ಬೆಂಗಳೂರು:ಜುಲೈ ಅಂತ್ಯ ಹಾಗೂ ಆಗಸ್ಟ್ 2ನೇ ವಾರದೊಳಗೆ ರಾಜ್ಯದ ಕರೊನಾ ಸೋಂಕಿತರ ಸಂಖ್ಯೆ 70 ಸಾವಿರದಿಂದ 1 ಲಕ್ಷಕ್ಕೆ ಏರಿಕೆ ಆಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳ ಹೊರೆ ಕಡಿಮೆಮಾಡಲು ರೋಗಲಕ್ಷಣ ಇಲ್ಲದವರನ್ನು ಹೋಂ ಐಸೋಲೇಷನ್ ಮಾಡಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಹಿರಿಯ ವೈದ್ಯರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಸಿಎಂ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಪಾಲ್ಗೊಂಡ ತಜ್ಞ ವೈದ್ಯರು ಕರೊನಾ ತಡೆಗಾಗಿ ಹಲವು ಸಲಹೆ, ಅಭಿಪ್ರಾಯಗಳನ್ನು ಸರ್ಕಾರದ ಮುಂದಿಟ್ಟರು. ಈ ಆಧಾರದ ಮೇಲೆ ಸರ್ಕಾರ ಗುರುವಾರ ಚಿಕಿತ್ಸೆಗೆ ಸಂಬಂಧಿಸಿದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಿದೆ. ಸರ್ಕಾರ ಹೇಳುವ 4 ಟಿ ಗಳಾದ ಟೆಸ್ಟಿಂಗ್, ಟ್ರಾ್ಯಕಿಂಗ್, ಟ್ರೇಸಿಂಗ್ ಮತ್ತು ಟ್ರೀಟ್ಮೆಂಟ್ ವಿಧಾನದಲ್ಲಿ ಹೊಂದಾಣಿಕೆ ಕೊರತೆ ಕಂಡುಬರುತ್ತಿದೆ. ಪರಿಣಾಮ ಟೆಸ್ಟಿಂಗ್ ವರದಿ ನೀಡಲು ವಿಳಂಬವಾಗುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚುವ ಹಿನ್ನೆಲೆಯಲ್ಲಿ ಸಿದ್ಧತೆ ಬಹಳ ಮುಖ್ಯವೆಂದು ತಜ್ಞರು ಹೇಳಿದ್ದಾರೆ.
ಸರ್ಕಾರದ ಸಂಭಾವ್ಯ ಮಾರ್ಗಸೂಚಿ
ತಜ್ಞರ ಸಲಹೆಗಳನ್ನು ಪಡೆದುಕೊಳ್ಳಲಾಗಿದೆ. ಇವುಗಳನ್ನು ಆಧರಿಸಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಿದ್ದೇವೆ.| ಡಾ.ಸುಧಾಕರ್ವೈದ್ಯಕೀಯ ಶಿಕ್ಷಣ ಸಚಿವ
ತಜ್ಞರ ಸಲಹೆಗಳೇನು:· ಸೋಂಕು ಹೆಚ್ಚಲಿರುವ ಕಾರಣ ಅಗತ್ಯ ಮುನ್ನೆಚ್ಚರಿಕೆ, ಬೆಡ್ ,ಟೆಸ್ಟಿಂಗ್ ಕಿಟ್, ಉಪಕರಣಗಳು ಹಾಗೂ ಔಷಧ ಸಿದ್ಧಪಡಿಸಿಕೊಳ್ಳಬೇಕು · ರೋಗ ಲಕ್ಷಣ ಇಲ್ಲದ ಅಥವಾ ಅತ್ಯಂತ ಕಡಿಮೆ ಜ್ವರದ ಲಕ್ಷಣವುಳ್ಳವರನ್ನು ಹೋಮ್ ಐಸೋಲೇಷನ್ ಮಾಡಿ ಆಸ್ಪತ್ರೆಗಳ ಮೇಲೆ ಒತ್ತಡ ತಗ್ಗಿಸಬಹುದು · ತೀವ್ರ ಸೋಂಕಿನ ಲಕ್ಷಣ ಹೊಂದಿರುವವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿರುವವರು ಸೋಂಕಿತರಾದಲ್ಲಿ, ಅವರಿಗೆ ಉತ್ತಮ ಚಿಕಿತ್ಸೆ ನೀಡಲು ಆದ್ಯತೆ ನೀಡಬೇಕು · ಪ್ರಕರಣ ದ್ವಿಗುಣಗೊಳ್ಳುವ ವೇಗ ತಗ್ಗಿಸಬೇಕು. ಮುಚ್ಚಿದ ಸ್ಥಳಗಳು, ನಿಕಟ ಸಂಪರ್ಕ ಹಾಗೂ ಜನಸಂದಣಿಯ ಸ್ಥಳಗಳಲ್ಲಿ ಜನತೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು· ಟೆಲಿ ಮೆಡಿಸಿನ್ ವ್ಯವಸ್ಥೆ ಮೂಲಕ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡಬಹುದು· ಸಂಪರ್ಕ ಪತ್ತೆಹಚ್ಚಲು ಇತರ ಇಲಾಖೆಗಳ ಸಿಬ್ಬಂದಿ ಸೇವೆ ಬಳಸಿಕೊಳ್ಳಬೇಕು· ಟೆಲಿ ಐಸಿಯು ಹಾಗೂ ಚಿಕಿತ್ಸೆಯ ನಿಗದಿತ ಮಾನದಂಡಗಳ ಕುರಿತು ಹೆಚ್ಚಿನ ತರಬೇತಿ ಅಗತ್ಯ · ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ಸರಪಣಿ ಹಾಗೂ ಹೊಸ ಔಷಧ ಪೂರೈಕೆ ಸರಪಣಿ ಅಬಾಧಿತವಾಗಿರಬೇಕು · ಮಾಧ್ಯಮಗಳು ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು · ಬೆಂಗಳೂರಿನಲ್ಲಿ ಮರಣ ಪ್ರಮಾಣ ಶೇ. 5ರಿಂದ ಶೇ. 2.5ಕ್ಕೆ ರಾಜ್ಯದ ಇತರ ಕಡೆ ಶೇ. 1ಕ್ಕೆ ಇಳಿದಿದೆ. ಇದನ್ನು ಶೂನ್ಯಕ್ಕೆ ಇಳಿಸಬೇಕು.
