ಕಲಬುರ್ಗಿ:ಮುಡಾ ಪ್ರಕರಣದಲ್ಲಿ ಸತ್ಯಕ್ಕೆ ಜಯ ಸಿಗಲಿದೆ ಎಂದ ಡಿಸಿಎಂ ಡಿಕೆ. ಶಿವಕುಮಾರ್​, ಸಿಎಂ ಸಿದ್ದರಾಮಯ್ಯ ಅವರು ಯಾವ ತಪ್ಪು ಮಾಡಿಲ್ಲ. ಸಿದ್ದು ಅವರು ಹೆದರಿಲ್ಲ, ಹೆದರೋದು ಇಲ್ಲ. ಭಯ ಅನ್ನೋದು ಅವರ ರಕ್ತದಲ್ಲೇ ಇಲ್ಲ ಎಂದ ಡಿಕೆಶಿ, ಬಿಜೆಪಿ ನಾಯಕರ ಸರಣಿ ಆರೋಪಗಳ ಬೆನ್ನಲ್ಲೇ ಮುಖ್ಯಮಂತ್ರಿಗಳ ಪರ ಬ್ಯಾಟ್ ಬೀಸಿದ್ದಾರೆ.
ಇದನ್ನೂ ಓದಿ:371 ಜೆ ಕಾಯ್ದೆ ಜಾರಿ ದಶಮಾನೋತ್ಸವ ಸಂಭ್ರಮಾಚರಣೆಗೆ ಚಿಂತನೆ : ಡಿಸಿಎಂ ಶಿವಕುಮಾರ
ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್​, “40 ವರ್ಷ ಇಂತಹ ಎಷ್ಟೋ ರಾಜಕಾರಣ ನೋಡಿದ್ದಾರೆ. ಹೆದರಿಕೆ ಅನ್ನೋದು ಅವರಿಗಿಲ್ಲ. ಹೆದರೋದು ಸಿದ್ದರಾಮಯ್ಯ ಅವರಲ್ಲಿ ಇಲ್ಲವೇ ಇಲ್ಲ. ಸತ್ಯಕ್ಕೆ ಯಾವತ್ತಿಗೂ ಜಯ ಸಿಗುತ್ತದೆ. ನಮ್ಮ ಸಿಎಂ ಯಾವ ತಪ್ಪು ಮಾಡಿಲ್ಲ. ಗೆಹ್ಲೋಟ್ ಅವರನ್ನು ಆ ಹುದ್ದೆಯಲ್ಲಿ ಕುರಿಸಿದ್ದು ಸಂವಿಧಾನ, ಜಾತಿಯಲ್ಲ. ಬಿಜೆಪಿಗರದ್ದು ಅನಗತ್ಯ ವಿವಾದ” ಎಂದರು.
“ಸಿಎಂ ಅವರಿಗೆ ಖರ್ಗೆಯವರಿಂದ ಹಿಡಿದು, ಸಚಿವರು, ಶಾಸಕರು ಎಲ್ಲರ ಬೆಂಬಲವಿದೆ. ರಾಜ್ಯದಲ್ಲಿ ಹತ್ತು ವರ್ಷ ನಮ್ಮದೆ ಸರ್ಕಾರ ಇರುತ್ತೆ ಅದರಲ್ಲಿ ಅನುಮಾನವೇ ಬೇಡ. ವಿಶೇಷವಾಗಿ ಸಿ.ಟಿ. ರವಿಗೆಂದು ಕಲಬುರಗಿಯಲ್ಲಿ ಹೊಸ ಆಸ್ಪತ್ರೆಯಾಗಿದೆ. ಅಲ್ಲಿಗೆ ಅವರನ್ನು ಸೇರಿಸಬೇಕು. ಪಾಪ ಅವರಿಗೆ ವಿವೇಚನ ಕಳೆದು ಹೋಗಿದೆ. ದೇಶದ ಅನೇಕ ಕಡೆ ರಾಜ್ಯಪಾಲರ ಹಸ್ತಕ್ಷೇಪ ನಡೆಯುತ್ತಿದೆ. ಮಾಧ್ಯಮದವರೇ ದೇಶದ ಯಾವ ರಾಜ್ಯದಲ್ಲಿ ಏನು ನಡೆಯುತ್ತಿದೆಯೋ ಅದೆಲ್ಲವನ್ನೂ ಬಹಿರಂಗವಾಗಿ ತೋರಿಸುತ್ತಿದ್ದೀರಿ” ಎಂದು ಹೇಳಿದರು.
ಇದನ್ನೂ ಓದಿ:ಹೆಚ್ಚುತ್ತಿದೆ ಅಸ್ಸಾಂ ಕಾರ್ಮಿಕರ ಸಂಖ್ಯೆ
“ಸಿಎಂ ಅವರು ದೆಹಲಿ ಹೋಗಲೇಬೇಕಲ್ವಾ? ಹೈಕಮಾಂಡ್​ಗೆ ಎಲ್ಲಾ ಮಾಹಿತಿ ನೀಡಬೇಕು. ಅದಕ್ಕಾಗಿ ದಿಢೀರನೆ ದೆಹಲಿಗೆ ಹೋಗಿ ಬಂದಿದ್ದಾರೆ ಅಷ್ಟೇ” ಎಂದರು.
1 ಗ್ಲಾಸ್​ ಜ್ಯೂಸ್​… ಒಲಿಂಪಿಕ್ ಫೈನಲ್​ ಹಿಂದಿನ ರಾತ್ರಿ ನಡೆದಿದ್ದೇನು? ಅಚ್ಚರಿ ಮೂಡಿಸುತ್ತೆ ಈ ವರದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + six =
Remember me
