ಬೆಂಗಳೂರು:ಸಿಡ್ಜರ್​ಲ್ಯಾಂಡ್​ನ ದಾವೋಸ್​ನಲ್ಲಿ ಸೋಮವಾರ (ಜ.20)ದಿಂದ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತವರ ತಂಡ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾನುವಾರ ಪ್ರಯಾಣ ಬೆಳೆಸಲಿದೆ.
ಎಮಿರೇಟ್ಸ್ ವಿಮಾನದಲ್ಲಿ ಬೆಳಗ್ಗೆ 10.25ಕ್ಕೆ ಹೊರಟು ದುಬೈಗೆ ತಲುಪುವರು. ಅಲ್ಲಿಂದ ಜೂರಿಚ್ ವಿಮಾನ ನಿಲ್ದಾಣದಲ್ಲಿ ಇಳಿದು ನಂತರ ರಸ್ತೆ ಮಾರ್ಗವಾಗಿ ದಾವೋಸ್ ತಲುಪಲಿದ್ದಾರೆ. ಅಧಿಕೃತ ಆಹ್ವಾನದ ಮೇರೆಗೆ ಪಾಲ್ಗೊಳ್ಳುತ್ತಿರುವ ಭಾರತೀಯ ನಿಯೋಗದಲ್ಲಿ ರಾಜ್ಯದ ಸಿಎಂ ಜತೆಗೆ ಮಧ್ಯಪ್ರದೇಶ, ಪಂಜಾಬ್ ಮುಖ್ಯಮಂತ್ರಿಗಳು ಹಾಗೂ ಪ್ರತಿಷ್ಠಿತ ಕಂಪನಿಗಳ 100 ಸಿಇಒಗಳು ಇರಲಿದ್ದಾರೆ.
ಸಿಎಂ ನೇತೃತ್ವದ ರಾಜ್ಯ ತಂಡದಲ್ಲಿ ಸಚಿವ ಜಗದೀಶ ಶೆಟ್ಟರ್, ಸಿಎಂ ರಾಜಕೀಯ ಸಲಹೆಗಾರ ಎಂ.ಬಿ.ಮರಂಕಲ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ, ಐವರು ಹಿರಿಯ ಅಧಿಕಾರಿಗಳು ಹಾಗೂ ಶೆಟ್ಟರ್ ಆಪ್ತ ಕಾರ್ಯದರ್ಶಿ ಎಸ್.ಧವಳೇಶ್ವರ ಇದ್ದಾರೆ. 20ರಂದು ಆರ್ಥಿಕ ವೇದಿಕೆಯ ವಾರ್ಷಿಕ ಸಭೆಗಳಲ್ಲಿ ಭಾಗವಹಿಸುವುದರ ಜತೆಗೆ ಕರ್ನಾಟಕ ಪೆವಿಲಿಯನ್ ಅನ್ನು ಬಿಎಸ್​ವೈ
ಉದ್ಘಾಟಿಸುವರು. 21ರಂದು ಇಡೀ ದಿನ ಸಭೆಗಳಲ್ಲಿ ಭಾಗಿಯಾಗಲಿದ್ದು, 22 ರಂದು ಇನ್ವೆಸ್ಟ್ ಕರ್ನಾಟಕ ಅನಾವರಣಗೊಳಿಸುವರು. ವ್ಯಾಪಾರ-ವಹಿವಾಟು ಕ್ಷೇತ್ರದ ಜಾಗತಿಕ ನಾಯಕರ ಜತೆ ದ್ವಿಪಕ್ಷೀಯ ಸಮಾಲೋಚನೆ ನಡೆಸಲಿದ್ದಾರೆ. 23ರಂದು ಸಂಜೆ 5.30ಕ್ಕೆ ಮರು ಪ್ರಯಾಣ ಬೆಳೆಸಲಿದ್ದು, ಜೂರಿಚ್ ವಿಮಾನ ನಿಲ್ದಾಣದಿಂದ ರಾತ್ರಿ 8.55ಕ್ಕೆ ಹೊರಟು ಮರುದಿನ ಬೆಳಗ್ಗೆ 7.10ಕ್ಕೆ ದುಬೈ ತಲುಪುವರು. ಅಲ್ಲಿಂದ 24ರ ಬೆಳಗ್ಗೆ 10ಕ್ಕೆ ಪ್ರಯಾಣ ಬೆಳೆಸಿ, ಮಧ್ಯಾಹ್ನ 3.10ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
