ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಕರೆದಿದ್ದ ಬಿಜೆಪಿ ಶಾಸಕರ ಸಭೆಯಲ್ಲಿ ಕಾರವಾರದ ಶಾಸಕಿ ರೂಪಾಲಿ ನಾಯಕ್ ಕಣ್ಣೀರಿಟ್ಟಿದ್ದಾರೆ.
ಸಭೆಯಲ್ಲಿದ್ದ ಕೆಲ ಸಚಿವರು, ‘ದಯವಿಟ್ಟು ಕಣ್ಣೀರು ಹಾಕಬೇಡಿ, ಈ ವಿಚಾರ ಹೊರಗೆ ಗೊತ್ತಾದರೆ, ಸರ್ಕಾರದ ಮಾನ ಹರಾಜಾಗುತ್ತದೆ’ ಎಂದು ರೂಪಾಲಿ ನಾಯಕ್​ರಲ್ಲಿ ಮನವಿ ಮಾಡಿದರೆಂದು ಬಿಜೆಪಿಯ ಹಿರಿಯ ಶಾಸಕರೊಬ್ಬರು ಸ್ಪಷ್ಟಪಡಿಸಿದ್ದಾರೆ.ಇದನ್ನೂ ಓದಿರಿರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುಲು ಆ ಐವರು ಕಾರಣ, ಹಾಗಾಗಿ ಈಶ್ವರಪ್ಪಗೆ ಸಿಎಂ ಗಾದಿ ಕೊಡಿ…
ಉತ್ತರ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರ ವಿರುದ್ಧ ದೂರುಗಳಿದ್ದಕ್ಕೆ ಅವರನ್ನ ಅಮಾನತು ಮಾಡಿಸಲಾಗಿತ್ತು. ಆದರೆ ಆ ಅಧಿಕಾರಿ ಪ್ರಭಾವ ಬಳಸಿ ಅಮಾನತು ರದ್ದು ಪಡಿಸಿಕೊಂಡು ಮತ್ತೆ ಅದೇ ಹುದ್ದೆಗೆ ಬಂದು ಶಾಸಕಿಗೆ ಸಡ್ಡು ಹೊಡೆದಿದ್ದರು. ಇದರಿಂದ ಆಕ್ರೋಶಗೊಂಡಿದ್ದ ರೂಪಾಲಿ, ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಶಾಸಕರ ಮಾತಿಗೆ ಬೆಲೆ ಇಲ್ಲ. ಈ ರೀತಿಯಾದರೆ ಶಾಸಕರಿಗೆ ಕ್ಷೇತ್ರದಲ್ಲಿ ಏನು ಬೆಲೆ ಉಳಿಯಲಿದೆ? ಯಾವ ಮುಖವಿಟ್ಟುಕೊಂಡು ಓಡಾಡುವುದು? ಎಂದು ಕಣ್ಣೀರು ಹಾಕಿದ್ದಾರೆ.
ಆಗ ಸಭೆಯಲ್ಲಿದ್ದ ಇತರ ಹಿರಿಯ ಶಾಸಕರು ಸಹ ರೂಪಾಲಿ ಮಾತಿಗೆ ದನಿಗೂಡಿಸಿ, ‘ವರ್ಗಾವಣೆ ವಿಚಾರದಲ್ಲಿ ನಡೆಯುತ್ತಿರುವ ದಂಧೆಗೆ ಮೊದಲು ಕಡಿವಾಣ ಹಾಕಿ ಶಾಸಕರ ಮರ್ಯಾದೆ ಉಳಿಸಿ’ ಎಂದು ಒತ್ತಾಯ ಮಾಡಿದರೆಂದು ಮೂಲಗಳು ಖಚಿತ ಪಡಿಸಿವೆ.
ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಅಣ್ಣ-ತಮ್ಮ ಆತ್ಮಹತ್ಯೆ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

ನದಿ ದಡದಲ್ಲಿ ಸಿಕ್ಕ ಬೈಕ್​, ರಕ್ತದ ಕಲೆಯನ್ನ ಬೆನ್ನಟ್ಟಿದ್ದವರಿಗೆ ಕಾದಿತ್ತು ಶಾಕ್​!

24ರ ಯುವತಿ ಜತೆ ಮದುವೆಯಾಗಿ ಖುಷಿಯಾಗಿದ್ದ ಬೆನ್ನಲ್ಲೇ 54ರ ಫಾಸ್ಟರ್​ಗೆ ಶಾಕ್​!

ಕಿಡ್ನಿ ಮಾರಿ ಹಣ ಕೊಡಲು ಯತ್ನಿಸಿದೆ… ಆಗಲಿಲ್ಲ ಎನ್ನುತ್ತಲೇ ರೈಲಿಗೆ ತಲೆಕೊಟ್ಟ: ಡೆತ್​ನೋಟ್​ನಲ್ಲಿದೆ ಬೆಚ್ಚಿಬೀಳಿಸೋ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 19 =
Remember me
