ಬೆಳಗಾವಿ:ಕಾಂಗ್ರೆಸ್ ಸಂಬಂಧವನ್ನೇ ಕಡಿದುಕೊಳ್ಳಲು ನಿರ್ಧರಿಸಿರುವ ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ, ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಇಬ್ರಾಹಿಂ, ಜನರು ಕಾಂಗ್ರೆಸ್ ಪಕ್ಷವನ್ನು ಕೈ ಬಿಟ್ಟಿದ್ದಾರೆ. ಈ ಪಕ್ಷದ ಮುಖಂಡರು ಬೆಂಗಳೂರು- ದೆಹಲಿಯಲ್ಲಿ ಕುಳಿತು ಚರ್ಚೆ ಮಾಡ್ತಾರೆ. ಇದರಿಂದ ಕಾಂಗ್ರೆಸ್ ಜನರಿಂದ ದೂರವಾಗಿದೆ ಎಂದರು. ಕಾಂಗ್ರೆಸ್​ ಪಕ್ಷದಲ್ಲಿ ನಿಮ್ಮನ್ನು ತುಳಿಯಲಾಯಿತು(ಕಡೆಗಣಿಸುವಿಕೆ) ಎನ್ನಲಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಇಬ್ರಾಹಿಂ, ನನ್ನನ್ನು ತುಳಿಯಲು ನಾನು ಹಗುರವಾಗಿಲ್ಲ, 110 ಕೆಜಿ ಇರುವೆ. ಆದರೆ ಕಾಂಗ್ರೆಸ್​ನಲ್ಲಿ ನನಗೆ ಪರದೆ ಹಾಕಿದ್ರು. ಹಾಗಾಗಿ ಅದರಿಂದ ಹೊರಗೆ ಬಂದೆ. ಸಿದ್ದರಾಮಯ್ಯ ನನ್ನ ಸ್ನೇಹಿತರು. ಅವರ ಬಗ್ಗೆ ಏನೂ ಮಾತನಾಡಲ್ಲ. ಆದ್ರೆ ಮನೆ ಕಟ್ಟಿದವರು ಮನೆಯಲ್ಲಿ ಇರಲ್ಲ. ಮನೆ ಕಟ್ಟಿದವರಿಗೆ ಒಂದೆರೆಡು ಮೂಸಂಬಿ ಹಣ್ಣು ಕೊಟ್ಟು, ಶಾಲು ಹೊದಿಸಿ ಹೊರಗೆ ಹಾಕ್ತಾರೆ ಎನ್ನುವ ಮೂಲಕ ಪಕ್ಷ ಸಂಘಟನೆ ಮಾಡಿದ್ದಕ್ಕೆ ಬೆಲೆ ಸಿಗಲಿಲ್ಲ ಎಂದು ಪರೋಕ್ಷವಾಗಿ ಮಾತಿನಲ್ಲೇ ತಿವಿದರು.ಇದನ್ನೂ ಓದಿರಿಜೆಡಿಎಸ್​ ಮನೆಗೆ ಬಂದ ಸಿ.ಎಂ.ಇಬ್ರಾಹಿಂ! ನಾನು ಮತ್ತು ದೇವೇಗೌಡರು ತಂದೆ-ಮಗ ಇದ್ದಂತೆ…
ಪ್ರಾದೇಶಿಕ ಪಕ್ಷದಿಂದ ಜನರ ಸಮಸ್ಯೆ ಪರಿಹಾರ ಮಾಡಿಕೊಳ್ಳಲು ಸಾಧ್ಯವಿದೆ. ದೇವೇಗೌಡ ಮತ್ತು ಕುಮಾರಸ್ವಾಮಿ ಇಬ್ಬರ ವ್ಯಕ್ತಿತ್ವವೂ ಒಂದೇ ಇದೆ. ಇವರೆಲ್ಲರನ್ನೂ ಸಂಗಮ ಮಾಡಿ ಏನು ಮಾಡಲು ಸಾಧ್ಯವಿದೆ ಎಂಬುದರ ಬಗ್ಗೆ ನೋಡುತ್ತೇವೆ ಎಂದರು.