ಇದನ್ನೂ ಓದಿ:21 ಪೊಲೀಸರಿಗೆ ಸೋಂಕು- ಈವರೆಗೆ 168ಕ್ಕೂ ಮಂದಿಗೆ ಕೋವಿಡ್ | ಸಿಐಡಿ ಕಚೇರಿ ಸೀಲ್​ಡೌನ್
ಬಿಡಿಎ ಕಚೇರಿಗೆ ಜನರ ಪ್ರವೇಶ ಇಲ್ಲ:ಕರೊನಾ ಕಾರಣ ಸಾರ್ವಜನಿಕರಿಗೆ ಕಚೇರಿ ಭೇಟಿಯನ್ನು ಬಿಡಿಎ ತಾತ್ಕಾಲಿಕವಾಗಿ ನಿಷೇಧಿಸಿದೆ. ದೂರವಾಣಿ, ಇ- ಮೇಲ್ ಹಾಗೂ ರಿಜಿಸ್ಟರ್ಡ್ ಪೋಸ್ಟ್ ಮೂಲಕ ಕೆಲಸ ಮಾಡಿಸಿಕೊಳ್ಳುವಂತೆ ಆಯುಕ್ತರು ಕೋರಿದ್ದಾರೆ. ನೋಂದಣಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕಚೇರಿಗೆ ಕರೆ ಮಾಡಿ ನೋಂದಣಿ ದಿನಾಂಕ ಖಚಿತಪಡಿಸಿಕೊಂಡು ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಾಗುವಂತೆ ಸೂಚಿಸಲಾಗಿದೆ.
ತಜ್ಞರು ಅನೇಕ ಸಲಹೆ, ಸೂಚನೆ ಅಭಿಪ್ರಾಯಗಳನ್ನು ಮುಂದಿಟ್ಟಿದ್ದಾರೆ. ಈ ಕುರಿತು ಸರ್ಕಾರದ ಹಂತದಲ್ಲಿ ವಿವರವಾಗಿ ಚರ್ಚಿಸಿ  ಕ್ರಮ ಕೈಗೊಳ್ಳಲಾಗುವುದು.| ಬಿ.ಎಸ್.ಯಡಿಯೂರಪ್ಪಮುಖ್ಯಮಂತ್ರಿ
ಸಭೆಯಲ್ಲಿದ್ದವರು:ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಆರೋಗ್ಯ ಸಚಿವ ಬಿ. ಶ್ರೀರಾಮುಲು, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ವಿಶ್ವ ಆರೋಗ್ಯ ಸಂಸ್ಥೆಯ ದಕ್ಷಿಣ ಭಾರತ ಪ್ರತಿನಿಧಿ ಡಾ. ಅಶಿತ್ ಸತ್ಪತಿ ಹಾಗೂ ವಿವಿಧ ಆಸ್ಪತ್ರೆಗಳ ಮುಖ್ಯಸ್ಥರಾದ ಡಾ. ಸುದರ್ಶನ ಬಲ್ಲಾಳ್, ಡಾ. ದೇವಿ ಶೆಟ್ಟಿ, ಡಾ. ಸಿ.ಎನ್. ಮಂಜುನಾಥ್, ಡಾ. ವಿವೇಕ್ ಜವಳಿ, ಡಾ. ಶರಣಪ್ರಕಾಶ್ ಪಾಟೀಲ್, ಡಾ. ಲೋಕೇಶ್, ಡಾ. ಸತೀಶ್, ಡಾ. ಷರೀಫ್, ಡಾ. ರಂಗನಾಥ್, ಡಾ. ಪ್ರಭುದೇವ್, ಡಾ. ಪ್ರದೀಪ್ ರಂಗಪ್ಪ, ಡಾ. ಪ್ರಕಾಶ್, ಡಾ. ಕುಮಾರ್, ಡಾ. ಗಿರಿಧರ ಬಾಬು ಹಾಗೂ ಇತರರು.
ಮಾಧ್ಯಮಗಳಿಗೆ ಕಿವಿ ಮಾತು ಹೇಳಿದ್ರು ಸಿಎಂ ಬಿಎಸ್​ವೈ: ಏನದು?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
