ಬೆಂಗಳೂರು:ಕರೊನಾ ವಿರುದ್ಧದ ನಿರ್ಣಾಯಕ ಸಮರ ಗೆಲ್ಲಲು ಆತ್ಮವಿಶ್ವಾಸದ ಜತೆಗೆ ಆರ್ಥಿಕ ತೋಳ್ಬಲವೂ ಅತ್ಯಗತ್ಯ ಎಂಬುದನ್ನು ಮನಗಂಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬರಿದಾಗುತ್ತಿರುವ ಬೊಕ್ಕಸ ತುಂಬಿಸಿಕೊಳ್ಳಲು ಸರಣಿ ತಂತ್ರಗಳನ್ನು ರೂಪಿಸಿದ್ದಾರೆ. ಬಿಡಿಎ ಸೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮೂಲೆ ನಿವೇಶನಗಳ ಹರಾಜು, ನ್ಯಾಯಾಲಯದ ಮುಂದಿರುವ ಅಕ್ರಮ ಸಕ್ರಮ ಅರ್ಜಿ ವಿಲೇವಾರಿಯಂತಹ ಹತ್ತಾರು ಕ್ರಮಗಳು ಸಿಎಂ ಆಲೋಚನೆಯ ಬತ್ತಳಿಕೆಯಲ್ಲಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಲಾಕ್​ಡೌನ್ ಅವಧಿಯ ವಿಸ್ತರಣೆ ಘೋಷಿಸಿ ಕೇಂದ್ರದ ಮಾರ್ಗಸೂಚಿಗಳು ಪ್ರಕಟಗೊಂಡ ಬಳಿಕ ರಾಜ್ಯದ ಈ ಸಂಪನ್ಮೂಲ ಸಂಗ್ರಹ ತೀರ್ವನದ ಅನುಷ್ಠಾನದ ಕುರಿತು ಸ್ಪಷ್ಟತೆ ಮೂಡುವ ನಿರೀಕ್ಷೆ ಇದೆ.
ಏ.14ರ ನಂತರದ ಲಾಕ್​ಡೌನ್ ವಿಸ್ತರಣೆ ಕುರಿತು ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿ ಸಲಹೆ, ಸೂಚನೆಯಂತೆ ನಡೆಯಲು ನಿರ್ಧರಿಸಿ, ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಒತ್ತು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿಯೇ ಸಿಎಂ ಯಡಿಯೂರಪ್ಪ ಅನೇಕ ತಜ್ಞರಿಂದ ಸಲಹೆಗಳನ್ನು ಸ್ವೀಕರಿಸಿ ಅವುಗಳ ಜಾರಿಗೆ ಮುಂದಾಗಿದ್ದಾರೆ. ತುರ್ತಾಗಿ ಆರ್ಥಿಕ ಸುಸ್ಥಿತಿ ಸಾಧಿಸದ ಹೊರತು ಲಾಕ್ ಡೌನ್ ನಂತರದ ವಿಷಮ ಸ್ಥಿತಿಗೆ ಪರಿಹಾರ ನೀಡಲಾಗದೆಂಬ ದೃಢ ನಿಲುವು ತಳೆದಿರುವ ಸಿಎಂ, ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಸೋಮವಾರ ಸುದೀರ್ಘ ಚರ್ಚೆ ನಡೆಸಿದ್ದಾರೆ. ಆರ್ಥಿಕ ಸ್ಥಿತಿ ಸುಧಾರಣೆಗೆ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕಾದ ಅಗತ್ಯವನ್ನು ಸಿಎಂ ಸಭೆಯಲ್ಲಿ ಒತ್ತಿ ಹೇಳಿದ್ದಾರೆ. ಸಭೆಯಲ್ಲಿ ವ್ಯಕ್ತವಾದ ಸಲಹೆಗಳನ್ನು ಪರಿಗಣಿಸಿ ದೊಡ್ಡ ಮೊತ್ತ ಸಂಗ್ರಹಣೆ ಸಾಧ್ಯವಿರುವ ಪ್ರಮುಖ ನಿರ್ಣಯಗಳನ್ನು ಕೈಗೊಂಡಿದ್ದು, ಉಳಿದ ಮಾಗೋಪಾಯಗಳು ಚರ್ಚೆ ಹಾಗೂ ಚಿಂತನೆ ಹಂತದಲ್ಲಿವೆ.
ಏಕೀಕೃತ ಪೋರ್ಟಲ್
ಕರೊನಾಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಡಿ ಪೋರ್ಟಲ್​ಗಳನ್ನು ನಿರ್ವಹಿಸಲಾಗುತ್ತಿದ್ದು, ಇವುಗಳನ್ನು ಏಕೀಕೃತ ಪೋರ್ಟಲ್ ವ್ಯವಸ್ಥೆಯಡಿ ತರಲು ತೀರ್ವನಿಸಲಾಗಿದೆ.
