| ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಕರ್ನಾಟಕ
ಭಾರತ ರಾಜಕಾರಣದಲ್ಲಿ ಬೆಂಗಳೂರಿಗೆ ವಿಶಿಷ್ಟ ಸ್ಥಾನವಿದೆ. ಕರ್ನಾಟಕವಷ್ಟೇ ಅಲ್ಲದೇ ಭಾರತದ ಎಲ್ಲ ಭಾಗಗಳ ಜನರಿಗೆ ಎಲ್ಲ ಕಾಲಕ್ಕೂ ಆಕರ್ಷಕವಾಗಿ ಕಾಣುವ ನಗರ ಬೆಂಗಳೂರು. ಇದಕ್ಕೆ ಮುಖ್ಯ ಕಾರಣ ಇಲ್ಲಿನ ಆಹ್ಲಾದಕರ ವಾತಾವರಣ. ಇಲ್ಲಿ ವಾಸಿಸುವ ಜನರಿಗೆ ನಿಸರ್ಗ ನಿರ್ವಿುತ ಹವಾ ನಿಯಂತ್ರಿತ ಮನೆಯಲ್ಲಿ ನೆಲೆಸಿದ ಅನುಭವವಾಗುವುದು ಕಾರಣ.
ಬೆಂಗಳೂರಿಗೆ ಸಮೀಪದ ಬೇಗೂರಿನ ನಾಗೇಶ್ವರ ದೇವಸ್ಥಾನದಲ್ಲಿ ದೊರೆತ ಶಾಸನದಲ್ಲಿ ಬೆಂಗಳೂರಿನ ಭವ್ಯ ಇತಿಹಾಸದ ಹೆಜ್ಜೆ ಗುರುತುಗಳನ್ನು ಕಾಣಬಹುದು. ಕ್ರಿ.ಶ.1537 ರಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ ‘ಕೆಂಪೇಗೌಡ’ ಬೆಂಗಳೂರಿನಲ್ಲಿ ಕೋಟೆ ನಿರ್ವಿುಸುವ ಮೂಲಕ ಅತ್ಯಂತ ಸುಸಜ್ಜಿತ ನಗರದ ಕಟ್ಟುವ ಚಿಂತನೆಗೆ ಚಾಲನೆ ನೀಡಿದ್ದರು. ಕೃಷಿಗೆ ವಿಶೇಷ ಆದ್ಯತೆ ನೀಡುವ ಸಲುವಾಗಿ ಕೆಂಪೇಗೌಡರು ಬೆಂಗಳೂರು ಮತ್ತು ಇದರ ಆಸುಪಾಸಿನಲ್ಲಿ ಬೃಹತ್ ಕೆರೆಗಳನ್ನು ನಿರ್ವಿುಸಿದರು. ಆ ಕಾಲದಲ್ಲಿಯೂ ಒಂದು ಕೆರೆ ತುಂಬಿ ಕೋಡಿ ಹರಿದರೆ ಆ ನೀರು ಮತ್ತೊಂದು ಕೆರೆಗೆ ತಲುಪುತ್ತಿತ್ತು. ಹೀಗೆ ಬೆಂಗಳೂರು ಮತ್ತು ಸುತ್ತ ಮುತ್ತಲ ನೂರಾರು ಕೆರೆಗಳು, ತುಂಬಿ ತುಳುಕಾಡುವ ನೀರು ಸರಪಳಿ ತಂತ್ರಜ್ಞಾನವನ್ನು ಕೆಂಪೇಗೌಡರು ಆ ಕಾಲದಲ್ಲಿ ಅಭಿವೃದ್ಧಿಪಡಿಸಿದ್ದರು. ಇದರ ಪರಿಣಾಮ ಬೆಂಗಳೂರು ಹಾಗೂ ಸುತ್ತಲ ಪ್ರದೇಶಗಳಲ್ಲಿ ಸಮೃದ್ಧ ಕೃಷಿ ಚಟುವಟಿಕೆ ಸದಾ ಇರುತ್ತಿತ್ತು.
