ಸಿಎಂ ಬಿ.ಎಸ್. ಯಡಿಯೂರಪ್ಪಅವರು ಶುಕ್ರವಾರ ಬೆಳಗ್ಗೆ ತಮ್ಮ ಕಾವೇರಿ ನಿವಾಸದಲ್ಲಿ ಆಕಳ ಕರುವಿಗೆ ಮೈದಡವಿ ಸಿಹಿ ತಿನ್ನಿಸುವ ಮೂಲಕ ಹೊಸ ವರ್ಷದ ಆರಂಭಕ್ಕೆ ವಿಭಿನ್ನ ರೀತಿಯಲ್ಲಿ ಮುನ್ನುಡಿ ಬರೆದರು. ಬಳಿಕ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಚಿವರಾದ ಬಸವರಾಜ ಬೊಮ್ಮಾಯಿ, ಸಿಸಿ ಪಾಟೀಲ್, ಡಾ.ಸುಧಾಕರ್ ಸಹಿತ ಅನೇಕ ಗಣ್ಯರು ಮುಖ್ಯಮಂತ್ರಿಗಳಿಗೆ ಹೊಸ ವರ್ಷದ ಶುಭ ಕೋರಿದರು.
ಕರೊನಾತಂಕದ ನಡುವೆಯೇ ಶುಕ್ರವಾರ ದೇಶದೆಲ್ಲೆಡೆ ಜನರು 2021ರ ಹೊಸ ವರ್ಷವನ್ನು ವಿಭಿನ್ನ ರೀತಿಯಲ್ಲಿ ಸ್ವಾಗತಿಸಿದರು. ಕೋವಿಡ್-19 ಬಿಗಿ ನಿಯಮದ ಹಿನ್ನೆಲೆಯಲ್ಲಿ ಕೆಲವರು ಮನೆ, ದೇಗುಲ, ಚರ್ಚ್​ಗೆ ಭೇಟಿ ನೀಡಿ ಹೊಸ ವರ್ಷವನ್ನು ಸಂಭ್ರಮಿಸಿದರೆ ಇನ್ನೂ ಹಲವರು ಬೀಚ್​ಗಳು, ಹೋಟೆಲ್, ರೆಸಾರ್ಟ್ , ಪ್ರವಾಸಿತಾಣಗಳಲ್ಲಿ ಕುಣಿದು ಕುಪ್ಪಳಿಸಿದರು. ಬೆಂಗಳೂರು ಸೇರಿ ಅನೇಕ ಕಡೆ ಗುರುವಾರ ತಡರಾತ್ರಿ ಹೋಟೆಲ್, ಪಬ್, ರೆಸಾರ್ಟ್ ಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪೊಲೀಸರ ಕಟ್ಟೆಚ್ಚರದ ಹೊರತಾಗಿಯೂ ಬಹುತೇಕ ಕಡೆ ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣಗಳು ವರದಿಯಾಗಿದೆ. ಇನ್ನು ಪ್ರಧಾನಿ ಮೋದಿ, ಸಿಎಂ ಬಿ.ಎಸ್.ಯಡಿಯೂರಪ್ಪ ಸಹಿತ ಅನೇಕ ಗಣ್ಯರು ಹೊಸ ವರ್ಷದ ಶುಭಾಶಯ ಕೋರಿದ್ದಾರೆ.
2021ಕ್ಕೆ ಮೋದಿ ಕವನದ ಸ್ವಾಗತ
ಪ್ರಧಾನಿ ನರೇಂದ್ರ ಮೋದಿ ಹೊಸ ವರ್ಷದಂದು ಸ್ವರಚಿತ ಹಿಂದಿ ಕವನವನ್ನು ದೇಶಕ್ಕೆ ಅರ್ಪಿಸಿದ್ದಾರೆ. ‘ಈಗಷ್ಟೇ ಸೂರ್ಯ ಉದಯಿಸಿದ್ದಾನೆ’ ಎಂಬ ಸಾಲುಗಳ ಮೂಲಕ ಆರಂಭವಾಗುವ ಕವನ 2021ರಲ್ಲಿ ನಾವೆಲ್ಲರೂ ದೃಢ ನಿಶ್ಚಯ ಹಾಗೂ ಬದ್ಧತೆಯೊಂದಿಗೆ ಮುನ್ನಡೆಯೋಣ ಎಂಬ ಸಂದೇಶ ರವಾನಿಸಿದೆ. 2020ರಲ್ಲಿ ದೇಶ ಮಾರಕ ಕರೊನಾ ಮಹಾಮಾರಿ ವಿರುದ್ಧ ಹೋರಾಟ ನಡೆಸಿದ್ದಲ್ಲದೆ, ಲಡಾಖ್ ಗಡಿಯಲ್ಲೂ ಚೀನಾದ ಕ್ಯಾತೆಗೆ ಈಗಲೂ ಉತ್ತರ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಕರೊನಾ ವಿರುದ್ಧ ಹೋರಾಡುತ್ತಿರುವ ವಾರಿಯರ್​ಗಳು ಹಾಗೂ ಗಡಿಯಲ್ಲಿ ಕೆಚ್ಚೆದೆಯಿಂದ ಶತ್ರುಪಡೆ ವಿರುದ್ಧ ಹೋರಾಡುತ್ತಿರುವ ರಕ್ಷಣಾ ಪಡೆಗೆ ಮೆಚ್ಚುಗೆ ವ್ಯಕ್ತಪಡಿಸುವ ಕವನದ ವಿಡಿಯೋವನ್ನು ಮೋದಿ ತಮ್ಮ ಟ್ವೀಟ್​ನಲ್ಲಿ ಹಂಚಿಕೊಂಡಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ ಕೂಡ ದೇಶವಾಸಿಗಳಿಗೆ 2021ರ ಶುಭಾಶಯ ಕೋರಿದ್ದಾರೆ. ಕರೊನಾದಿಂದಾಗಿ ಎದುರಾಗಿರುವ ಸವಾಲುಗಳು ಒಗ್ಗಟ್ಟಿನಿಂದ ಮುನ್ನಡೆಯುವ ಶಕ್ತಿಯನ್ನು ಮತ್ತಷ್ಟು ಹಿಗ್ಗಿಸಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − one =
Remember me
