ಬೆಂಗಳೂರು:ತನ್ನ ಬಳಿಯಿದ್ದ ಆರೋಗ್ಯ ಖಾತೆಯನ್ನು ಹಿಂಪಡೆದಿದ್ದಕ್ಕೆ ತೀವ್ರ ಅಸಮಾಧಾನಗೊಂಡಿರುವ ಶ್ರೀರಾಮುಲು ನಡೆ ಕುತೂಹಲ ಮೂಡಿಸಿದೆ.
ಖಾತೆ ಬದಲಾವಣೆಯ ಪಟ್ಟಿಗೆ ರಾಜ್ಯಪಾಲರಿಂದ ಅಧಿಕೃತ ಅಂಕಿತ ಬಿದ್ದ ಕಲವೇ ಕ್ಷಣದಲ್ಲಿ ಯಡಿಯೂರಪ್ಪರನ್ನು ಭೇಟಿ ಮಾಡಲು ಸಿಎಂ ನಿವಾಸ ಕಾವೇರಿಗೆ ಶ್ರೀರಾಮುಲು ಆಗಮಿಸಿದರು. ಅದೂ ಸರ್ಕಾರಿ ವಾಹನ ಬಿಟ್ಟು ಫಾರ್ಚೂನರ್ ಕಾರಿನಲ್ಲಿ! ಆರೋಗ್ಯ ಖಾತೆ ಕಿತ್ತುಕೊಂಡ ಬೆನ್ನಲ್ಲೇ ಸರ್ಕಾರಿ ವಾಹನ ಬಿಟ್ಟು ಖಾಸಗಿ ಕಾರಿನಲ್ಲಿ ಸಿಎಂ ನಿವಾಸಕ್ಕೆ ಶ್ರೀರಾಮುಲು ಬಂದದ್ದು ಕುತೂಹಲ ಮೂಡಿಸಿದೆ.
ಸಚಿವ ಸಂಪುಟ ಪುನರ್​ ವಿಸ್ತರಣೆಗೂ ಮುನ್ನವೇ ಸಿಎಂ ಯಡಿಯೂರಪ್ಪ ಅವರು ಶ್ರೀರಾಮುಲು ಕೈಯಲ್ಲಿದ್ದ ಆರೋಗ್ಯ ಖಾತೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಯನ್ನು ವಾಪಸ್​ ಪಡೆದಿದ್ದಾರೆ. ಈ ಎರಡೂ ಖಾತೆಯ ಬದಲಿಗೆ ಡಿಸಿಎಂ ಗೋವಿಂದ ಕಾರಜೋಳ ಅವರ ಬಳಿಯಿದ್ದ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿಯನ್ನು ಶ್ರೀರಾಮುಲುಗೆ ಕೊಟ್ಟಿದ್ದಾರೆ. ಕರೊನಾದಂತಹ ಸಂದಿಗ್ಧ ಸಮಯದಲ್ಲಿ, ಅದರಲ್ಲೂ ಸಂಪುಟ ವಿಸ್ತರಣೆಗೂ ಮುನ್ನವೇ ತನ್ನ ಕೈಯಿಂದ ಆರೋಗ್ಯ ಖಾತೆ ಕಿತ್ತುಕೊಂಡದ್ದು ಶ್ರೀರಾಮುಲುಗೆ ಆಘಾತ ತಂದಿದೆ. ತಾನು ಸರಿಯಾಗಿ ಕೆಲಸ ಮಾಡಿಲ್ಲ ಎಂಬ ಸಂದೇಶ ಹೋಗಲಿದೆ, ಇದು ತನ್ನ ಪಾಲಿಗೆ ಕಳಂಕ ಎಂದು ಬೇಸರ ವ್ಯಕ್ತಪಡಿಸಿರುವ ಶ್ರೀರಾಮುಲು, ಈ ಬಗ್ಗೆ ಸಿಎಂ ಜತೆ ಚರ್ಚಿಸಲು ‘ಕಾವೇರಿ’ಗೆ ಭೇಟಿ ನೀಡಿದ್ದಾರೆ.
ಇಂದು(ಸೋಮವಾರ) ಮಧ್ಯಾಹ್ನ ಸುಮಾರು 12.50ಕ್ಕೆ ಕಾವೇರಿ ನಿವಾಸಕ್ಕೆ ಬಂದ ಶ್ರೀರಾಮುಲು, ಸಿಎಂಗಾಗಿ ಕಾಯುತ್ತ ಒಬ್ಬರೇ ಕುಳಿತಿದ್ದರು. ಮಧ್ಯಾಹ್ನ 2.30ರ ಬಳಿಕ ಸಿಎಂ ಸಿಗುವ ಸಾಧ್ಯತೆ ಇದೆ.
ಖಾತೆ ಬದಲಾವಣೆ ಕುರಿತು ಶ್ರೀರಾಮುಲು ಹೊರ ಹಾಕಿರುವ ಅಸಮಾಧಾನದ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಸಚಿವ ಡಾ.ಕೆ.ಸುದಾಕರ್​, ‘ಶ್ರೀರಾಮುಲು ಮೇಲೆ ಯಾವ ಕಳಂಕವೂ ಇಲ್ಲ. ಎಲ್ಲರೂ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದಾರೆ. ನಾವೆಲ್ಲ ಟಾಸ್ಕ್ ಪೋರ್ಸ್‌ನಲ್ಲಿ‌ ಇದ್ದೆವು. ಅವರು ಪರಿಶ್ರಮ ಹಾಕಿದ್ದಾರೆ. ಇಲ್ಲಿ ವೈಯಕ್ತಿಕ ಪ್ರತಿಷ್ಠೆ ಇಲ್ಲ. ಆ ರೀತಿಯ ಭಾವನೆ ಇದ್ದರೆ ಬಿಟ್ಟುಬಿಡಿ ಎಂದು ಹೇಳಿದ್ದಾರೆ.
ಖಾತೆ ಬದಲಾವಣೆ: ಸ್ಫೋಟಗೊಂಡ ಶ್ರೀರಾಮುಲು ಅಸಮಾಧಾನ

ಆರೋಗ್ಯ ಖಾತೆ ಕಿತ್ತುಕೊಂಡ ಬೆನ್ನಲ್ಲೇ ಶ್ರೀರಾಮುಲುಗೆ ಮತ್ತೊಂದು ಆಘಾತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 16 =
Remember me
