ವಿಜಯಪುರ: ಸಾಲ ಮಾಡಿಯಾದರೂ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ -3 ರ ಕಾಮಗಾರಿ ಪೂರ್ಣಗೊಳಿಸುವುದಾಗಿ ಸಿಎಂ ಯಡಿಯೂರಪ್ಪ ಭರವಸೆ ನೀಡಿದರು. ಮಂಗಳವಾರ ಮಳೆ ಹಾಗೂ ನೆರೆ ಹಾನಿಗೆ ಸಂಬಂಧಿಸಿದಂತೆ ಮಂಗಳವಾರ ವೈಮಾನಿಕ ಸಮೀಕ್ಷೆ ನಡೆಸಿ ಗದಗ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಆಲಮಟ್ಟಿ ಅಣೆಕಟ್ಟು ಎತ್ತರವನ್ನು524.256 ಮೀಟರ್ ಗೆ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಈಗಾಗಲೇ ರಾಜ್ಯ ಜಲಸಂಪನ್ಮೂಲ ಸಚಿವರು ಕೇಂದ್ರದ ಜಲಸಂಪನ್ಮೂಲ ಇಲಾಖೆ ಸಭೆಯಲ್ಲಿ ಭಾಗವಹಿಸಿ ಈ ಬಗ್ಗೆ ಗಮನ ಸೆಳೆದಿದ್ದಾರೆ. ಕೃಷ್ಣಾ ನ್ಯಾಯಾಧೀಕರಣ ತೀರ್ಪು ಆದಷ್ಟು ಬೇಗ ಹೊರಬಿದ್ದರೆ ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಿದ್ದಾರೆ. ಆದರೆ, ಕರೋನಾ ಹಿನ್ನೆಲೆ ಸಾಕಷ್ಟು ಹಣಕಾಸಿನ ಅಡಚಣೆ ಎದುರಾಗಿದೆ. ಅದಾಗ್ಯೂ ಎಲ್ಲ ಕಾಮಗಾರಿಗೆ ಅನುದಾನ ಒದಗಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರಲ್ಲದೇ ಗ್ರಾಮಗಳ ಸ್ಥಳಾಂತರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವೆ. ಬೆಳೆ ಹಾನಿ, ರಸ್ತೆ ದುರಸ್ಥಿಗೆ ಹೆಚ್ಚಿನ ಹಣ ಈ ಭಾಗಕ್ಕೆ ನೀಡಲಾಗುವುದು ಎಂದರು.
ಇದನ್ನೂ ಓದಿ:ಪುಲ್ವಾಮಾ ದಾಳಿ: ಪಾಕ್‌ನ ಉಗ್ರ ಮುಖ ಬಯಲು- 5 ಸಾವಿರ ಪುಟಗಳಲ್ಲಿದೆ ಮಾಹಿತಿ
ಶ್ವೇತಪತ್ರವೇಕೆ ಚರ್ಚೆಗೆ ಅವಕಾಶ:ಕರೊನಾ ನಿಯಂತ್ರಣದಲ್ಲಿ ಸರ್ಕಾರ ಭ್ರಷ್ಟಾಚಾರ ನಡೆಸಿದ್ದು ಈ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕೆಂಬುದು ಪ್ರತಿಪಕ್ಷಗಳ ಒತ್ತಾಯವಾಗಿದೆಯಲ್ಲ ಎಂಬ ಪ್ರಶ್ನೆಗೆ, ಶ್ವೇತ ಪತ್ರವೇಕೆ? ಸದನದಲ್ಲೇ ಚರ್ಚೆಗೆ ಅವಕಾಶ ಕೊಡುವುದಾಗಿ‌ ಸಿಎಂ ಪ್ರತಿಕ್ರಿಯಿಸಿದರಲ್ಲದೇ ಕರೊನಾ‌ ನಿಯಂತ್ರಣದಲ್ಲಿ ಯಾವುದೇ ಅವ್ಯವಹಾರವಾಗಿಲ್ಲ ಎಂದರು.
