ಬೆಂಗಳೂರು:ಕಳೆದ ಒಂದುವಾರದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡೆ ಬಿಜೆಪಿ ಪಾಳಯದಲ್ಲಿ ಕುತೂಹಲ ಹುಟ್ಟಿಸಿದೆ. ನಿಗಮ ಮಂಡಳಿಗೆ ಸರಣಿ ನೇಮಕ ಮಾಡಿದ್ದ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ತುರ್ತು ಸಂಪುಟ ಸಭೆ ಕರೆದಿದ್ದಾರೆ. ಜತೆಗೆ ರಾಜ್ಯದ ಸಂಸದರ ಸಭೆಯನ್ನೂ ಕರೆದಿದ್ದಾರೆ.
ಕಳೆದ ವಾರವಷ್ಟೇ ನಡೆದಿದ್ದ ಸಂಪುಟ ಸಭೆಯಲ್ಲಿ ನಾಲ್ಕಾರು ಪ್ರಮುಖ ವಿಷಯ ಹೊರತು ಹೆಚ್ಚಿನ ವಿಷಯಗಳು ಚರ್ಚೆಗೆ ಬಂದಿರಲಿಲ್ಲ. ಕೇವಲ 18 ನಿಮಿಷಯದಲ್ಲೇ ಸಂಪುಟ ಸಭೆ ಮುಗಿದಿತ್ತು.
ಇದೀಗ ಪುನಃ ಸಂಪುಟ ಸಭೆ ಕರೆದಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಬಿಎಸ್‌ವೈ ಯಾವುದಾದರೂ ಪ್ರಮುಖ ನಿರ್ಧಾರ ತೆಗೆದುಕೊಳ್ಳಬಹುದೇ? ಬಿಬಿಎಂಪಿ ಚುನಾವಣೆ ವಿಚಾರದಲ್ಲಿ ಚರ್ಚೆ ನಡೆಸಬಹುದೇ? ಯಾವುದಾದರೂ ಸುಗ್ರೀವಾಜ್ಞೆ ತರಲು ಈ ಸಭೆ ಕರೆದಿರಬಹುದೇ ಎಂಬಿತ್ಯಾದಿ ಚರ್ಚೆಗಳು ನಡೆದಿವೆ.
ಇನ್ನು ರಾಜ್ಯದಿಂದ ಆಯ್ಕೆಯಾದ ಸಂಸದರೊಂದಿಗೆ ಚರ್ಚೆ ನಡೆಸಲು ಅನೌಪಚಾರಿಕ ಸಭೆಯನ್ನೂ ಕರೆದಿದ್ದಾರೆ. ಶುಕ್ರವಾರ 4 ಗಂಟೆಗೆ ನಡೆಯುವ ಸಭೆಯಲ್ಲಿ ಹಾಜರಾಗುವಂತೆ ಸಿಎಂ ಕಚೇರಿಂದ ಸಂಸದರಿಗೆ ಪತ್ರ ಹೋಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ಉಮೇಶ್ ಜಾಧವ್, ಸಿಎಂ ರಾಜ್ಯದ ಸಂಸದರ ಸಭೆ ಕರೆದಿದ್ದಾರೆ. ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಲು ಸಭೆ ಕರೆದಿದ್ದಾರೆ. ಕೇಂದ್ರದಲ್ಲಿನ ರಾಜ್ಯದ ಯೋಜನೆಗಳ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದರು. ಇದೆಲ್ಲಕ್ಕೂ ಶುಕ್ರವಾರ ತೆರೆ ಬೀಳುವ ಸಾಧ್ಯತೆ ಇದೆ.
ಸಿದ್ದು v/s ರೇಣುಕಾಚಾರ್ಯ: ಇದು ಹಗಲು ಕನಸೋ? ಇರುಳ್ಗನಸೋ?

ನಾನೇಕೆ ಸಚಿವ ಸ್ಥಾನ ತ್ಯಾಗ ಮಾಡಲಿ? ಇರೋದು ನಾನೊಬ್ಬಳೇ ಮಹಿಳಾ ಮಂತ್ರಿ: ಜೊಲ್ಲೆ ಗರಂ

ನಿನ್ನ ಹೆಂಡ್ತಿ-ಮಕ್ಕಳನ್ನು ನನಗೇ ಬಿಟ್ಟುಕೊಡು ಎಂದು ಮನೆಗೆ ಬಂದ ಭೂಪ! ಆ ರಾತ್ರಿ ನಡೆದೇ ಹೋಯ್ತು ಘೋರ ಕೃತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
