ಬೆಂಗಳೂರು:ಕೋವಿಡ್ ಸೋಂಕು ಮೊದಲ ಅಲೆಗಿಂತ 3-4 ಪಟ್ಟು ವೇಗವಾಗಿ ಹರಡುತ್ತಿದೆ. ಸೋಂಕಿಗೆ ಒಳಗಾದ ಎಲ್ಲರೂ ಆಕ್ಸಿನೇಟೆಡ್ ಬೆಡ್ ಅಗತ್ಯವಿದೆ ಎಂಬ ಮನೋಭಾವದಲ್ಲಿದ್ದಾರೆ. ಆದ್ದರಿಂದ ಆಕ್ಸಿನೇಟೆಡ್ ಬೆಡ್​ಗಳ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ತಿಳಿವಳಿಕೆ ಮೂಡಿಸಲು ಮತ್ತು ಜನರಲ್ಲಿ ಭಯದ ವಾತಾವರಣ ಹೋಗಲಾಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ಸಚಿವರು, ಅಧಿಕಾರಿಗಳು, ವೈದ್ಯರು, ಆರೋಗ್ಯ ಸಿಬ್ಬಂದಿ ಸಮರೋಪಾದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್​ನಿಂದ ಆರೋಗ್ಯ ತುರ್ತು ಪರಿಸ್ಥಿತಿ ರಾಜ್ಯ ಹಾಗೂ ಇಡೀ ರಾಷ್ಟ್ರದಲ್ಲಿದೆ. ಸಮರೋಪಾದಿಯಲ್ಲಿ ಸರಿಪಡಿಸುವ ಕೆಲಸ ನಡೆಸಲಾಗುತ್ತಿದೆ ಎಂದರು.
ಮಾಧ್ಯಮಗಳಿಗೆ ಮನವಿ:ಎಚ್ಚರಿಸುವುದು ಮಾಧ್ಯಮಗಳ ವೃತ್ತಿ ಧರ್ಮ, ಹಾಗೆಯೇ ಇದೇ ವಿಷಯ ಸತತವಾಗಿ ತೋರಿಸಿದರೆ ಸಾರ್ವಜನಿಕರಲ್ಲಿ ಆತ್ಮಸ್ಥೈರ್ಯ ಕಡಿಮೆ ಆಗಲಿದೆ. ಇದರಿಂದ ಜನರು ಹೋಂ ಐಸೋಲೇಷನ್ ಬದಲು ಆಸ್ಪತ್ರೆಗೆ ಬಂದು ಆಕ್ಸಿಜನ್ ಬೆಡ್​ಗೆ ಬೇಡಿಕೆ ಇಡುತ್ತಿದ್ದಾರೆ. ಇಂತಹ ತುರ್ತು ಸಂದರ್ಭದಲ್ಲಿ ನಿಮ್ಮ ಸಹಕಾರವನ್ನು ವಿನಂತಿಸುತ್ತೇನೆ ಎಂದು ಸಿಎಂ ಟಿವಿ ಮಾಧ್ಯಮಗಳನ್ನು ಕೋರಿದರು.
ರಾಜೀನಾಮೆ ಸಮಸ್ಯೆಗೆ ಪರಿಹಾರವಲ್ಲ:ರಾಜೀನಾಮೆ ಕೊಡುವುದು ಸಮಸ್ಯೆಗೆ ಪರಿಹಾರವಲ್ಲ, ಪ್ರತಿಪಕ್ಷ ನಾಯಕರು ಸಲಹೆ ಕೊಡಲಿ, ಅದನ್ನು ಪಾಲನೆ ಮಾಡಲು ಪ್ರಯತ್ನಿಸುತ್ತೇನೆ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ಯಾವತ್ತು ರಾಜೀನಾಮೆ ಕೇಳಿಲ್ಲ ಹೇಳಿ, ರಾಜೀನಾಮೆ ಕೇಳುವುದೇ ಅವರ ಕೆಲಸ. ವಿರೋಧ ಪಕ್ಷದ ನಾಯಕರಾಗಿ ಅವರು ಆ ಕೆಲಸ ಮಾಡುತ್ತಿದ್ದಾರೆ. ನಾನು, ಸುಧಾಕರ್ ದಿನದ 24 ಗಂಟೆ ಮಾಡಿದ್ದೇವೆ. ರಾಜೀನಾಮೆಯಿಂದ ಸಮಸ್ಯೆ ಪರಿಹಾರ ಆಗಲ್ಲ ಎಂದರು.
