ಬೆಂಗಳೂರು:ರಾಜ್ಯದಲ್ಲಿ ಗರಿಷ್ಠ ಮಟ್ಟದಲ್ಲಿ ಬಂಡವಾಳ ಹೂಡಿಕೆಯಾಗಬೇಕು, ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗಬೇಕೆಂಬ ನಿಟ್ಟಿನಲ್ಲಿ ಹಲವು ಸುಧಾರಣಾ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ, ಇದೀಗ ದೇಶದ ದೊಡ್ಡ ಕಂಪನಿಗಳಿಗೆ ರೆಡ್​ಕಾರ್ಪೆಟ್​ ಹಾಸಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 55 ಕಂಪನಿಗಳಿಗೆ ವೈಯಕ್ತಿಕವಾಗಿ ಪತ್ರ ಬರೆದಿದ್ದು, ಕೈಗಾರಿಕೆ ಸ್ಥಾಪನೆಗೆ ರಾಜ್ಯದಲ್ಲಿ ನಿಯಮ ಎಷ್ಟು ಸುಲಲಿತವಾಗಿದೆ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ.ಇಂಡಸ್ಟ್ರಿಯಲ್ ಟೈಕೂನ್‌ಗಳೆನಿಸಿಕೊಂಡಿರುವ ಮುಕೇಶ್ ಅಂಬಾನಿ, ಸುನೀಲ್ ಭಾರತಿ ಮಿತ್ತಲ್, ಸಂಜೀವ್ ಪುರಿ, ಅಜೀಮ್ ಪ್ರೇಮ್ ಜೀ, ಎಸ್.ಸುಬ್ರಮಣ್ಯನ್, ರಾಹುಲ್ ಬಜಾಜ್, ಆನಂದ್ ಮಹೀಂದ್ರ, ನವೀನ್ ಜಿಂದಾಲ್, ಕುಮಾರ ಮಂಗಲಂ ಬಿರ್ಲಾ, ಗೌತಮ್ ಅದಾನಿ, ಎ.ಬಾಲಕೃಷ್ಣನ್ ಅವರಿಗೆ ಪತ್ರ ಬರೆದಿರುವ ಸಿಎಂ ಮುಕ್ತ ಆಹ್ವಾನ ನೀಡಿದ್ದಾರೆ.
ಕಳೆದ ತಿಂಗಳಷ್ಟೇ ಈಸ್ ಆ್ ಡೂಯಿಂಗ್ ಬ್ಯುಸಿನೆಸ್‌ಗೆ ಸಂಬಂಧಪಟ್ಟಂತೆ ಕೈಗೊಂಡ ಕ್ರಮಗಳನ್ನು ತಕ್ಷಣದಿಂದಲೇ ಜಾರಿ ಮಾಡಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಬಳಿಕ ವಿಧಾನಸಭೆ ಅಧಿವೇಶನದಲ್ಲಿ ಕಾನೂನು ರೂಪ ಕೊಟ್ಟಿತ್ತು.
ಸರ್ಕಾರ ಉನ್ನತ ಮಟ್ಟದ ಸಮಿತಿಯಿಂದ ಅನುಮತಿಯಿಂದ ಉದ್ಯಮ ಆರಂಭಿಸಬಹುದು, ಬೇರೆ ಯಾವುದೇ ಇಲಾಖೆ ಮಂಡಳಿಯಿಂದ ಅನುಮತಿ ಬೇಡವಾಗುತ್ತದೆ. ಜತೆಗೆ ಅನೇಕ ರಿಯಾಯಿತಿ ಪ್ರಕಟಿಸಲಾಗಿದೆ. ಈ ಸಂಗತಿಯನ್ನು ಉದ್ಯಮಿಗಳಿಗೆ ಪತ್ರದಲ್ಲಿ ಸಿಎಂ ತಿಳಿಸಿದ್ದು, ಇದರ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.