ಬೆಂಗಳೂರು:ಕರಾವಳಿ ಕುಂದಾಪುರ ಪ್ರದೇಶದವರು ತಮ್ಮ ಭಾಷೆ-ಬದುಕಿನ ಕುರಿತಂತೆ ಪ್ರತಿ ವರ್ಷ ಆಚರಿಸುವ ವಿಶ್ವ ಕುಂದಾಪುರ ಕನ್ನಡ ದಿನಾಚರಣೆಗೆ ಇಂದು ಸಿಎಂ, ಡಿಸಿಎಂ, ಮಾಜಿ ಸಿಎಂ, ಸಚಿವ, ಸಂಸದ, ಶಾಸಕರು ಮುಂತಾವರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.
ಪ್ರತಿ ವರ್ಷ ಆಷಾಢ ಅಮಾವಾಸ್ಯೆ ದಿನ ವಿಶ್ವ ಕುಂದಾಪುರ ಕನ್ನಡ ದಿನವನ್ನು ಆಚರಿಸಲಾಗುತ್ತಿದ್ದು, ಇಂದು ಕುಂದಗನ್ನಡಿಗರಿಂದ ಹಲವೆಡೆ ವಿಶ್ವ ಕುಂದಾಪುರ ಕನ್ನಡ ದಿನಾಚರಣೆ ನಡೆದಿದೆ. ಭಾಷೆ-ಬದುಕಿನ ಮೇಲಿನ ಅಭಿಮಾನದ ಈ ಆಚರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವೆ-ಸಂಸದೆ ಶೋಭಾ ಕರಂದ್ಲಾಜೆ, ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಮಂಕಾಳ್ ವೈದ್ಯ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಶಾಸಕರಾದ ಕಿರಣ್​ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ ಮುಂತಾದವರು ಶುಭ ಹಾರೈಸಿದ್ದಾರೆ.
ಆಸಾಡಿ ಅಮಾಸಿ/ ಆಟಿ ಅಮಾವಾಸ್ಯೆ (ಕರ್ಕಾಟಕ ಅಮಾವಾಸ್ಯೆ) ದಿನ ಕರಾವಳಿಗರಿಗೆ ಅತ್ಯಂತ ವಿಶೇಷವಾದದ್ದು. ಕಳೆದ ಐದು ವರ್ಷಗಳಿಂದ ಪ್ರತಿ ವರ್ಷ ಈ ಕರ್ಕಾಟಕ ಅಮಾವಾಸ್ಯೆ ದಿನವನ್ನು ವಿಶ್ವ ಕುಂದಾಪ್ರ ಕನ್ನಡ ದಿನ ಎಂದು ಆಚರಣೆ ಮಾಡಲಾಗುತ್ತಿದ್ದು, ಅದು ಈ ಸಲ ಜುಲೈ 17ರಂದು ಆಚರಣೆ ಆಗಿದೆ.
ಬೆಂಗಳೂರಿನಲ್ಲಿ ಇರುವ ಕುಂದಗನ್ನಡಿಗರು ಜು. 23ರಂದು ಬೆಂಗಳೂರಿನ ವಿಜಯನಗರದ ಬಂಟರ ಸಂಘದಲ್ಲಿ ಅದ್ಧೂರಿಯಾಗಿ ವಿಶ್ವ ಕುಂದಾಪುರ ಕನ್ನಡ ದಿನ ಆಚರಿಸಲಿದ್ದಾರೆ. ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ ನಡೆಯಲಿರುವ ಈ ಸಮಾರಂಭದಲ್ಲಿ ಕುಂದಗನ್ನಡದ ಕಲರವ, ಕುಂದಗನ್ನಡ ಬದುಕಿನ ಸೊಗಡಿನ ಅನಾವರಣ ಆಗಲಿದೆ. ಈ ವಿಶೇಷ ಸಮಾರಂಭದಲ್ಲಿ ಇದೇ ಪ್ರಥಮ ಬಾರಿ ರಾಜ್ಯದ ಮುಖ್ಯಮಂತ್ರಿಯವರು ಭಾಗವಹಿಸಲಿದ್ದು, ಅಂದು ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಅಲ್ಲದೆ ಕನ್ನಡ ಚಿತ್ರರಂಗದ, ಕುಂದಾಪುರ ಮೂಲದ ಸ್ಟಾರ್ ನಟ-ನಿರ್ದೇಶಕರು ಕೂಡ ಈ ಸಮಾರಂಭದಲ್ಲಿ ಭಾಗಿಯಾಗಲಿದ್ದು, ಈ ಕುರಿತಂತೆ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಹೆಚ್ಚಿನ ವಿವರಣೆ ನೀಡಲಾಗುವುದು ಎಂದು ವಿಶ್ವ ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಜಿತ್ ಶೆಟ್ಟಿ ಉಳ್ತೂರು ತಿಳಿಸಿದ್ದಾರೆ.

