ನೂತನ ವರ್ಷ ಆರಂಭವಾಗುವ ಸಂದರ್ಭದಲ್ಲಿ ಎಲ್ಲರೂ ಏನಾದರೊಂದು ನಿರ್ಣಯ ಕೈಗೊಳ್ಳುವುದು ರೂಢಿ. ಇದಕ್ಕೆ ರಾಜಕಾರಣಿಗಳು, ಕ್ರೀಡಾಪಟುಗಳು, ಸಿನಿಮಾರಂಗದ ಸೆಲೆಬ್ರಿಟಿಗಳು ಮುಂತಾಗಿ ಯಾರೂ ಹೊರತಲ್ಲ. 2020ರ ಹೊಸ್ತಿಲಲ್ಲಿ ಯಾರ್ಯಾರು ಏನೇನು ಸಂಕಲ್ಪ ಮಾಡಿರಬಹುದು ಎಂಬುದನ್ನು ಕನ್ನಡದ ಖ್ಯಾತ ಹಾಸ್ಯ ಸಾಹಿತಿ, ‘ವಿಜಯವಾಣಿ’ಯ ಅಂಕಣಕಾರ ಎಚ್. ಡುಂಡಿರಾಜ್ Fun ಶೈಲಿಯಲ್ಲಿ ಹೇಳ್ತಾ ಇದ್ದಾರೆ, ಕೇಳೋಣ ಬನ್ನಿ.
ಯಡಿಯೂರಪ್ಪ
ಹೇಗಾದರೂ ಮಾಡಿ ಸಿಎಂ ಕುರ್ಚಿ ಹಿಡಿಯಬೇಕೆಂಬ ಕಳೆದ ವರ್ಷದ ಸಂಕಲ್ಪ ಈಡೇರಿದೆ. ಅದನ್ನು ಕಳೆದುಕೊಳ್ಳಬಾರದು ಅನ್ನುವುದೇ ಹೊಸ ವರ್ಷದ ಸಂಕಲ್ಪ. ಅದಕ್ಕಾಗಿ ಇನ್ನಷ್ಟು ಆಪರೇಷನ್ ಮಾಡಲು ತೆರೆಮರೆಯ ಸಿದ್ಧತೆಗಳು ನಡೆಯುತ್ತಿವೆ. ಮಹಾರಾಷ್ಟ್ರದಲ್ಲಿ ನಾವು ಅಧಿಕಾರ ಕಳೆದುಕೊಂಡಿರುವುದರಿಂದ ಈ ಬಾರಿ ಮುಂಬೈಗೆ ಅತೃಪ್ತರನ್ನು ಕಳಿಸುವಂತಿಲ್ಲ. ಹೀಗಾಗಿ ವಿಧಾನಸೌಧದಲ್ಲೆ ಒಂದು ಆಪರೇಷನ್ ಥಿಯೇಟರ್ ಮಾಡುವ ಯೋಚನೆ ಇದೆ. ಜೊತೆಗೆ ಒಂದು ಸಿನಿಮಾ ನಿರ್ವಿುಸುವ ಯೋಜನೆಯೂ ಉಂಟು. ಹಲವು ಸಲ ವಿಫಲವಾದರೂ ಛಲ ಬಿಡದೆ ಆಪರೇಷನ್ ಕಮಲ ಮಾಡಿ ಸಿಎಂ ಹೇಗೆ ಆದೆ ಅನ್ನುವ ಕುರಿತು ನಾಗಾಭರಣ ಅವರ ನಿರ್ದೇಶನದಲ್ಲಿ ‘ಮರಳಿ ಯತ್ನವ ಮಾಡು’ ಎನ್ನುವ ಸಾಕ್ಷ್ಯಚಿತ್ರ ನಿರ್ವಿುಸಿ ದೇವೇಂದ್ರ ಫಡ್ನವೀಸ್ ಅವರಿಗೆ ಕಳುಹಿಸುತ್ತೇನೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
