ಉಡುಪಿ:ಈಶ ಫೌಂಡೇಷನ್​ನ ಸದ್ಗುರು ಹಮ್ಮಿಕೊಂಡಿರುವ ಮಣ್ಣು ರಕ್ಷಿಸಿ ಅಭಿಯಾನಕ್ಕೆ ಕರ್ನಾಟಕದಲ್ಲೂ ಚಾಲನೆ ಸಿಕ್ಕಿದ್ದು, ಉಡುಪಿಯ ಮಣಿಪಾಲದಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಯಾನವನ್ನು ಉದ್ಘಾಟಿಸಿದರು.
ಇಂಥದ್ದೊಂದು ಅಭಿಯಾನವನ್ನು ಹಮ್ಮಿಕೊಂಡಿರುವ ಸದ್ಗುರು ಅವರಿಗೆ ಧನ್ಯವಾದಗಳನ್ನು ತಿಳಿಸಿದ ಸಿಎಂ, ಮಣ್ಣು ರಕ್ಷಿಸಿ ಅಭಿಯಾನಕ್ಕೆ ತಮ್ಮ ಸಂಪೂರ್ಣ ಅಭಿಯಾನ ಇರುವುದಾಗಿ ತಿಳಿಸಿದರು. ಈ ಅಭಿಯಾನ ಎಲ್ಲ ತಾಲೂಕು-ಜಿಲ್ಲೆಗಳಲ್ಲೂ ಆಗಬೇಕು, ಮಣ್ಣು ಮತ್ತು ಮನುಷ್ಯನಿಗೆ ನೇರವಾದ ಸಂಬಂಧವಿದೆ, ಮಣ್ಣು ಉಳಿದರೆ ಮನುಷ್ಯ ಉಳಿಯುತ್ತಾನೆ. ಹೀಗಾಗಿ ಮಣ್ಣು ಮತ್ತು ಅದರ ಸತ್ವವನ್ನು ಉಳಿಸುವ ನೈತಿಕ ಹಾಗೂ ಅತ್ಯಂತ ಅವಶ್ಯವಾಗಿರುವ ಜವಾಬ್ದಾರಿ ಎಲ್ಲರ ಮೇಲೂ ಇದೆ ಎಂದು ಮುಖ್ಯಮಂತ್ರಿಯವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಚಿವ ಸುನೀಲ್​ ಕುಮಾರ್​, ಶಾಸಕ ರಘುಪತಿ ಭಟ್ ಮತ್ತು ಸ್ಥಳೀಯರು ಹಾಗೂ ಮಣ್ಣು ಉಳಿಸಿ ಅಭಿಯಾನದ ಸ್ವಯಂ ಸೇವಕರು ಪಾಲ್ಗೊಂಡಿದ್ದರು.
ಅಂತಾರಾಷ್ಟ್ರೀಯ ಮಟ್ಟದ ಈ ಅಭಿಯಾನ ಮಾ. 21ರಂದು ಲಂಡನ್​​ನಲ್ಲಿ ಉದ್ಘಾಟನೆಗೊಂಡಿತ್ತು. ಈ ಅಭಿಯಾನದಲ್ಲಿ ಸದ್ಗುರು ಏಕಾಂಗಿಯಾಗಿ ಬೈಕ್​ನಲ್ಲಿ 27 ರಾಷ್ಟ್ರಗಳಲ್ಲಿ ಒಟ್ಟು 30 ಸಾವಿರ ಕಿ.ಮೀ. ಸಂಚರಿಸಲಿದ್ದಾರೆ. ಒಟ್ಟು ನೂರು ದಿನಗಳ ಈ ಅಭಿಯಾನದಲ್ಲಿ ಅವರು ವಿವಿಧ ರಾಷ್ಟ್ರಗಳಲ್ಲಿ ಸಂಚರಿಸಿ, ಮಣ್ಣಿನ ಮಹತ್ವ ಹಾಗೂ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಜತೆಗೆ ಆಯಾ ದೇಶಗಳಲ್ಲಿ ಸೂಕ್ತ ನೀತಿ ರೂಪಿಸುವಂತೆ ಮನವರಿಕೆ ಮಾಡಿಕೊಡಲಿದ್ದಾರೆ.
ಸದ್ಗುರು ಈಗಾಗಲೇ ನೆದರ್ಲೆಂಡ್ಸ್​, ಜರ್ಮನಿ, ಜೆಕ್ ರಿಪಬ್ಲಿಕ್, ಆಸ್ಟ್ರಿಯಾ, ಸ್ಲೊವೇನಿಯಾ, ಇಟಲಿ ಮತ್ತು ಸ್ವಿಜರ್ಲೆಂಡ್ ಮೂಲಕ ಹಾದು ಹೋಗಿದ್ದು, ಮುಂದೆ ಬೆಲ್ಜಿಯಮ್​ನ ಬ್ರಸೆಲ್ಸ್​ಗೆ ತೆರಳಲಿದ್ದಾರೆ.
5 ಮದ್ವೆ, 3 ಡೈವೋರ್ಸ್, ಸದ್ಯ ಇಬ್ರು ಹೆಂಡ್ತಿ; ಪತ್ನಿ ಬೇಗ ಮನೆಗೆ ಬರಲಿ ಎಂದೇ ಫ್ಲೈಓವರ್!; ಏನಿದು, ಯಾರ ಕಥೆ?
Sign in to your account
Please enter an answer in digits:four × 2 =
Remember me
