ಶಿವಮೊಗ್ಗ:ಸಿಎಂ ಬಿ.ಎಸ್.ಯಡಿಯೂರಪ್ಪ ಮೂರು ದಿನ ಮುಂಚಿತವಾಗಿಯೇ ಕೇಕ್ ಕತ್ತರಿಸುವ ಮೂಲಕ ಸೋಮವಾರ ಬೆಳಗ್ಗೆ ಜನ್ಮದಿನದ ಸಂಭ್ರಮ ಆಚರಿಸಿದರು. ಅಭಿಮಾನಿಗಳ ಆಸೆಯಂತೆ ಕೇಕ್ ಕತ್ತರಿಸಿದ ಬಿಎಸ್​ವೈ, ಮೊದಲು ತಾವೇ ಕೇಕ್ ತಿಂದಿದ್ದು ವಿಶೇಷವಾಗಿತ್ತು. ಆನಂತರ ಅವರ ಅಭಿಮಾನಿಗಳಿಗೆ ಕೇಕ್ ಹಂಚಲಾಯಿತು.
ವಾಸ್ತವವಾಗಿ ಫೆ.27ರಂದು ಯಡಿಯೂರಪ್ಪ ಅವರ ಜನ್ಮದಿನ. ಅಂದು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮ ಪೂರ್ವ ನಿಯೋಜನೆಗೊಂಡಿವೆ. ಕಾರ್ಯದೊತ್ತಡ ಕಾರಣ ಸಿಎಂ ಭೇಟಿ ಕಷ್ಟ ಎಂಬ ಹಿನ್ನೆಲೆಯಲ್ಲಿ ಸೋಮವಾರವೇ ಕೇಕ್ ತರಿಸಿ ಮುಂಚಿತವಾಗಿಯೇ ಜನ್ಮದಿನದ ಶುಭಾಶಯ ಕೋರಲಾಯಿತು ಎನ್ನುತ್ತಾರೆ ಅವರ ಅಭಿಮಾನಿ ಬಳಗದವರು.
ಎಲ್ಲರಿಗೂ ಆದ್ಯತೆ: ಬಜೆಟ್​ನಲ್ಲಿ ಬೆಂಗಳೂರು ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಲಾಗಿದೆ. ಕೃಷಿ ಜತೆಗೆ ಉದ್ಯಮಗಳ ಅಭಿವೃದ್ಧಿಯೂ ಮುಖ್ಯ. ಶಿವಮೊಗ್ಗ ಸೇರಿ ರಾಜ್ಯಾದ್ಯಂತ ಹೆಚ್ಚು ಉದ್ಯೋಗ ಸೃಷ್ಟಿಯಾಗಬೇಕಿದೆ. ಆ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಯಡಿಯೂರಪ್ಪ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + five =
Remember me