ಕೇಂದ್ರದ ಅಣತಿಯಂತೆ ನಡೆ
ಏ.14ರ ಬಳಿಕ ರಾಜ್ಯದ ಲಾಕ್ ಡೌನ್ ಸ್ವರೂಪಕ್ಕೂ ಪ್ರಧಾನಿ ಮೋದಿ ಭಾಷಣವೇ ದಿಕ್ಸೂಚಿಯಾಗಿದೆ. ನೆರೆಯ ಕೆಲವು ರಾಜ್ಯಗಳ ನಿರ್ಧಾರದ ಹಾದಿಯಲ್ಲಿ ಸಾಗುವ ಬದಲಿಗೆ ಕೇಂದ್ರದ ಮಾರ್ಗಸೂಚಿ ಹಾಗೂ ಪ್ರಧಾನಿ ಆಣತಿಯನ್ನು ಪಾಲಿಸಲು ಸಿಎಂ ಅಧ್ಯಕ್ಷತೆಯ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಇತರ ಸಾಧ್ಯತೆಗಳು
* ಬಜೆಟ್​ನಲ್ಲಿ ಪ್ರಸ್ತಾವಿತ ಯೋಜನೆ, ಕಾರ್ಯಕ್ರಮಗಳ ತಾತ್ಕಾಲಿಕ ಮುಂದೂಡಿಕೆ
* ಬೃಹತ್ ಮೊತ್ತ ಬಯಸುವ ಕೆಲವೊಂದು ಅಭಿವೃದ್ಧಿ ಯೋಜನೆಗಳ ನಿಲುಗಡೆ
* ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವುದು
ಮತ್ತೊಂದು ವಾರ ಉಚಿತ ಹಾಲು
ಬಡವರು, ಕಾರ್ವಿುಕರಿಗೆ ಮತ್ತೊಂದು ವಾರ ತಲಾ ಅರ್ಧಲೀಟರ್ ಹಾಲು ಉಚಿತವಾಗಿ ಸಿಗಲಿದೆ. ಮುಖ್ಯಮಂತ್ರಿ ಅಧ್ಯಕ್ಷತೆ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಕೆಎಂಎಫ್​ನಲ್ಲಿ ಹೆಚ್ಚುವರಿಯಾಗಿ ಉಳಿಯುವ ಹಾಲು ಏ.14ರವರೆಗೆ ಉಚಿತ ಹಂಚಿಕೆಗೆ ನಿರ್ಧರಿಸಲಾಗಿತ್ತು. ಇದೀಗ ಮತ್ತೊಂದು ವಾರ ವಿಸ್ತರಿಸಲಾಗಿದೆ.
ಪ್ರಮುಖ ತೀರ್ಮಾನಗಳು (ಸಿಎಂ ಅಧ್ಯಕ್ಷತೆಯ ಸಭೆಯಲ್ಲಿ ಕೈಗೊಂಡಿದ್ದು)
1. ಕೋರ್ಟ್​ಗಳಲ್ಲಿ ಬಾಕಿ ಇರುವ ಅಕ್ರಮ ಸಕ್ರಮ ಅರ್ಜಿಗಳ ತ್ವರಿತ ವಿಲೇವಾರಿಗೆ ಪ್ರಯತ್ನ. ಇದರಿಂದ ಜನರಿಗೆ ಲಾಭ, ಸಂಪನ್ಮೂಲವೂ ಲಭ್ಯ
2. ಖಾಸಗಿ, ಸಹಕಾರಿ ಸಂಘಗಳ ವಸತಿ ಬಡಾವಣೆ, ನಿವೇಶನಕ್ಕೆ ಸಂಬಂಧಿಸಿದ ಕಾಯ್ದೆಗೆ ತಿದ್ದುಪಡಿ. ಇದರಿಂದ ಪ್ರಸ್ತಾವಿತ ನೂರಾರು ವಸತಿ ಸೊಸೈಟಿಗಳಿಗೆ ಅನುಮತಿ ಸಿಕ್ಕಿ, ಆರ್ಥಿಕ ಬಲವೂ ದೊರೆಯಲಿದೆ
3. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ 12,000 ಮೂಲೆ ನಿವೇಶನಗಳ ಹರಾಜು ಮಾಡಿ 15,000 ಕೋಟಿ ರೂ. ಕ್ರೋಡೀಕರಣ ಅಂದಾಜು, ನಿರೀಕ್ಷಿಸಿದ ದರದಲ್ಲಿ ಹರಾಜಾಗದಿದ್ದರೆ ಅಂತಹವುಗಳನ್ನು ಕೈಬಿಡುವುದು, ರಾಜ್ಯದ ಇತರ ನಗರಾಭಿವೃದ್ಧಿ ಪ್ರಾಧಿಕಾರಗಳ ಮೂಲೆ ಹಾಗೂ ಖಾಲಿ ನಿವೇಶನಗಳ ಹರಾಜು ಹಾಕಲು ಕ್ರಮವಹಿಸುವುದು
4. ರಾಜೀವ್​ಗಾಂಧಿ ಆರೋಗ್ಯ ವಿಜ್ಞಾನಿಗಳ ವಿ.ವಿಯಲ್ಲಿರುವ 1,000 ಕೋಟಿ ರೂ.ಗಳನ್ನು ವೈದ್ಯಕೀಯ ಕಾಲೇಜುಗಳ ಮೂಲ ಸವಲತ್ತು ಅಭಿವೃದ್ಧಿಗೆ ಬಳಸುವುದು
5. ಕುಸಿದ ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ಹಲವು ಮಾಗೋಪಾಯ ಕಂಡು ಹಿಡಿಯುವಂತೆ ಅಧಿಕಾರಿಗಳಿಗೆ ಸೂಚನೆ
ಜಮ್ಮುವಿನಲ್ಲಿ ಉಗ್ರರಿಂದ ದಾಳಿ: ಕೊಡಲಿಯಿಂದ ಪೊಲೀಸ್‌ ಅಧಿಕಾರಿ ಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 11 =
Remember me
