ಬೆಂಗಳೂರು:ಕರ್ನಾಟಕದ ರೆಬೆಲ್ ಮುಖ್ಯಮಂತ್ರಿ ಎಂದೇ ಕರೆಸಿಕೊಂಡಿದ್ದ ಬಿ.ಎಸ್​.ಯಡಿಯೂರಪ್ಪ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. 74ರ ವಯಸ್ಸಿನಲ್ಲೂ ಅತ್ಯಂತ ಹುಮ್ಮಸ್ಸಿನಿಂದ ರಾಜಕೀಯದಲ್ಲಿ ಕಾಣಿಸಿಕೊಂಡಿದ್ದ ನಾಯಕನ ನಿರ್ಗಮನದ ಬಗ್ಗೆ ಅನೇಕರು ಬೇಸರ ವ್ಯಕ್ತ ಪಡಿಸಿದ್ದಾರೆ. ಬಿಎಸ್​ವೈ ಅವರ ಜೀವನದ ಸಣ್ಣ ಪರಿಚಯ ಇಲ್ಲಿದೆ.
ಯಡಿಯೂರಪ್ಪ ಅವರು 1943ರ ಫೆವ್ರವರಿ 27ರಂದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಜನಿಸಿದರು. ಅವರ ತಂದೆ ಸಿದ್ದಲಿಂಗಪ್ಪ ಮತ್ತು ತಾಯಿ ಪುಟ್ಟತಾಯಮ್ಮ. ನಾಲ್ಕು ವರ್ಷವಿದ್ದಾಗಲೇ ತಾಯಿಯನ್ನು ಕಳೆದುಕೊಂಡ ಅವರು ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪೂರೈಸಿದರು. ನಂತರ 1965ರಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಥಮ ದರ್ಜೆಯ ಗುಮಾಸ್ತರಾಗಿ ವೃತ್ತಿಜೀವನ ಆರಂಭಿಸಿದರು. ಕೆಲವೇ ತಿಂಗಳುಗಳಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ, ಮಂಡ್ಯದಿಂದ ಶಿವಮೊಗ್ಗದ ಶಿಕಾರಿಪುರದ ಕಡೆ ಪ್ರಯಾಣ ಬೆಳೆಸಿದರು. ಅಲ್ಲಿ ವೀರಭದ್ರ ಶಾಸ್ತ್ರಿ ಎನ್ನುವವರ ಶಂಕರ ಅಕ್ಕಿ ಗಿರಣಿಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡಿದರು. 1967ರಲ್ಲಿ ಅದೇ ಊರಿನ ಮೈತ್ರಾದೇವಿಯನ್ನು ಮದುವೆಯಾದರು. ಸಂಸಾರ ಬೆಳೆದ ನಂತರ ಶಿವಮೊಗ್ಗದಲ್ಲಿ ಹಾರ್ಡ್​ವೇರ್ ಮಳಿಗೆ ತೆರೆದು ಕೆಲಸ ಆರಂಭಿಸಿದರು.
ಅದಾಗಲೇ ಆರ್​ಎಸ್​ಎಸ್​ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಯಡಿಯೂರಪ್ಪ ಅವರು 1970ರಲ್ಲಿ ಸಂಘಟನೆಯ ಶಿಕಾರಿಪುರ ಘಟಕದ ಕಾರ್ಯವಾಹಕರಾಗಿ ಆಯ್ಕೆಯಾದರು. ನಂತರ ತಾಲೂಕು ಅಧ್ಯಕ್ಷರಾಗಿ, 1972ರಲ್ಲಿ ಶಿಕಾರಿಪುರ ನಗರ ಪಾಲಿಕೆಗೂ ಚುನಾಯಿತರಾದರು. 1985ರಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ, 1988ರಲ್ಲಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡರು. 1983ರಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ ಅವರು ಒಟ್ಟು ಆರು ಬಾರಿ ಶಿಕಾರಿಪುರ ಕ್ಷೇತ್ರದ ಶಾಸಕರಾದರು. ಅದಾದ ನಂತರ ಅವರ ರಾಜಕೀಯ ಜೀವನ ಅನೇಕ ಮಹತ್ತರ ತಿರುವುಗಳೊಂದಿಗೆ ಸಾಗಿತು.
ಮುಂಬೈ ಮಳೆಗೆ ಬಲಿಯಾದವರ ಸಂಖ್ಯೆ 164ಕ್ಕೆ ಏರಿಕೆ; ಇನ್ನೂ ಸಿಕ್ಕಿಲ್ಲ 100 ಮಂದಿಯ ಸುಳಿವು

ಮಗನ ಬೆಡ್ ಕ್ಲೀನ್ ಮಾಡಲು ಬಂದ ಅಮ್ಮನಿಗೆ ಶಾಕ್! ಅಯ್ಯಯ್ಯೋ ಇಲ್ಲಿ ನೋಡಿ ಎಂದು ವಿಡಿಯೋ ಹಂಚಿಕೊಂಡ ಮಹಿಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 4 =
Remember me
