಯಾರೂ ತಿಳಿಯದ ಅಪರೂಪದ ಸಂಗತಿಗಳು ಇಲ್ಲಿವೆ.
| ಅರವಿಂದ ಅಕ್ಲಾಪುರ ಶಿವಮೊಗ್ಗ
ಅವರೆಕಾಳು ಉಪ್ಪಿಟ್ಟು:ಈ ಹೆಸರು ಕೇಳಿದರೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಏನೋ ಸಂಭ್ರಮ. ಅವರು ಅತೀ ಹೆಚ್ಚು ಇಷ್ಟ ಪಡುವ ತಿಂಡಿಯಿದು. ಬಿಎಸ್​ವೈ ಭಾಗವಹಿಸುವ ಹಲವು ಕಾರ್ಯಕ್ರಮ, ಸುದ್ದಿಗೋಷ್ಠಿಗಳಲ್ಲಿ ಉಪಹಾರಕ್ಕೆ ಉಪ್ಪಿಟ್ಟನ್ನೇ ಮಾಡಿಸುವ ಮೂಲಕ ಆಯೋಜಕರು ಬಿ.ಎಸ್.ಯಡಿಯೂರಪ್ಪ ಇಷ್ಟದ ತಿಂಡಿಗೆ ಮನ್ನಣೆ ನೀಡುತ್ತಾರೆ.
ರೇಡಿಯೋ ಪ್ರಿಯ:ಬಿಎಸ್​ವೈ ರಾಜಕೀಯ ಜೀವನದ ಆರಂಭದಲ್ಲಿ ಸದಾ ಅವರೊಂದಿಗೆ ಸೋನಿ ಟ್ರಾನ್ಸಿಸ್ಟರ್ ಒಂದಿರುತ್ತಿತ್ತು. ಬೆಳಗ್ಗೆ ಪ್ರದೇಶ ಸಮಾಚಾರ ಕೇಳಿಯೇ ಅವರು ಕೆಲಸ ಆರಂಭಿಸುತ್ತಿದ್ದರು. ಎಲ್ಲೇ ಹೋದರೂ ಅದನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಿದ್ದರು. ಪ್ರವಾಸದಲ್ಲಿ ಇದೇ ಇವರ ಸಂಗಾತಿಯಾಗಿತ್ತು.
ಊಟ-ತಿಂಡಿಯಲ್ಲಿ ಶಿಸ್ತು:ಊಟ, ತಿಂಡಿಯಲ್ಲಿ ಇಂದಿಗೂ ಯಡಿಯೂರಪ್ಪ ಶಿಸ್ತು ಕಾಯ್ದುಕೊಂಡಿದ್ದಾರೆ. ರುಚಿ-ಶುಚಿ ಜತೆಗೆ ಹದವಾದ ಬಿಸಿ ಅಡುಗೆ ಅವರಿಗಿಷ್ಟ. ರಸಂ, ಬಿಸಿ ಸಾಂಬಾರ್ ಇದ್ದರೆ ಇನ್ನೂ ಖುಷಿ. ಊಟದ ಬಳಿಕ ಐಸ್ಕ್ರೀಂನೊಂದಿಗೆ ಫ್ರೂಟ್ ಸಲಾಡ್ ಅಚ್ಚುಮೆಚ್ಚು. ಸಂಜೆ ರವೆ ದೋಸೆ, ಮಸಾಲೆ ರೊಟ್ಟಿ ಇದ್ದರೆ ಇಷ್ಟ.
ಸ್ನಾನವೇ ಮೊದಲು:ಎಷ್ಟೇ ಬಿಡುವಿಲ್ಲದ ಕಾರ್ಯಕ್ರಮಗಳಿರಲಿ. ಸ್ನಾನ ಮುಗಿಸದೆ ಯಡಿಯೂರಪ್ಪ ಎಂದಿಗೂ ತಿಂಡಿ ತಿಂದ ನಿದರ್ಶನಗಳಿಲ್ಲ. ಯಾವುದೇ ಊರಿರಲಿ, ಯಾವುದೇ ಸಂದರ್ಭವಿರಲಿ. ಎದುರಿಗೆ ಅವರೆಕಾಳು ಉಪ್ಪಿಟ್ಟೇ ತಂದಿಡಲಿ. ಸ್ನಾನ ಮೊದಲು ತಿಂಡಿ ನಂತರ ಎಂಬುದು ಅವರ ಪಾಲಿಸಿ.