ಇದನ್ನೂ ಓದಿ:ಸಚಿನ್​ ನಿವೃತ್ತಿ ಬಳಿಕ ಐಪಿಎಲ್​ ನೋಡುವುದನ್ನೇ ನಿಲ್ಲಿಸಿದ್ದಾರೆ ಈ ಮಹಿಳಾ ಕ್ರಿಕೆಟರ್..!
ತಳವಾರ- ಪರಿವಾರ ಸಮಸ್ಯೆ ಗೊಂದಲ:ಇನ್ನು ತಳವಾರ ಮತ್ತು ಪರಿವಾರ ಸಮುದಾಯ ವನ್ನು ಎಸ್ ಟಿಗೆ ಸೇರಿಸಬೇಕೆಂದು ಕೇಂದ್ರ ಸರ್ಕಾರ ಗೆಜೆಟ್ ಹೊರಡಿಸಿದ್ದರೂ ರಾಜ್ಯದಲ್ಲಿ ಅನುಷ್ಟಾನ ವಿಳಂಬಕ್ಕೆ ಕಾರಣವೇನು? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ, ಕೇಂದ್ರ ಗೆಜೆಟ್ ಹೊರಡಿಸಿದ್ದು ಸರಿ. ಅದರಲ್ಲಿ ನಾಯಕ ಪದದ ಪರ್ಯಾಯ ಪದ ತಳವಾರ ಮತ್ತು ಪರಿವಾರ ಎಂದಿದೆ. ಆದರೆ ಇದರಲ್ಲಿ ಕೆಲವು ಗೊಂದಲ ಇದ್ದು ಆ ಬಗ್ಗೆ ಶೀಘ್ರದಲ್ಲಿ ಪರಿಹರಿಸಲು ಕೋರಿಕೊಳ್ಳಲಾಗಿದೆ ಎಂದು ಪ್ರತಿಕ್ರಿಯಿಸಿದರು. ಅಲ್ಲದೇ ಈಗಾಗಲೇ ಶೈಕ್ಷಣಿಕ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು ಸಮುದಾಯದ ಮಕ್ಕಳು ತೀವ್ರ ತೊಂದರೆಗೆ ಸಿಲುಕಿದ್ದಾರೆಂಬ ಪ್ರಶ್ನೆಗೆ ಶೀಘ್ರದಲ್ಲೇ ಸಮಸ್ಯೆ ಇತ್ಯರ್ಥ ಪಡಿಸಿವುದಾಗಿ ತಿಳಿಸಿ ನಿರ್ಗಮಿಸಿದರು.
ಇದನ್ನೂ ಓದಿ:ತಳವಾರ ಮತ್ತು ಪರಿವಾರ ಸಮುದಾಯದ ಮೀಸಲು ಗೊಂದಲ ಬಗೆಹರಿಸಲು ಮನವಿ
ಡಿಸಿಎಂ ಗೋವಿಂದ ಕಾರಜೋಳ, ರಮೇಶ ಜಾರಕಿಹೊಳಿ, ಸಿ.ಸಿ. ಪಾಟೀಲ, ಸಚಿವ ಆರ್‌. ಅಶೋಕ, ಬಸವರಾಜ ಬೊಮ್ಮಾಯಿ, ಶಾಸಕರಾದ ಎ.ಎಸ್. ಪಾಟೀಲ ನಡಹಳ್ಳಿ, ಮುರಗೇಶ‌ ನಿರಾಣಿ ಮತ್ತಿತರರಿದ್ದರು.
ಗ್ರೇಟ್​ ಎಸ್ಕೇಪ್​: ಭೀಕರ ಅಪಘಾತದ ದೃಶ್ಯ ವೈರಲ್ ಆಯಿತು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − six =
Remember me
