ಬೆಂಗಳೂರು:ದೇವಸ್ಥಾನ, ಮಸೀದಿ, ಚರ್ಚ್​ಗಳನ್ನು ತೆರೆಯುವುದು ಸೇರಿ ಹಲವು ಚಟುವಟಿಕೆಗಳನ್ನು ಮರು ಆರಂಭಿಸಲು ಚಿಂತನೆ ನಡೆಸಿದ್ದು, ಈ ಬಗ್ಗೆ ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಹೇಳಿದ್ದಾರೆ.
ಇದನ್ನೂ ಓದಿ:25 ಅಡಿ ಆಳದ ಗಟಾರಕ್ಕೆ ಬಿದ್ದ ಒಂದೂವರೆ ವರ್ಷದ ಹೆಣ್ಮಗು ಬಚಾವ್​
ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆಯಲಾಗಿದೆ. ಅಲ್ಲಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ದೇವಸ್ಥಾನಗಳಿಗೆ ಅನುಮತಿ ಕೊಟ್ಟಿದ್ದೇವೆ. ಚರ್ಚ್​, ಮಸೀದಿಗಳನ್ನು ತೆರೆಯುವುದಕ್ಕೂ ಅವಕಾಶ ಮಾಡಿಕೊಡ್ತೇವೆ. ಇದರಲ್ಲಿ ತಾರತಮ್ಯ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:VIDEO: ಮಿಡತೆಗಳ ಹಾವಳಿ ಹೇಗಿದೆ ನೋಡಿ!
ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ತೆರೆದ ಬಳಿಕ ಅನುಸರಿಸಬೇಕಾದ ನಿಬಂಧನೆಗಳ ವಿಚಾರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರೂ ಕೆಲವು ಸಲಹೆಗಳನ್ನು ಕೊಟ್ಟಿದ್ದಾರೆ. ಅವುಗಳನ್ನೂ ಗಮನದಲ್ಲಿ ಇರಿಸಿಕೊಳ್ಳಲಾಗಿದೆ. ದೇವಸ್ಥಾನಗಳನ್ನು ತೆರೆದರೆ, ಮಸೀದಿ, ಚರ್ಚ್​ಗಳನ್ನೂ ತೆರೆಯಲಾಗುತ್ತದೆ ಎಂದು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಭೀಕರ ಕರಡಿ ದಾಳಿಗೆ ತತ್ತರಿಸಿದ ಚನ್ನಪಟ್ಟಣ: ನಗರಸಭೆ ಮಾಜಿ ಸದಸ್ಯೆ ಸ್ಥಿತಿ ಗಂಭೀರ
ಈ ನಡುವೆ, ಜೂನ್ 1 ರಿಂದ ದೇವಸ್ಥಾನಗಳನ್ನು ತೆರೆಯುವುದಕ್ಕೆ ಅವಕಾಶ ಕೊಟ್ಟ ಸರ್ಕಾರದ ಕ್ರಮವನ್ನು ಮಂಗಳೂರಿನಲ್ಲಿ ಟೀಕಿಸಿರುವ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ ಎಸ್ ಮಸೂದ್, ಕೇವಲ ದೇವಸ್ಥಾನ ಯಾಕೆ? ಮಸೀದಿ‌, ಚರ್ಚ್ ಗೂ ಅವಕಾಶ ನೀಡಿ, ಎಲ್ಲಾ ಧರ್ಮದ ಪ್ರಾರ್ಥನಾ ಕೇಂದ್ರ ಗಳಿಗೆ ಅವಕಾಶ ನೀಡಿ ಎಂದು ಆಗ್ರಹಿಸಿದ್ದಾರೆ.
ಕಬಳಿಕೆದಾರರಿಂದ 2 ಎಕರೆ ಭೂಮಿ ರಕ್ಷಿಸಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + seven =
Remember me
