
ಬೆಂಗಳೂರು:ಆಡಳಿತ ಯಂತ್ರವನ್ನು ಜೋಡೆತ್ತುಗಳಾಗಿ ಎಳೆಯುತ್ತಿರುವ ಸಿಎಂ ಮತ್ತು ಡಿಸಿಎಂ ಅವರು ಸಭೆಯುದ್ದಕ್ಕೂ ಪರಸ್ಪರ ಸಮನ್ವಯತೆಯನ್ನು ಸಾಧಿಸುವ ಮೂಲಕ ಒಗ್ಗಟ್ಟಿನ ಸಂದೇಶವನ್ನು ಅಧಿಕೃತವಾಗಿ ರವಾನಿಸಿದರು.ಕೆಂಪೇಗೌಡ ಜಯಂತಿಯಲ್ಲಿ ಸಿಎಂ ಹುದ್ದೆಯನ್ನು ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕು ಎಂದುಶ್ರೀ ಚಂದ್ರಶೇಖರ ಸ್ವಾಮೀಜಿ ಅವರು ಹೇಳಿದ್ದು ಮುಖ್ಯಮಂತ್ರಿಗಳಿಗೆ ತೀವ್ರ ಮುಜುಗರ ತಂದಿತ್ತು. ಬಳಿಕ ಈ ಘಟನೆಯ ಬಗ್ಗೆ ಸಿಎಂ ಅಸಮಾಧಾನವನ್ನು ವ್ಯಕ್ತಪಡಿಸಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಘಟನೆ ಪರೋಕ್ಷವಾಗಿ ಆಡಳಿತ ಯಂತ್ರದ ಮೇಲೆಯೂ ಪರಿಣಾಮ ಬೀರಿತ್ತು. ಈ ಘಟನೆಯ ಬಳಿಕ ಮತ್ತೆ ಸಿಎಂ ಮತ್ತು ಡಿಸಿಎಂ ನಡುವೆ ಸಮನ್ವತೆ ಮತ್ತು ಸಾಮರಸ್ಯ ಸಾಧಿಸುವ ನಿಟ್ಟಿನಲ್ಲಿ ಈ ಸಭೆ ಮಹತ್ವದ್ದಾಗಿತ್ತು.ಸಭೆಯುದ್ದಕ್ಕೂ ಸಿಎಂ ಮತ್ತು ಇಬ್ಬರೂ ಲವಲವಿಕೆಯಿಂದ ಇದ್ದದ್ದು ಅಷ್ಟೆ ಅಲ್ಲ, ಆಗಾಗ್ಗೆ ಸಮಾಲೋಚನೆ ನಡೆಸಿದರು. ಆಗಾಗ್ಗೆ ನಕ್ಕರು. ವಿಷಯಗಳು ಬಂದಾಗ ಗಂಭೀರವಾಗಿ ಗಮನ ಹರಿಸಿ ಚಾಟಿ ಬೀಸಿದರು. ಒಟ್ಟಾರೆ ಇಡೀ ಸಭೆ ಅವರಿಬ್ಬರ ಒಗ್ಗಟ್ಟಿನ ಮಾಹಿತಿಯನ್ನು ವಿರೋಧ ಪಕ್ಷಗಳಿಗೆ ರವಾನಿಸಿದಂತಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − fourteen =
Remember me
