ಬೆಂಗಳೂರು:ಸಾರಿಗೆ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದ್ದರೂ ಅದನ್ನು ತಣ್ಣಗಾಗಿಸುವಲ್ಲಿ ವಿಫಲವಾಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಶನಿವಾರ ಎಲ್ಲಿಯೂ ಕಾಣಿಸದೆ ಇರುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಶುಕ್ರವಾರ ಸಂಜೆ ನಡೆದ ಸಾರಿಗೆ ನೌಕರರ ಸಂಘಟನೆಗಳ ಮುಖಂಡರೊಂದಿಗಿನ ಸಭೆ ವಿಫಲವಾಗಿತ್ತು. ಶನಿವಾರ ಸಿಎಂ ನೇತೃತ್ವದಲ್ಲಿ ಕಾರ್ವಿುಕ ಸಂಘಟನೆಗಳ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಬೇಕಾದ ಸವದಿ ಬೆಳಗ್ಗೆಯಿಂದಲೇ ಪತ್ತೆ ಇಲ್ಲ. ಬೆಂಗಳೂರಿನ ಜಯಮಹಲ್​ನ ಸರ್ಕಾರಿ ವಸತಿ ಗೃಹದಲ್ಲಿಯೂ ಇರಲಿಲ್ಲ, ಸ್ವಂತ ಅಪಾರ್ಟ್ ಮೆಂಟ್​ನಲ್ಲಿಯೂ ಇರಲಿಲ್ಲ. ಸರ್ಕಾರಿ ವಾಹನವನ್ನು ಬಿಟ್ಟು ಅವರು ಖಾಸಗಿ ವಾಹನದಲ್ಲಿ ಮಧ್ಯಾಹ್ನದ ತನಕ ಯಾರ ಸಂಪರ್ಕಕ್ಕೂ ಸಿಗದೆ ಎಲ್ಲಿದ್ದರು ಎಂಬುದೇ ಆಶ್ಚರ್ಯಕರವಾಗಿದೆ.
ಸಾರಿಗೆ ಸಚಿವರು ಕೈಗೆ ಸಿಗದೆ ಇರುವುದರಿಂದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕರೆಸಿಕೊಂಡ ಯಡಿಯೂರಪ್ಪ, ನೌಕರರ ಮುಷ್ಕರಕ್ಕೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಸುದೀರ್ಘ ಮಾತುಕತೆ ನಡೆಸಿದರು. ಪೊಲೀಸ್ ರಕ್ಷಣೆಯಲ್ಲಿ ಬಸ್​ಗಳ ಸಂಚಾರ ಮಾಡಿಸುವುದು, ಮುಷ್ಕರನಿರತ ನೌಕರರ ಬಂಧನ ಇತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಆದರೆ ಎಸ್ಮಾ ಜಾರಿ ಕೊನೆಯ ಅಸ್ತ್ರವಾಗಲಿ, ಮನವೊಲಿಕೆಯೇ ಮೊದಲನೇ ಕ್ರಮವಾಗಲಿ ಎಂದು ಸಿಎಂ ಸೂಚನೆ ನೀಡಿದರು.
ಸವದಿ ಅವರನ್ನು ಸಂರ್ಪಸಿದ ಮುಖ್ಯಮಂತ್ರಿ ಕೂಡಲೇ ಮುಷ್ಕರ ನಿಲ್ಲಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರೆಂದು ಹೇಳಲಾಗಿದೆ. ಮಧ್ಯಾಹ್ನದ ನಂತರ ಸವದಿ ಬಹಿರಂಗವಾಗಿ ಕಾಣಿಸಿಕೊಂಡರು. ಅಜ್ಞಾತ ಸ್ಥಳದಲ್ಲಿ ನೌಕರರರ ಸಂಘಟನೆಗಳೊಂದಿಗೆ ಚರ್ಚೆ ನಡೆಸುತ್ತಿದ್ದರೆಂದು ಮೂಲಗಳು ಹೇಳಿವೆ.
ಕೋಡಿಹಳ್ಳಿ ವಿರುದ್ಧ ಕಿಡಿ
ಬೆಂಗಳೂರು: ಸಾರಿಗೆ ನೌಕರರ ಮುಂದುವರಿದ ಮುಷ್ಕರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ಮಧ್ಯೆ ಚಳವಳಿ ನೇತೃತ್ವ ವಹಿಸಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸಿಎಂ ಬಿಎಸ್ ಯಡಿಯೂರಪ್ಪ ಕಿಡಿಕಾರಿದ್ದಾರೆ. ‘ದುರುದ್ದೇಶದಿಂದ ಕೆಲವು ಸಾರಿಗೆ ನೌಕರರನ್ನು ಎತ್ತಿಕಟ್ಟಿ ಮುಷ್ಕರ ನಡೆಸಲು ಕುಮ್ಮಕ್ಕು ನೀಡಿದ್ದಾರೆ. ಅಲ್ಲದೆ, ಸಾರಿಗೆ ಸಂಸ್ಥೆ ಹಾಗೂ ಬಿಎಂಟಿಸಿ ಬಸ್​ಗಳ ಮೇಲೆ ಕಲ್ಲು ತೂರಾಟ ನಡೆಸಲು ಪ್ರಚೋದಿಸಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಕ್ಕೆ ಕಾರಣರಾಗಿದ್ದಾರೆ’ ಎಂದು ಸಿಎಂ ಹರಿಹಾಯ್ದಿದ್ದಾರೆ. ಇದೇ ವೇಳೆ ಮಾಜಿ ಸಿಎಂ ಎಚ್.ಡಿ. ಕುಮಾರ ಸ್ವಾಮಿ ಪರ ಬ್ಯಾಟಿಂಗ್ ಮಾಡಿರುವ ಬಿಎಸ್​ವೈ, ಎಚ್​ಡಿಕೆ ಬಗ್ಗೆ ಕೋಡಿಹಳ್ಳಿ ಲಘುವಾಗಿ ಮಾತನಾಡಿರುವುದನ್ನು ಖಂಡಿಸಿದ್ದಾರೆ.
ಮಾತುಕತೆಗೆ ಮನವಿ:ಸಾರ್ವಜನಿಕ ಹಿತದೃಷ್ಟಿಯಿಂದ ಕೂಡಲೇ ಮುಷ್ಕರ ನಿಲ್ಲಿಸಿ ಕರ್ತವ್ಯಕ್ಕೆ ಮರಳಿ, ನಂತರ ಸಾರಿಗೆ ಸಚಿವರ ಜತೆ ಮಾತುಕತೆಗೆ ಬರಬೇಕು ಎಂದು ಬಿಎಸ್​ವೈ ನೌಕರರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + ten =
Remember me