ಬೆಳಗಾವಿಯಲ್ಲಿ ಹಳಬರು, ಹೊಸಬರ ಪರಿಚಯ ಮಾಡಿಕೊಂಡಿದ್ದೇನೆ. ರಾಜ್ಯದಲ್ಲಿ ರಾಜಕೀಯ ವ್ಯವಸ್ಥೆ ಕೆಟ್ಟು ಹೋಗಿದೆ. ಹೀಗಾಗಿ ಎಲ್ಲ ಸಮುದಾಯದ ಮುಖಂಡರ ಜತೆಗೆ ಚರ್ಚೆ ಮಾಡಿರುವೆ. ಅವರಿಂದ ಒಳ್ಳೆಯ ಅಭಿಪ್ರಾಯ ಬಂದಿದೆ. ಮುಂದೆ ಒಂದು ರಾಜಕೀಯ ತೀರ್ಮಾನ ಮಾಡ್ತೀನಿ‌. ಕಾಂಗ್ರೆಸ್ ಮತ್ತು ಜೆಡಿಎಸ್​ ಯಥಾ ಪ್ರಕಾರ ನಡೆಯುತ್ತಿದೆ. ನಾನು ಬಿಜೆಪಿ ಸೇರಲ್ಲ. ಬದಲಾವಣೆಗೆ ಜನರು ಸ್ಪಂದಿಸಬೇಕು ಎನ್ನುವ ಮೂಲಕ ಕಾಂಗ್ರೆಸ್​ ತೊರೆದು ಜೆಡಿಎಸ್ ಸೇರುವ ಬಗ್ಗೆ ಸೂಚ್ಯವಾಗಿ ಹೇಳಿದರು.ಇದನ್ನೂ ಓದಿರಿವಾಟ್ಸ್​ಆ್ಯಪ್​ ವಿಡಿಯೋ ಕಾಲ್​ನಲ್ಲಿ ಬೆತ್ತಲಾದ ಯುವತಿಯರು… ಕಣ್ತುಂಬಿಕೊಂಡವನಿಗೆ ಕಾದಿತ್ತು ಭಾರಿ ಸಂಕಷ್ಟ!
ಈ ಹಿಂದೆ ಜೆಡಿಎಸ್​ನಲ್ಲಿದ್ದ ಇಬ್ರಾಹಿಂ, ಸಿದ್ದರಾಮಯ್ಯರನ್ನ ಬೆಂಬಲಿಸಿ ಕಾಂಗ್ರೆಸ್ ಸೇರಿದ್ದರು, 2018ರ ಚುನಾವಣೆಯಲ್ಲೂ ಪರವಾಗಿ ರಾಜ್ಯ ಸುತ್ತಿದ್ದರು. ಇದೀಗ ವಿಧಾನಪರಿಷತ್ ಪ್ರತಿಪಕ್ಷ ಸ್ಥಾನದ ಆಯ್ಕೆ ಸಂದರ್ಭ ಸಿದ್ದರಾಮಯ್ಯ ತಮ್ಮ ಪರ ನಿಲ್ಲಲಿಲ್ಲ ಎಂದು ಮುನಿಸಿಕೊಂಡ ಅವರು ಜೆಡಿಎಸ್​ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಗಾಗಲೇ ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ ಮತ್ತು ಎಚ್​.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆಯನ್ನೂ ನಡೆಸಿದ್ದಾರೆ. ‘ನಾನು ಮತ್ತು ದೇವೇಗೌಡರು ತಂದೆ-ಮಗ ಇದ್ದಂತೆ. ತಂದೆ ಎಂದಾದರೂ‌ ಮಗನಿಗೆ ಬೇಡ ಅಂತಾರಾ?’ ಎಂದೂ ಹೇಳಿದ್ದರು.
ಸೆಕ್ಸ್​ ಮಾಡುವಾಗ ಪ್ರಜ್ಞೆ ತಪ್ಪಿದಳು, ನಾನು ಕೊಲೆ ಮಾಡಿಲ್ಲ… ಎಂದು ಕಣ್ಣೀರಿಟ್ಟ ಆರೋಪಿ

ಬೈಕ್​ನಲ್ಲಿ ಕುಳಿತು ನಿದ್ರೆಗೆ ಜಾರಿದ ತಾಯಿ-ಮಕ್ಕಳು ತರಗೆಲೆಯಂತೆ ರಸ್ತೆಗೆ ಉರುಳಿದರು! ಬೆಚ್ಚಿಬೀಳಿಸುತ್ತೆ ಈ ದೃಶ್ಯ

ಮಹಿಳಾ ಸಹೋದ್ಯೋಗಿಗಳ ಅಶ್ಲೀಲ ದೃಶ್ಯವನ್ನು ತನ್ನ ಪ್ರಿಯಕರನಿಗೆ ಕಳುಹಿಸುತ್ತಿದ್ದ ಪ್ರೇಯಸಿ! ಮುಂದೇನಾಯ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + eight =
Remember me