ಹೂವು ಕಂಡರೆ ಪ್ರೀತಿ:ಹೂವುಗಳೆಂದರೆ ಬಿಎಸ್​ವೈಗೆ ಪ್ರೀತಿ. ಯಾವುದೇ ವೇದಿಕೆಯಿರಲಿ, ಮನೆಯೇ ಆಗಿರಲಿ ಹೂವುಗಳಿಂದ ಅಲಂಕರಿಸಿದರೆ ಅವರಿಗೆ ಖುಷಿ ಹೆಚ್ಚು. ರಾಜಕೀಯ ಪ್ರವಾಸದ ಸಂದರ್ಭದಲ್ಲಿ ಮಂಗಳೂರು ಕಡೆಗೆ ಹೋದರೆ ಪತ್ನಿ ಮೈತ್ರಾದೇವಿಗೆ ಶಂಕರಪುರ ಮಲ್ಲಿಗೆದಂಡೆ ತಂದುಕೊಡುತ್ತಿದ್ದರು.
ನಾಟಕ-ಸಿನಿಮಾ ಇಷ್ಟ:ರಾಜಕೀಯ ಬದುಕಿನ ಆರಂಭದಲ್ಲಿ ಯಡಿಯೂರಪ್ಪ, ಪತ್ನಿ ಮೈತ್ರಾದೇವಿ ಅವರೊಂದಿಗೆ ಹಲವು ನಾಟಕ, ಸಿನಿಮಾ ವೀಕ್ಷಿಸುತ್ತಿದ್ದರು. ಈಗಲೂ ಬಿಡುವಿನ ಸಂದರ್ಭದಲ್ಲಿ ಅಪರೂಪಕ್ಕೆ ಕುಟುಂಬಸ್ಥರೊಂದಿಗೆ ಸಿನಿಮಾ ವೀಕ್ಷಿಸಿದ ನಿದರ್ಶನಗಳಿವೆ.
ಯಾರನ್ನೂ ಉಪೇಕ್ಷಿಸಲ್ಲ:ಯಡಿಯೂರಪ್ಪ ಇಂದು ರಾಜ್ಯದ ಮುಖ್ಯಮಂತ್ರಿ ಆಗಿರಬಹುದು. ಆದರೆ ಜತೆಗಿರುವವರನ್ನು ಎಂದಿಗೂ ಉಪೇಕ್ಷಿಸಿದ ಉದಾಹರಣೆಗಳಿಲ್ಲ. ತಮ್ಮ ಕೋಪದಿಂದ, ನಡೆ-ನುಡಿಯಿಂದ ಯಾರಿಗಾದರೂ ಬೇಸರವಾಗಿದೆ ಎಂದು ತಿಳಿದರೆ ಅವರನ್ನು ಮೃದುವಾಗಿ ಮಾತನಾಡಿಸಿ ನೋವು ಕಡಿಮೆ ಮಾಡುವ ಕಲೆ ಅವರಿಗೆ ಸಿದ್ಧಿಸಿದೆ.
ಕೋಪವೇ ವರ:ಯಡಿಯೂರಪ್ಪರಿಗೆ ಕೋಪ ವರವಾಗಿ ಪರಿಣಮಿಸಿದೆ. ಈಗ ಅವರು ಕೊಂಚ ಶಾಂತವಿದ್ದರೂ ಅಧಿಕಾರಿಗಳಿಗೆ ಹಿಂದಿನ ಕೋಪದ ಭಯವಿದೆ. ಹೀಗಾಗಿ ಯಡಿಯೂರಪ್ಪ ಏನೇ ಕೆಲಸ ಹೇಳಿದರೂ ತ್ವರಿತವಾಗಿ ಕಾರ್ಯರೂಪಕ್ಕೆ ಬರುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 9 =
Remember me
