ಬೆಂಗಳೂರು :ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ಮತ್ತೆ ಕುತೂಹಲ ಕೆರಳಿಸಿದೆ.  ಇತ್ತೀಚಿನ ದಿನಗಳಲ್ಲಿ ಕುಮಾರಸ್ವಾಮಿ ಮತ್ತು ಸಿಎಂ ಭೇಟಿ ಹೆಚ್ಚಿದ್ದು, ರಾಜ್ಯ ರಾಜಕೀಯದಲ್ಲಿ ನಾನಾ ಪುಕಾರುಗಳು ಹಬ್ಬಿವೆ.ಆದರೆ, ಇಂದಿನ ಭೇಟಿ ಇನ್ನು ವಿಶೇಷ ಅರ್ಥ ಬಂದಿದೆ. ಖುದ್ದು ಸಿಎಂ ಯಡಿಯೂರಪ್ಪ ಅವರೇ ಕುಮಾರಸ್ವಾಮಿ ಅವರನ್ನು ಬರ ಮಾಡಿಕೊಂಡು ಚರ್ಚಿಸಿರುವುದು ನಾನಾ ಊಹಾಪೋಹಗಳಿಗೆ ಕಾರಣವಾಗಿದೆ.
ಸಿಎಂ ಬದಲಾವಣೆ ಕೂಗು ಕೇಳಿ ಬಂದಾಗಲೆಲ್ಲ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಭೇಟಿಯಾಗುತ್ತಿರುವುದು ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ಅಚ್ಚರಿ ಮೂಡಿಸಿರುವುದು ಸುಳ್ಳಲ್ಲ.  ಶುಕ್ರವಾರ ಸಿಎಂ ಭೇಟಿ ಮಾಡಿದ್ದ ಕುಮಾರಸ್ವಾಮಿ, ಉಪ ಚುನಾವಣೆ ಮತ್ತು ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯ ಗೆಲುವಿನ ಬಗ್ಗೆ ಮುಖ್ಯಮಂತ್ರಿಗಳನ್ನು ಶ್ಲಾಸಿದ್ದಾರೆ. ಬಿಜೆಪಿಯ ರ್ಪಾಮೆನ್ಸ್ ಬಗ್ಗೆ ಕುಮಾರಸ್ವಾಮಿ ಹಾಡಿ ಹೊಗಳಿದರು ಎಂದು ಮೂಲಗಳು ತಿಳಿಸಿವೆ.
ನಾವು ನಿಮ್ಮೊಂದಿಗಿದ್ದೇವೆ:ಸಂಪುಟ ರಚನೆ ವಿಚಾರದಲ್ಲಿ ಕುಮಾರಸ್ವಾಮಿ ಅವರು ಯಡಿಯೂರಪ್ಪಗೆ ಎಚ್ಚರಿಕೆಯ ಹೆಜ್ಜೆ ಇಡುವಂತೆ ಸಲಹೆ ನೀಡಿದ್ದಾರೆ. ಯಾವುದೇ ಒತ್ತಡಕ್ಕೆ ಮಣಿಯಬೇಡಿ ಎಂದು ಕಿವಿ ಮಾತು ಹೇಳಿದರು ಎನ್ನಲಾಗಿದೆ.
ಅವಧಿ ಪೂರ್ಣಗೊಳಿಸಿ:ಯಾರು ಏನೇ ತಂತ್ರ, ಕುತಂತ್ರ ಮಾಡಿದರೂ ನೀವು ಹೆಜ್ಜೆ ಹಿಂದೆ ಇಡಬೇಡಿ. ನಿಮ್ಮ ಅವಧಿ ಪೂರ್ಣಗೊಳಿಸಿ. ನಿಮಗೆ ನಮ್ಮ ಸಹಕಾರ ಎಂದಿಗೂ ಇರುತ್ತದೆ ಎಂದು ಭರವಸೆ ನೀಡಿದರು ಎಂದು ಹೇಳಲಾಗುತ್ತಿದೆ.
ಅಭಿವೃದ್ಧಿ ಕಡೆಗೆ ಗಮನಕೊಡಿ:ಕರೊನಾ ಸೋಂಕು ಹರಡುವಿಕೆ ಹತೋಟಿಗೆ ಬಂದಿದೆ. ಅಭಿವೃದ್ಧಿಯ ಕಡೆಗೆ ನೀವು ಗಮನಕೊಡಿ. ನಿಮ್ಮೆಲ್ಲ ಕೆಲಸಗಳಿಗೆ ನಾವು ಸಹಕಾರ ನೀಡುತ್ತೇವೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಹೇಳಿರುವುದಾಗಿ ತಿಳಿದು ಬಂದಿದೆ. ಇದೇ ಸಂದರ್ಭದಲ್ಲಿ ಉಭಯ ನಾಯಕರು ಪರಸ್ಪರ ದೀಪಾವಳಿ ಶುಭಾಶಯ ವಿನಿಯಮ ಮಾಡಿಕೊಂಡಿದ್ದಾರೆ. ಭೇಟಿ ಬಗ್ಗೆ ಇಬ್ಬರೂ ನಾಯಕರು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪದೇಪದೆ ಸಾಯುತ್ತೇನೆಂದು ಹೆದರಿಸುತ್ತಿದ್ದ ಹೆಂಡತಿಗೆ ಡೈವೋರ್ಸ್​ ಕೊಟ್ಟ ಗಂಡ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + thirteen =
Remember me
