ಬೆಂಗಳೂರು:ಕರೊನಾ ಮಹಾಮಾರಿಯ ಆಘಾತಕ್ಕೆ ದಿಕ್ಕು ತಪ್ಪಿ ಅಲ್ಲೋಲಕಲ್ಲೋಲವಾಗಿರುವ ಇಡೀ ರಾಜ್ಯದ ವ್ಯವಸ್ಥೆಯನ್ನು ಸರಿದಾರಿಗೆ ತರುವಂತಹ ಸರಣಿ ಸವಾಲುಗಳು ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮುಂದಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಒಂದರ ಮೇಲೊಂದರಂತೆ ಬೆನ್ನಿಗೇರಿದ ಪ್ರವಾಹ, ಸಿಎಎ ವಿರೋಧಿ ಹೋರಾಟ, ರಾಜಕೀಯ ಬೆಳವಣಿಗೆ, ಉಪ ಚುನಾವಣೆ, ಸಂಪುಟ ವಿಸ್ತರಣೆಯಂತಹ ಸವಾಲು, ಸಮಸ್ಯೆಗಳನ್ನೆಲ್ಲ ಬಗೆಹರಿಸಿಕೊಂಡು ಗೆಲುವಿನ ನಗೆ ಬೀರಿದ್ದ ಅವರೀಗ ಇಡೀ ರಾಜ್ಯವನ್ನೇ ಹೊಸದಾಗಿ ಕಟ್ಟುವ ಮತ್ತೊಂದು ಹೊಣೆ ನಿಭಾಯಿಸಬೇಕಿದೆ.
ಆರ್ಥಿಕ ಹಿಂಜರಿತದಿಂದ ಮೊದಲೇ ತೊಂದರೆಯಲ್ಲಿದ್ದ ದೇಶಕ್ಕೆ ಕರೊನಾ ಮಹಾಮಾರಿ ಮತ್ತಷ್ಟು ಆಘಾತ ನೀಡಿದೆ. ದೇಶದ ಆರ್ಥಿಕ ಸ್ಥಿತಿ 30 ವರ್ಷಗಳಷ್ಟು ಹಿಂದಕ್ಕೆ ಹೋಗಿರು ವುದರಿಂದ ಎದುರಾಗುವ ಸವಾಲುಗಳನ್ನು ಎದುರಿಸಲು ಒಂದಷ್ಟು ಗಟ್ಟಿಯಾದ ನಿರ್ಧಾರ ಗಳನ್ನೇ ಯಡಿಯೂರಪ್ಪ ಕೈಗೊಳ್ಳ ಬೇಕಾಗಿದೆ. ಕೈಗಾರಿಕೆ, ಕೃಷಿ, ಆರ್ಥಿಕತೆ, ತೆರಿಗೆ ಹೆಚ್ಚಳ, ಉದ್ಯಮಿಗಳಿಗೆ ಜಿಎಸ್​ಟಿ ರಿಫಂಡ್ ಮಾಡಿಸುವುದು, ತೆರಿಗೆ ಮೂಲಗಳನ್ನು ಹೆಚ್ಚಿಸಿಕೊಳ್ಳುವುದು, ಅಮದು-ರಫ್ತು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರದ ಮೇಲೆ ಒತ್ತಡ ತಂದು ಕೆಲ ನೀತಿಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದು, ಕೇಂದ್ರದಿಂದ ಬರಬೇಕಾಗಿರುವ ಹಣ ಕಡಿತವಾಗದಂತೆ ನೋಡಿಕೊಳ್ಳುವುದೂ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಸಾಕಷ್ಟು ಸಮಸ್ಯೆಗಳಿವೆ. ಕರೊನಾ ಲಾಕ್​ಡೌನ್ ಮುಗಿಯುತ್ತಿದ್ದಂತೆ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂಬುದನ್ನು ತಜ್ಞರು ಗುರುತಿಸುತ್ತಾರೆ. ಲಾಕ್​ಡೌನ್ ಮುಗಿದ ಬಳಿಕದ ಮೂರ್ನಾಲ್ಕು ತಿಂಗಳು ಅತ್ಯಂತ ಪ್ರಮುಖ ಘಟ್ಟವಾಗಿದೆ. ಆ ಅವಧಿಯಲ್ಲಿ ಸರ್ಕಾರ ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬುದು ಅತ್ಯಂತ ಮುಖ್ಯ ಹಾಗೂ ಕುತೂಹಲಕರವಾಗಿದೆ.
ವೃತ್ತಿ ತೆರಿಗೆ ಸಂಗ್ರಹ ಎಷ್ಟಿದೆ
ರಾಜ್ಯದಲ್ಲಿ 16 ಲಕ್ಷ ಸಂಬಳದಾರರಿಂದ ಹಾಗೂ ಉದ್ಯಮಿಗಳಿಂದ ಒಟ್ಟು 1500 ಕೋಟಿ ರೂ. ವೃತ್ತಿ ತೆರಿಗೆ ಸಂಗ್ರಹವಾಗುತ್ತಿದೆ. ಪೆಟ್ರೋಲ್, ಡೀಸೆಲ್​ನಿಂದ ಮಾರಾಟ ತೆರಿಗೆ 11-12 ಸಾವಿರ ಕೋಟಿ ರೂ. ಸಂಗ್ರಹವಾಗುತ್ತಿದೆ.