ಇಂತದೊಂದು ಬೆಂಗಳೂರನ್ನು ಸ್ಥಾಪಿಸಿದ ಕೆಂಪೇಗೌಡರ ನೆನಪು ನೂರಾರು ವರ್ಷ ಚಿರಸ್ಥಾಯಿಯಾಗಿ ಉಳಿಯಬೇಕು. ವಿಶ್ವದ ಮೂಲೆ ಮೂಲೆಯಿಂದ ಬೆಂಗಳೂರಿಗೆ ಆಗಮಿಸುವ ಜನರು, ಯಾರು ಈ ಕೆಂಪೇಗೌಡ? ಎಂಬುದನ್ನು ಅರಿತುಕೊಳ್ಳಬೇಕು. ಈ ಮೂಲಕ ಬೆಂಗಳೂರಿನ ಪರಂಪರೆ, ಇತಿಹಾಸ, ಸಂಸ್ಕೃತಿ, ಜನ ಜೀವನ ಮೂಲೆ ಮೂಲೆಗಳಲ್ಲಿ ತಲುಪಿಸಬೇಕೆನ್ನುವ ದೃಷ್ಟಿಯಿಂದ ನನ್ನ ಸರ್ಕಾರ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎದುರು 23 ಎಕರೆ ಪ್ರದೇಶದಲ್ಲಿ ಬೃಹತ್ತಾದ ಹಾಗೂ ಮಹತ್ತಾದ ಕೆಂಪೇಗೌಡ ಪ್ರತಿಮೆಯನ್ನು ಸ್ಥಾಪಿಸುತ್ತಿದೆ. ಅಲ್ಲಿ ಬೆಂಗಳೂರಿನ ಇತಿಹಾಸ, ಪರಂಪರೆ ಇವುಗಳನ್ನು ಪರಿಚಯಿಸುವ ಮುದ್ರಣ, ದೃಶ್ಯ, ಶ್ರವ್ಯ ವಿಭಾಗಗಳು ತಲೆ ಎತ್ತಲಿವೆ. ಇದು ಕೇವಲ ನಾಡನ್ನು ಸುಭಿಕ್ಷವಾಗಿಸಿದ ವ್ಯಕ್ತಿಯ ಸ್ಮಾರಕ ಮಾತ್ರವಲ್ಲ, ಈ ಜಗತ್ತು ಇರುವವರೆಗೂ ಮಾಸಿಹೋಗದಂತಹ ನಾಡೊಂದನ್ನ ಕಟ್ಟಿಕೊಟ್ಟ ಮಹಾನ್ ಶಕ್ತಿಯ ನೆನಪನ್ನು ಜೀವಂತವಾಗಿಸುವ ಸ್ಮಾರಕ. ಇಂಥ ಭವ್ಯ ಸ್ಮಾರಕ ನಿರ್ಮಾಣ ಮಾಡುವ ಮೂಲಕ ನನ್ನ ಸರ್ಕಾರ ನುಡಿದಂತೆ ನಡೆದಿದೆ. ಇದಕ್ಕೆ ನಿಜಕ್ಕೂ ಪ್ರೇರಣೆ, ಸ್ಪೂರ್ತಿ ಆಗಿರುವ ನಾಡಪ್ರಭು ಕೆಂಪೇಗೌಡರ ಪರಂಪರೆಯನ್ನು ಕನ್ನಡ ನಾಡಿನ ಜನರಿಗೆ ಪರಿಚಯಿಸಲು ನನಗೆ ನಿಜಕ್ಕೂ ಹೆಮ್ಮೆಯಾಗುತ್ತಿದೆ.
ಬೆಂಗಳೂರಿನಲ್ಲೇ ರಾಜರ ವಾಸಸ್ಥಳ ಮತ್ತು ಸಾರ್ವಜನಿಕರ ವಾಸಸ್ಥಳವನ್ನ ಗುರುತಿಸಿದ್ದ ಕೆಂಪೇಗೌಡರು, ಅನೇಕಾನೇಕ ದೇವಾಲಯಗಳ ನಿರ್ವಣ, ಪುನರುಜ್ಜೀವನಗೊಳಿಸಿದ್ದರು. ಕಾಲುವೆ ಕಟ್ಟೆಗಳ ನಿರ್ವಹಣೆ, ದೇವಾಲಯಗಳ ನಿರ್ವಹಣೆ, ಕೂಲಿ ಮಠ ಮತ್ತು ಪ್ರಸಾದ ನೀಡುವ ಹೊಣೆಯನ್ನ ಗ್ರಾಮಪಂಚಾಯಿತಿಗಳಿಗೆ ವಹಿಸಿದ್ದುದು ಅವರ ಚಿಂತನಶೀಲತೆಗೆ ಹಿಡಿದ ಕೈಗನ್ನಡಿಯಾಗಿದೆ. ಉತ್ತಮ ಪ್ರಜಾಪಾಲಕರೆಂದು ಹೆಸರುವಾಸಿಯಾಗಿ, ಇಡೀ ಜಗತ್ತೇ ನಿಬ್ಬೆರಗಾಗಿ ನೋಡುವಂಥ ಬೆಂಗಳೂರನ್ನ ತಮ್ಮ ಮುಂದಿನ ತಲೆಮಾರಿನವರಿಗಾಗಿ ಬಿಟ್ಟು ಹೋಗಿದ್ದಾರೆ.
ಬೆಂಗಳೂರು ನಗರದಿಂದಾಗಿ ಕೆಂಪೇಗೌಡರ ಹೆಸರು ಸೂರ್ಯಚಂದ್ರರಂತೆ ಅಜರಾಮರ ವಾಗಿರುತ್ತದೆ. ಬೆಳೆಯುತ್ತಲೇ ಇರುತ್ತದೆ. ದೂರದೃಷ್ಟಿಯ ನಾಯಕರ ಅಚ್ಚಳಿಯದ ನೆನಪಿನ ಸರಮಾಲೆಗೆ ನಮ್ಮ ಸಣ್ಣ ಕಾಣಿಕೆಯಾಗಿ ‘ಕೆಂಪೇಗೌಡ ಪ್ರತಿಮೆ’ಗೆ ಇಂದು (ಶನಿವಾರ) ಅಸ್ತಿಭಾರ ಹಾಕುತ್ತಿ ದ್ದೇನೆ. ಕೆಂಪೇಗೌಡರು ನಾಡಿನ ಜನಮಾನಸ ದಲ್ಲಿ ಹಸಿರಾಗಿರಲಿ, ಅವರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ನಡೆಯುವ ಪ್ರಯತ್ನ ನಮ್ಮದಾಗಿರಲಿ ಎಂದು ಆಶಿಸುತ್ತೇನೆ.
ಅಭಿವೃದ್ಧಿಯಲ್ಲಿ ಕೆಂಪೇಗೌಡರ ಮಾದರಿ ಸಾರ್ವಕಾಲಿಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − five =
Remember me