ಆಹಾರ ಸಂಸ್ಕರಣೆ, ಸಾಫ್ಟ್‌ವೇರ್, ಫಾರ್ಮಾಸ್ಯುಟಿಕಲ್, ಆಟೋ ಕಾಂಪೋನೆಂಟ್ಸ್, ಕಟ್ಟಡ ಸಾಮಗ್ರಿ, ಕೆಮಿಕಲ್ಸ್, ಎಲೆಕ್ಟ್ರಾನಿಕ್ಸ್ ಸೇರಿದಂತೆ ಹಲವು ಕ್ಷೇತ್ರದಲ್ಲಿ ತೊಡಗಿಕೊಂಡ ಕಂಪನಿಗಳಿಗೆ ಬಂಡವಾಳ ಹೂಡಿಕೆಗೆ ಆಹ್ವಾನ ನೀಡಲಾಗಿದೆ.ಇದನ್ನೂ ಓದಿ:ಡೌಟೇ ಬೇಡ ಅಕ್ಟೋಬರ್ 4ಕ್ಕೇ ನಡೆಯುತ್ತೆ ಸಿವಿಲ್ ಸರ್ವೀಸ್ ಪ್ರಿಲಿಮ್ಸ್ ಎಕ್ಸಾಂ
ಚೀನಾ ಪ್ರಸ್ತಾಪ:ಕೋವಿಡ್-19 ಸಂದರ್ಭದಲ್ಲಿ ಭೌಗೋಳಿಕ ವಿಚಾರದಲ್ಲಿ ಚೀನಾದಿಂದ ಎದುರಾದ ಸವಾಲು ಮತ್ತು ಟ್ರೇಡ್ ವಾರ್, ದೇಶದ ಸ್ವಾವಲಂಬನೆಯ ಸಂಕಲ್ಪವನ್ನು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ಸ್ಥಳೀಯ ಉತ್ಪಾದನೆಗೆ ಆತ್ಮನಿರ್ಭರ ಅಭಿಯಾನ ಪ್ರೋತ್ಸಾಹ ನೀಡುತ್ತಿದ್ದು, ಈ ಸಂದರ್ಭ ಸದುಪಯೋಗಪಡಿಸಿಕೊಳ್ಳುವಂತೆ ಟಾಪ್​​ ಕಂಪನಿಗಳಿಗೆ ರಾಜ್ಯ ಸರ್ಕಾರ ಕೋರಿದೆ.
2020-25ಗೆ ಅನ್ವಯವಾಗುವಂತೆ ಕರ್ನಾಟಕವು ಹೊಸ ಕೈಗಾರಿಕೆ ನೀತಿಯನ್ನು ಅಳವಡಿಸಿಕೊಂಡಿದೆ. ಇದು ಹೂಡಿಕೆಗೆ ಯೋಗ್ಯ ಕಾಲ ಮತ್ತು ಯೋಗ್ಯ ಸ್ಥಳ ಎಂದು ಬಿಂಬಿಸಲಾಗಿದೆ.
ಯಾರಿಗೆಲ್ಲ ಆಹ್ವಾನ?:ರಿಲಯನ್ಸ್, ಭಾರತಿ ಎಂಟರ್‌ಪ್ರೈಸಸ್ ಗ್ರೂಪ್, ಐಟಿಸಿ, ವಿಪ್ರೋ, ಎಲ್ ಎಂಡ್ ಟಿ, ಬಜಾಜ್, ಜಿಂದಾಲ್, ಹೀರೋ, ಟೊರೆಂಟ್, ವೇದಾಂತ, ಟಾಟಾ, ಆದಿತ್ಯ ಬಿರ್ಲಾ, ಪಿರಾಮಲ್, ಎಂಆರ್‌ಎ್, ಕಲ್ಯಾಣಿ, ಅದಾನಿ, ಮುರುಗಪ್ಪ ಗ್ರೂಪ್, ಪತಂಜಲಿ, ಟಿವಿಎಸ್, ಹಿಂದುಜಾ, ಗೋದ್ರೆಜ್, ಹಿಂದುಸ್ತಾನ್ ಲಿವರ್, ಇನ್ಫೋಸಿಸ್, ಎಚ್‌ಸಿಎಲ್, ನೆಸ್ಲ್ಲೆ, ಸನ್ ಫಾರ್ಮಾಸ್ಯುಟಿಕಲ್, ಡಾಬರ್, ಸಿಪ್ಲ, ಐಷರ್ ಮೋಟರ್, ಮೈಕ್ರೋ ಲಿಮಿಟೆಡ್, ಎಸಿಸಿ, ಎಂಫೆಸಿಸ್, ಎಸ್ಕಾರ್ಟ್, ಮಾರುತಿ ಸುಜುಕಿ, ಬೋಷ್, ಎಬಿಬಿ, ದಾಲ್ಮಿಯಾಗೆ ಆಹ್ವಾನ ನೀಡಲಾಗಿದೆ.
‘ಇಲ್ಲಿಲ್ಲ ಯಾವುದೇ ಅನ್​​ಲಾಕ್​…ಅಕ್ಟೋಬರ್​ 31ರವರೆಗೂ ಲಾಕ್​ಡೌನ್​ ವಿಸ್ತರಣೆ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
