ಮೈಸೂರು: ಕಾವೇರಿ ತುಂಬಿ ಹರಿಯುತ್ತಿದ್ದು, ನದಿಗೆ ಬಾಗಿನ ಸಮರ್ಪಿಸಲು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಕೆಆರ್​ಎಸ್​ ಕಡೆಗೆ ಹೊರಟಿದ್ದು, ಮಧ್ಯಾಹ್ನ 12.30 ಸುಮಾರಿಗೆ ಬಾಗಿನ ಸಮರ್ಪಣೆ ಮಾಡಲಿದ್ದಾರೆ. ಬಹಳ ದಿನಗಳ ನಂತರ ಪ್ರವಾಸ ಆರಂಭಿಸಿರುವುದಾಗಿ ಹೇಳಿರುವ ಸಿಎಂ, ಇನ್ನು ಮುಂದೆ ಜಿಲ್ಲಾ ಪ್ರವಾಸವನ್ನೂ ಶುರುಮಾಡುವುದಾಗಿ ಹೇಳಿದ್ದಾರೆ.
ಕೆಆರ್​ಎಸ್​ ಅಣೆಕಟ್ಟು ಪ್ರದೇಶದಲ್ಲಿ ಬಾಗಿನ ಸಮರ್ಪಣೆಗೆ ಸಿದ್ಧತೆ ನಡೆದಿದ್ದು, ಹಬ್ಬದ ಸಂಭ್ರಮ ಸಡಗರ ನೆಲೆಸಿದೆ. ವೈದಿಕ ಭಾನುಪ್ರಕಾಶ್ ಶರ್ಮಾ ಅವರು ಬಾಗಿನ ಸಮರ್ಪಣೆಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತಿದ್ದಾರೆ. ಆಹ್ವಾನಿತ ಸಾರ್ವಜನಿಕರಿಗಷ್ಟೇ ಇಲ್ಲಿ ಭಾಗವಹಿಸಲು ಅವಕಾಶವಿದೆ. ಸ್ಥಳದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುತ್ತಿದ್ದು, ಸಿಎಂ ಅವರನ್ನು ಸ್ವಾಗತಿಸಲು ಎಲ್ಲರೂ ಸಜ್ಜಾಗಿದ್ದಾರೆ.
ಇದನ್ನೂ ಓದಿ:ಶ್ರೀಶೈಲಂನಲ್ಲಿರುವ ತೆಲಂಗಾಣ ಪವರ್ ಸ್ಟೇಷನ್​ನಲ್ಲಿ ಭಾರಿ ಬೆಂಕಿ ದುರಂತ: 9 ಜನ ಸಿಲುಕಿರುವ ಶಂಕೆ
ಈ ನಡುವೆ, ಸಿಎಂ ಬಿಎಸ್​ವೈ ಅವರಿಗೆ ಪ್ರತಿಭಟನೆಯ ಬಿಸಿಯೂ ತಟ್ಟಲಿದೆ. ರೈತ ಸಂಘ ಮತ್ತು ಇತರೆ ಸಂಘಟನೆಗಳವರು ಕಪ್ಪು ಬಾವುಟ ಪ್ರದರ್ಶಿಸಲು ಸಿದ್ಧತೆ ನಡೆಸಿದ್ದಾರೆ. ಅಣೆಕಟ್ಟೆ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂಬ ಬೇಡಿಕೆ ಈಡೇರಿಸಲು ಆಗ್ರಹಿಸಿ ಈ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ ಅವರು. (ದಿಗ್ವಿಜಯ ನ್ಯೂಸ್)
ಲಿಫ್ಟ್​ ಕೊಡ್ತೇವೆ ಬಾ ಎಂದು ಮಹಿಳೆಯನ್ನು ಕರೆದೊಯ್ದು ಗ್ಯಾಂಗ್​ ರೇಪ್ ಮಾಡಿದ್ರು ದುರುಳರು

Sign in to your account
Please enter an answer in digits:one + 2 =
Remember me
