ಮೈಸೂರು:ಬಿ.ಎಸ್​. ಯಡಿಯೂರಪ್ಪ ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್​ ಆಗಿದ್ದು, ಸಚಿವ ಸ್ಥಾನಕ್ಕಾಗಿ ಚಾತಕಪಕ್ಷಿಗಳಂತೆ ಕಾಯುತ್ತಿದ್ದವರ ಮೊಗದಲ್ಲೀಗ ಮಂದಹಾಸ ಮೂಡಿದೆ.
ಇದೇ ತಿಂಗಳ(ಜನವರಿ) 13 ಅಥವಾ 14ರಂದು ಸಚಿವ ಸಂಪುಟ ವಿಸ್ತರಣೆ ಆಗಲಿದೆ. 13ರಂದು ಅಮಾವಾಸ್ಯೆ ಇದೆ. ಅಂದು ಸಂಜೆ 4 ಗಂಟೆ ಬಳಿಕ ಅಮಾವಾಸ್ಯೆ ಇರುವುದಿಲ್ಲ. ಇದೆಲ್ಲವನ್ನು ನೋಡಿಕೊಂಡೇ ತೀರ್ಮಾನ ಮಾಡಲಾಗಿದೆ‌ ಎಂದು ಸುತ್ತೂರಿನಲ್ಲಿ ಸೋಮವಾರ ಬೆಳಗ್ಗೆ ಯಡಿಯೂರಪ್ಪ ಹೇಳಿದರು.ಇದನ್ನೂ ಓದಿರಿಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್​ ದಾಖಲು
ಇದನ್ನೂ ಮುನ್ನಾ ಮಾಜಿ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿ ಅವರ‌ 54ನೇ ಪುಣ್ಯತಿಥಿ ನಿಮಿತ್ತ ವಿಧಾನಸೌಧದ ಬಳಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಸಿಎಂ, ಖಾಲಿಯಿರುವ 7 ಸ್ಥಾನಗಳನ್ನು ತುಂಬುವುದು ಖಚಿತ. ಬುಧವಾರ ಇಲ್ಲವೇ ಗುರುವಾರ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಲಿದೆ ಎಂದಿದ್ದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೂ ಆಹ್ವಾನಿಸಿದ್ದು, ಅವರ ಅನುಕೂಲತೆ ನೋಡಿಕೊಂಡು ದಿನಾಂಕ ಹಾಗೂ ಸಮಯ‌ ನಿಗದಿ ಮಾಡಲಾಗುವುದು ಎಂದಿದ್ದರು.
ಶಾಸಕ ಮನಗೂಳಿ ಏರ್​ಲಿಫ್ಟ್ ಮೂಲಕ ಆಸ್ಪತ್ರೆಗೆ ದಾಖಲು

ಪರಸ್ತ್ರೀ ಜತೆ ಮೂರು ಮಕ್ಕಳ ತಂದೆಗೆ ಲವ್ವಿಡವ್ವಿ! ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದವರ ಕಥೆ ಏನಾಯ್ತು?

ಲೈವ್​ನಲ್ಲೇ ವಿಷ ಕುಡಿದ ಅರ್ಚಕ! 3 ದಿನದ ಬಳಿಕ ಸೆಲ್ಫಿವಿಡಿಯೋ ವೈರಲ್​, ಡೆತ್​ನೋಟ್​ನಲ್ಲಿದೆ ಸ್ಫೋಟಕ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 11 =
Remember me