ಸಿಎಂಗೆ ಮತ್ತೊಬ್ಬ ಸಲಹೆಗಾರ:ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ನೀತಿ ನಿರೂಪಣೆ ಹಾಗೂ ಕಾರ್ಯತಂತ್ರ ವಿಷಯದಲ್ಲಿ ತಮಗೆ ಮಾರ್ಗದರ್ಶನ ಮಾಡಲು ಪ್ರಶಾಂತ್ ಪ್ರಕಾಶ್ ಅವರನ್ನು ಸಲಹೆಗಾರರನ್ನಾಗಿ ನೇಮಕ ಮಾಡಿ ಕೊಂಡಿದ್ದಾರೆ. ಪ್ರಶಾಂತ್ ವಿಜನ್ ಗ್ರೂಪ್ ಫಾರ್ ಸ್ಟಾರ್ಟ್​ಅಪ್​ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಕರೊನಾ ನಿರ್ವಹಣೆ ವಿಷಯದಲ್ಲಿ ವಿವಿಧ ಜವಾಬ್ದಾರಿಗಳನ್ನು ಹಿರಿಯ ಸಚಿವರಿಗೆ ಹಂಚಿಕೆ ಮಾಡಿರುವುದರಿಂದ ಆರೋಗ್ಯ ಸಚಿವ ಸುಧಾಕರ್ ಅವರ ಪವರ್ ಕಟ್ ಆಯಿತೇ? ಹೀಗೊಂದು ಚರ್ಚೆ ಅಧಿಕಾರಿಗಳ ವಲಯದಲ್ಲಿದೆ. ಔಷಧ ಖರೀದಿ, ಬೆಡ್ ನಿರ್ವಹಣೆ, ಆಕ್ಸಿನ್ ವ್ಯವಸ್ಥೆ, ವಾರ್ ರೂಂ ಹೀಗೆ ಎಲ್ಲ ಪ್ರಮುಖ ಜವಾಬ್ದಾರಿಯೂ ಸುಧಾಕರ್ ಅವರಿಂದ ಹಿಂಪಡೆಯಲಾಗಿದೆ ಎಂಬುದು ಚರ್ಚಾ ವಿಚಾರ. ಮಂಗಳವಾರ ಸಂಪುಟ ಸಭೆ ಬಳಿಕ ಅವರು ಬೇಸರದಲ್ಲೇ ವಿಧಾನಸೌಧದಿಂದ ಹೊರಟರೆಂದೂ ಹೇಳಲಾಗುತ್ತಿದೆ.
ಜಗದೀಶ ಶೆಟ್ಟರ್:ಆಕ್ಸಿಜನ್ ಸರಬರಾಜು ನಿರ್ವಹಣೆ ಬಗ್ಗೆ ಕೇಂದ್ರ ಸರ್ಕಾರದ ಜತೆ ಸಂಪರ್ಕ ಸಾಧಿಸಿ ರಾಜ್ಯಕ್ಕೆ ಅಗತ್ಯವಿರುವ ಆಕ್ಸಿಜನ್ ಹಂಚಿಕೆ ಪಡೆಯುವುದು, ಸ್ಥಳೀಯ ಆಕ್ಸಿಜನ್ ಉತ್ಪಾದಕರು, ವಿತರಕರೊಂದಿಗೆ ಸತತ ಸಂಪರ್ಕದಲ್ಲಿದ್ದು ಬೇಡಿಕೆ ಇರುವೆಡೆ ಸರಬರಾಜು ಮಾಡಲು ಕ್ರಮಕೈಗೊಳ್ಳುವರು.
ಅಶ್ವತ್ಥನಾರಾಯಣ:ಕೋವಿಡ್ ಸಂಬಂಧಿ ಔಷಧ ನಿರ್ವಹಣೆ, ಅಗತ್ಯ ಮಾನವ ಸಂಪನ್ಮೂಲ ನಿರ್ವಹಣೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ, ನರ್ಸಿಂಗ್ ಕಾಲೇಜ್ ಜತೆ ಸಮನ್ವಯ ಸಾಧಿಸಿ ವೈದ್ಯಕೀಯ, ಆಯುಷ್, ಇತರ ಕೋರ್ಸ್​ಗಳ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಕೋವಿಡ್ ಕಾರ್ಯಕ್ಕೆ ತೊಡಗಿಸುವ ಜವಾಬ್ದಾರಿ.
ಬಸವರಾಜ ಬೊಮ್ಮಾಯಿ, ಆರ್. ಅಶೋಕ್:ಖಾಸಗಿ, ಸರ್ಕಾರಿ ಆಸ್ಪತ್ರೆ ಬೆಡ್ ವ್ಯವಸ್ಥೆ, ಸಮಸ್ಯೆ ಬಗ್ಗೆ ಇಬ್ಬರು ಸಚಿವರು ನಿರ್ವಹಣೆ ಮಾಡಲಿದ್ದಾರೆ. ಎಲ್ಲ ಸರ್ಕಾರಿ ಖಾಸಗಿ ಆಸ್ಪತ್ರೆಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಹಾಸಿಗೆ ಲಭ್ಯವಾಗುವಂತೆ ಮಾಡುವ ಜವಾಬ್ದಾರಿ ಇವರಿಬ್ಬರದ್ದಾಗಿದೆ. ಹೆಚ್ಚು ಆಕ್ಸಿನೇಟೆಡ್ ಬೆಡ್ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳುವರು.
ಅರವಿಂದ ಲಿಂಬಾವಳಿ: ವಾರ್ ರೂಂ, ಕಾಲ್ ಸೆಂಟರ್ ಸೂಕ್ತ ನಿರ್ವಹಣೆ, ಸೂಕ್ತ ಸಮಯದಲ್ಲಿ ವೈದ್ಯಕೀಯ ಸಲಹೆ ನೀಡಲು ಹೊಣೆಗಾರಿಕೆ. ಅಲ್ಲಿನ ಕಾರ್ಯನಿರ್ವಹಣೆ ಮೇಲೆ ನಿಗಾ ವಹಿಸಿ ಸೋಂಕಿತರಿಗೆ ವೈದ್ಯಕೀಯ ನೆರವು.
ಕರೊನಾಗೆ ಮೊಸರನ್ನದ ಶಾಂತಿ!; ಮೊದಲ ಅಲೆಯಲ್ಲಿ ‘ಗೋ ಕರೊನಾ ಗೋ’, ಎರಡನೇ ಅಲೆಯಲ್ಲಿ ‘ಕರೊನಮ್ಮ ಊರು ಬಿಟ್ಟು ಹೋಗಮ್ಮ..’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − three =
Remember me
