ಬೆಂಗಳೂರು:5 ಗ್ಯಾರಂಟಿ ಭರವಸೆಯನ್ನು ಈಡೇರಿಸಲು ಸಮಸ್ಯೆಯಾಗದಂತೆ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದ್ದಾರೆ ಎಂದು ಕೃಷಿ ಸಚಿವ ಎನ್​. ಚೆಲುವರಾಯಸ್ವಾಮಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:ದೃಷ್ಟಿಮಾಂದ್ಯರಿಗೆ ‘ಆಶಾಕಿರಣ’; ಮಧುಮೇಹ, ರಕ್ತದೊತ್ತಡ ಇರುವವರ ಮನೆಬಾಗಿಲಿಗೆ ಔಷಧಿ!
ಸಿಎಂ ಸಿದ್ದರಾಮಯ್ಯನವರು ಐದು ಭರವಸೆ ಈಡೇರಿಸಲು ಸಮಸ್ಯೆಯಾಗದಂತೆ ಬಜೆಟ್ ಮಂಡಿಸಿದ್ದಾರೆ. ಎಲ್ಲಾ ರೀತಿಯಲ್ಲೂ ಉತ್ತಮದ ಬಜೆಟ್ ಇದಾಗಿದೆ. ಕೃಷಿ ಭಾಗ್ಯ ಯೋಜನೆಯನ್ನು ವಿಸ್ತರಣೆ ಮಾಡುವುದರ ಜತೆಗೆ 100 ಕೋಟಿ ಅನುದಾನ ಮೀಸಲಿಟ್ಟಿರುವುದು ಖುಷಿ ಸಂಗತಿ ಎಂದು ಹೇಳಿದರು.
ಇನ್ನು ಮಾಜಿ ಮುಖ್ಯಮಂತ್ರಿ ಎಚ್​​.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಚೆಲುವರಾಯಸ್ವಾಮಿ, “ಕಿವಿಗೆ ಚೆಂಡೂವು ಮುಡಿಸುವ ಬಜೆಟ್ ಎಂದು ಕುಮಾರಸ್ವಾಮಿ ನೀಡಿದ ಹೇಳಿಕೆ ಸರಿಯಿಲ್ಲ! ಬಜೆಟ್​ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇಲ್ಲ. ಒಂದು ಪಕ್ಷದ ಸಭಾ ನಾಯಕರು ಬಜೆಟ್​​ನಲ್ಲಿ ಕೂರದೇ ಇರುವವರು ಬಜೆಟ್ ಬಗ್ಗೆ ಹೇಳಿಕೆ ಕೊಡುತ್ತಾರೆ. ಸದನದಲ್ಲಿ ಕೂತು ಬಳಿಕ ಮಾತನಾಡಬೇಕಿತ್ತು” ಎಂದು ಹೇಳಿದರು.
ಇದನ್ನೂ ಓದಿ:ಬಜೆಟ್​ ಹೆಸರಿನಲ್ಲಿ ರಾಜ್ಯದ ಜನತೆಯ ಕಿವಿ ಮೇಲೆ ಹೂ ಇಟ್ಟಿದ್ದಾರೆ: ಎಚ್​.ಡಿ. ಕುಮಾರಸ್ವಾಮಿ
“ಎಚ್.ಡಿ. ಕುಮಾರಸ್ವಾಮಿ ಅವರ ಪ್ರತಿಕ್ರಿಯೆಯನ್ನು ಪರಿಗಣಿಸಲೇಬಾರದು. ಬಜೆಟ್​​ಗೆ ಹಾಜರಾಗದವರ ಬಗ್ಗೆ ನಗುವುದೋ, ಅಳುವುದೋ” ಎಂದು ಹೇಳುವ ಮುಖೇನ ಎಚ್​​ಡಿಕೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ದಾಖಲೆ ಬರೆದ ‘ಸಲಾರ್’ ಟೀಸರ್; ಸಂಚಲನ ಮೂಡಿಸಿದ ಪ್ರಭಾಸ್-ನೀಲ್​​ ಕಾಂಬಿನೇಷನ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