ವೈಶಿಷ್ಟಪೂರ್ಣ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳ ಕಡಲತಡಿಯ ಕುಂದಾಪುರ ಈ ನೆಲದ ಬಹುತ್ವ ಸಂಸ್ಕೃತಿಯ ಪ್ರತೀಕ.
ತಮ್ಮ ಭಾಷೆ ಮತ್ತು ಬದುಕನ್ನು ಜಗತ್ತಿಗೆ ಪರಿಚಯಿಸಲು ಪ್ರತಿ ವರ್ಷ ಅಸಾಡಿ ಅಮವಾಸ್ಯೆಯನ್ನು ಕುಂದಾಪ್ರ ಕನ್ನಡ ದಿನವಾಗಿ ಆಚರಿಸಲಾಗುತ್ತಿದೆ.
ಕುಂದಾಪ್ರ ಕನ್ನಡವೆಂಬ ಚಂದದ ಕನ್ನಡ ಮಾತಾಡುವವರೆಲ್ಲರಿಗೂ ಈ ದಿನದ ಶುಭಾಶಯಗಳು.-…pic.twitter.com/uILsKYXpUE
— CM of Karnataka (@CMofKarnataka)July 17, 2023

‘ಕುಂದಾಪುರ ಕನ್ನಡ’ ಭಾಷಿ ಅಲ್ಲ, ಬದ್ಕ್ !
ಆಟಿ ಅಮಾವಾಸ್ಯೆ ದಿನ ಕರಾವಳಿಗರಿಗೆ ಅತ್ಯಂತ ವಿಶೇಷವಾದದ್ದು. ಈ ದಿನವನ್ನು ವಿಶ್ವ ಕುಂದಾಪ್ರ ಕನ್ನಡ ದಿನ ಎಂದು ಆಚರಿಸಲಾಗುತ್ತದೆ. ಮಾತೃ ಭಾಷೆಯ ಮೇಲಿನ ಪ್ರೇಮ ಎಲ್ಲಕಿಂತ ಮಿಗಿಲು. ಪ್ರೀತಿಯಿಂದ ಮಾತನಾಡುವ ಕುಂದಾಪುರ ಜನತೆಗೆ ಕುಂದಾಪ್ರ ಕನ್ನಡ ದಿನದ ಶುಭಾಶಯಗಳು.pic.twitter.com/fhIKOBhOem
— DK Shivakumar (@DKShivakumar)July 17, 2023


ಕುಂದಾಪ್ರ ‌ಕನ್ನಡ ಭಾಷೆ ಅದರ ಉಚ್ಚಾರಣೆ, ಮಾತಿನ ಶೈಲಿ,‌ ಅದಕ್ಕೆ ಹೊಂದಿಕೊಂಡಿರೋ ಬದುಕೆಲ್ಲವು ವೈಶಿಷ್ಟ್ಯಪೂರ್ಣವಾಗಿದೆ. ಕುಂದಾಪುರದ ಅಹಾರ ಪದ್ಧತಿಯೂ ವಿಭಿನ್ನವಾಗಿ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಹೀಗಾಗಿ ಹೋಟೆಲ್ ಉದ್ಯಮದಲ್ಲಿ ಕುಂದಾಪುರಿಗರು ಮೇಲುಗೈ ಸಾಧಿಸಿದ್ದಾರೆ. ಕುಂದಾಪ್ರ ಭಾಷೆ ಬದುಕನ್ನ ಉಳಿಸಿ ಬೆಳೆಸಲು ಪ್ರತಿ ವರ್ಷ ಆಶಾಢ…pic.twitter.com/VzWcdg2UEJ

ನನ್ನ ಪ್ರೀತಿಯ ಕುಂದಗನ್ನಡಿಗ ಬಂಧುಗಳಿಗೆ ವಿಶ್ವಕುಂದಾಪ್ರ ಕನ್ನಡ ದಿನಾಚರಣೆಯ ಶುಭಾಶಯಗಳು.#ವಿಶ್ವಕುಂದಾಪ್ರಕನ್ನಡದಿನpic.twitter.com/FESRQpZNwx

ಕನ್ನಡ ಭಾಷೆಯ ಅತ್ಯಂತ ಸರಳ ಹಾಗೂ ಸಂಕ್ಷಿಪ್ತ ರೂಪವೆನಿಸಿಕೊಂಡಿರುವ ಕುಂದಾಪ್ರ ಕನ್ನಡ ಭಾಷೆಯ ಸೊಬಗನ್ನು ವರ್ಣಿಸಲಾಗದು, ಈ ಭಾಷೆಗೆ ತನ್ನದೇ ಆದ ವೈಶಿಷ್ಟ್ಯತೆ ಇದೆ.ಕುಂದಾಪ್ರ ಕನ್ನಡ ಭಾಷಿಕರು ರಾಜ್ಯ ರಾಜಧಾನಿ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿ ನೆಲೆನಿಂತಿದ್ದಾರೆ. ಈ ಮಧ್ಯೆಯೂ ತಮ್ಮ ಭಾಷೆಗೊಂದು ಅಸ್ತಿತ್ವ ಬೇಕೆನ್ನುವ ಉದ್ದೇಶದಿಂದ…pic.twitter.com/T6f26o73oR

ದೈವ ಬೂತ ದೇವಸ್ತಾನದಿಂದ್ ಹಿಡ್ದ್ಕಡ್ಲಿನ್ ಒಡ್ಲಿಗ್ ಹ್ವಾಪ್ ದೋಣಿ ಹಡ್ಗ್ …ಹುಲಿ ವೇಷ ಹಾಕಿ ಕೊಣುದ್ ಕಾಂತ್ರ್ಯ!ರಾತ್ರಿ ಕಟ್ಟ್ಲಿ ಆಟ ಕಾಂತ್ರ್ಯ!ಊರ್ ತುಂಬಾ ಗೆದ್ದಿ ಬೈಲ್ಹಬ್ಬ ಹುಣ್ಮಿ ಸುಗ್ಗಿ ಕೊಯ್ಲ್…ದಿಕ್ ದಿಕ್ಕಲ್ಲೂ ಕುಂದಾಪ್ರ ಕನ್ನಡವೇ ಇರ್ಕ್…ಇದ್ ಬಾಷಿ ಅಲ್ಲಾ ಬದ್ಕ್ !!!!pic.twitter.com/DyVC2YcmUI

pic.twitter.com/C5MFWRMOqJ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + twelve =
Remember me
