ಬೆಂಗಳೂರು:ಕರೊನಾ ಹರಡಿಸುವಿಕೆಯಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಹೊರಬರುತ್ತಿರುವ ಹೇಳಿಕೆಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಧರ್ಮ ಸಂಕಟದಲ್ಲಿ ಸಿಲುಕಿಸಿದೆ.
ಕರೊನಾ ಹರಡಿಸುವಿಕೆ ವಿಚಾರದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಆಪಾದನೆ ಮಾಡಿದರೆ ಸುಮ್ಮನಿರಲ್ಲ, ಕ್ರಮಕೈಗೊಳ್ಳಲಾಗುತ್ತದೆ ಎಂದು ಬಿಎಸ್​ವೈ ತಮ್ಮ ಸಂದರ್ಶನದಲ್ಲಿ ಎಚ್ಚರಿಕೆ ನೀಡಿದ್ದರು. ಜತೆಗೆ ತಮ್ಮ ಪಕ್ಷದ ಸಂಸದರಿಬ್ಬರಿಗೆ ಕರೆ ಮಾಡಿ ಎಚ್ಚರಿಕೆಯನ್ನೂ ನೀಡಿದ್ದರು. ಇಷ್ಟರ ನಡುವೆಯೂ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಎಂ.ಪಿ.ರೇಣುಕಾಚಾರ್ಯ ಮತ್ತೆ ಮತ್ತೆ ಅದೇ ವಿಚಾರ ಕೆದುಕುತ್ತಿರುವುದು ಬಿಎಸ್​ವೈಗೆ ಇರಿಸುಮುರಿಸು ತಂದಿದೆ.
ಕರೊನಾ ನಿರ್ವಹಣೆ ಸಂಬಂಧ ಒಂದೆಡೆ ಪ್ರತಿಪಕ್ಷಗಳು ಸಹಕರಿಸುವ ಮನೋಭಾವದಲ್ಲಿರುವಾಗ, ಅಲ್ಪಸಂಖ್ಯಾತರ ವಿಚಾರ ಎಳೆದುತಂದು ಗೊಂದಲ ಸೃಷ್ಟಿಸಿಕೊಳ್ಳುವುದಕ್ಕೆ ಸಿಎಂ ಸಿದ್ಧರಿಲ್ಲ. ಇಷ್ಟರ ನಡುವೆ ವಿಚಾರ ಬೆಳೆಸುತ್ತಿರುವುದರ ವಿರುದ್ಧ ಅಸಮಾಧಾನಗೊಂಡ ಸಿಎಂ, ರೇಣುಕಾಚಾರ್ಯರನ್ನು ತರಾಟೆಗೆ ತೆಗೆದೆದುಕೊಂಡಿದ್ದಾರೆಂದು ಗೊತ್ತಾಗಿದೆ. ಕರೊನಾ ನಿರ್ವಹಣೆ ಸವಾಲಿನ ವಿಷಯ, ಇಂಥ ಸಂದರ್ಭದಲ್ಲಿ ವಿವಾದ ಮಾಡಿಕೊಂಡು ಕೂರುವುದು ಸರಿಯಲ್ಲ ಎಂದು ಪಕ್ಷದ ನಾಯಕರಿಗೆ ಬುದ್ಧಿವಾದ ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.
ಬಿಜೆಪಿಗೆ ಮತ್ತೆ ಅನಂತ ಮುಜುಗರ
ಕಾರವಾರ: ರೋಗಕ್ಕೆ, ಧರ್ಮ-ಜಾತಿ ಇಲ್ಲ. ಯಾವೊಂದು ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಯಾರೂ ಮಾತನಾಡಬಾರದು ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯಡಿಯೂರಪ್ಪ ಹೇಳಿದ ನಂತರವೂ ಸಂಸದ ಅನಂತಕುಮಾರ ಹೆಗಡೆ, ಫೇಸ್​ಬುಕ್​ನಲ್ಲಿ ‘ಇಸ್ಲಾಂ ರಾಜಕಾರಣ’ ತಲೆಬರಹದಲ್ಲಿ ತಬ್ಲಿಘಿ ಜಮಾತ್ ಕುರಿತಾಗಿ ಲೇಖನವೊಂದನ್ನು ಪ್ರಕಟಿಸಿ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ. ತಬ್ಲಿಘಿ ಜಮಾತ್ ಇತಿಹಾಸ ಬರೆದಿರುವ ಸಂಸದ, ಭಾರತದಲ್ಲಿ ರೋಗ ಹರಡಲು ಸಂಚು ನಡೆಸಿದೆ. ಜಗತ್ತನ್ನೆಲ್ಲ ಇಸ್ಲಾಮೀಕರಣಗೊಳಿಸುವ ಭಾಗವಾಗಿ ಈ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದಾರೆ.
ರೇಣು, ಯತ್ನಾಳ್ ಬಂಧನಕ್ಕೆ ಆಗ್ರಹ
ಬೆಂಗಳೂರು: ಇತ್ತೀಚೆಗೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಕೆಲವರು ಮಾತನಾಡುತ್ತಿದ್ದಾರೆ. ಅಂತಹವರ ವಿರುದ್ಧ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಜತೆಗೆ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹಾಗೂ ಶಾಸಕ ಬಸನಗೌಡ ಪಾಟೀಲ್​ಯುತ್ನಾಳ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ರೇಣುಕಾಚಾರ್ಯರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಬೇಕು. ಅವರು ಏನೇ ಹೇಳಿಕೆ ಕೊಟ್ಟರೂ ಸಿಎಂ ಕೊಟ್ಟಂತೆ ಆಗುತ್ತದೆ. ಹೀಗಾಗಿ ಅವರ ಆ ಹುದ್ದೆಯಲ್ಲಿ ಮುಂದುವರಿಯಲು ಅರ್ಹರಲ್ಲ ಎಂದು ಹೇಳಿದ್ದಾರೆ.
ದುಬೈನಿಂದ ಮರಳಿದ್ದ ಪತಿಗೆ ನೆಗೆಟಿವ್ ಇದ್ದರೂ ಗರ್ಭಿಣಿ ಪತ್ನಿಗೆ ಕರೊನಾ ಪಾಸಿಟಿವ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 4 =
Remember me