ಈಗ ಉತ್ಪಾದನೆ ಸಂಪೂರ್ಣ ನಿಂತಿದೆ. ಅದನ್ನು ಸರಿದೂಗಿಸಲು ವಿದ್ಯುತ್, ನೀರಿನ ಬಿಲ್​ಗಳನ್ನು ಮುಂದಕ್ಕೆ ಹಾಕುವುದು, ಜಿಎಸ್​ಟಿ ರಿಫಂಡ್ ಶೀಘ್ರದಲ್ಲಿ ಪಾವತಿ ಮಾಡುವುದು, ಬಂಡವಾಳ ದೊರಕುವಂತೆ ಮಾಡುವುದು, ಅಧಿಕಾರಿವರ್ಗ ತೊಂದರೆ ಕೊಡದಂತೆ ಕಾಪಾಡಬೇಕಾಗಿದೆ.
| ಬಿ.ಟಿ. ಮನೋಹರ್ ತೆರಿಗೆ ಸಲಹೆಗಾರರು
ತಜ್ಞರ ಸಲಹೆಗಳೇನು
ಸರ್ಕಾರ ವಿತ್ತೀಯ ಕೊರತೆ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಬ್ಯಾಂಕ್​ಗಳಲ್ಲಿ ಲಿಕ್ವಿಡಿಟಿ ಜಾಸ್ತಿ ಮಾಡಬೇಕಾಗಿದೆ. ಕೈಗಾರಿಕೆಗಳಿಗೆ ಬಂಡವಾಳದ ಅಗತ್ಯವಿದೆ. ಎರಡನೇ ಮಹಾಯುದ್ದದ ನಂತರ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಕೆಲಸ ಮಾಡಬೇಕಾಗಿದೆ.
| ಡಾ. ಅಬ್ದುಲ್ ಅಜೀಜ್ ಹಿರಿಯ ಅರ್ಥಶಾಸ್ತ್ರಜ್ಞರು
ತಕ್ಷಣದ ಸವಾಲುಗಳೇನು?
ಕರೊನಾ ನಿಯಂತ್ರಣಕ್ಕೆ ಬಂದ ನಂತರ ಸರ್ಕಾರದ ಮುಂದೆ ಒಂದಷ್ಟು ಸವಾಲುಗಳಿವೆ. ಅವುಗಳನ್ನು ಮೀರಿ ಅಭಿವೃದ್ಧಿ ಸಾಧಿಸಬೇಕಾದರೆ ಒಂದಷ್ಟು ಬಿಗಿ ಕ್ರಮ ಕೈಗೊಳ್ಳಬೇಕಾಗುತ್ತದೆ.
| ಪ್ರೊ.ಎಸ್.ಆರ್. ಕೇಶವ್ ಪ್ರಾಧ್ಯಾಪಕರು, ಅರ್ಥಶಾಸ್ತ್ರ, ಬೆಂವಿವಿ
ರಸಗೊಬ್ಬರ, ಕೀಟನಾಶಕ, ಬಿತ್ತನೆ ಬೀಜ ತೊಂದರೆಯಾಗದಂತೆ ನೋಡಿಕೊಳ್ಳ ಬೇಕಾಗಿದೆ. ರೈತರ ಸಾಲ ವಸೂಲಿ ನಿಲ್ಲಿಸಬೇಕಾಗಿದೆ. ಕೃಷಿ ಯಂತ್ರೋಪಕರಣಕ್ಕೆ ಆದ್ಯತೆ ನೀಡಬೇಕಾಗಿದೆ.
| ಜೆ.ಸಿ. ಬಯ್ಯಾರೆಡ್ಡಿ ಅಧ್ಯಕ್ಷರು, ಪ್ರಾಂತ ರೈತ ಸಂಘ
ದೇಶದ ಆರ್ಥಿಕ ಸ್ಥಿತಿ 30 ವರ್ಷ ಹಿಂದೆ ಸರಿದಿದೆ. ಜಿಡಿಪಿ ಶೇ.2ಕ್ಕೆ ಇಳಿದಿದೆ. ಇಂತಹ ಸಂದರ್ಭದಲ್ಲಿ ಕೈಗಾರಿಕಾ ರಂಗ ಚೇತರಿಸಿಕೊಳ್ಳಲು ಕೇಂದ್ರದಿಂದ ಹೆಚ್ಚಿನ ನೆರವು ಪಡೆಯಲು ಪ್ರಯತ್ನಿಸಬೇಕು.
| ಸಿ.ಆರ್. ಜನಾರ್ದನ್ ಅಧ್ಯಕ್ಷರು, ಎಫ್​ಕೆಸಿಸಿಐ
| ರುದ್ರಣ್ಣ ಹರ್ತಿಕೋಟೆ
ಕರೊನಾ ವೈರಸ್​ ಗಾಳಿಯಿಂದ ಹರಡುವುದಕ್ಕೆ ಆಧಾರಗಳಿಲ್ಲ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸ್ಪಷ್ಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 1 =
Remember me
