ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ ಭಾರತಕ್ಕೆ ಕರೆ ನೀಡಿದ್ದು, ಸ್ವದೇಶಿ ಹಾಗೂ ಸ್ಥಳೀಯ ಉತ್ಪನ್ನಗಳಿಗೇ ಹೆಚ್ಚು ಒತ್ತು ನೀಡುವಂತೆ ಕೋರಿದ್ದಾರೆ. ಮತ್ತೊಂದೆಡೆ ಚೀನಾ ಉತ್ಪನ್ನಗಳಿಗೆ ನಿಷೇಧ ಹೇರಲಾಗಿದ್ದು, ಚೀನಾದ ಆ್ಯಪ್​ಗಳನ್ನೂ ಸಾಲುಸಾಲಾಗಿ ಬ್ಯಾನ್ ಮಾಡಿಸಿದ್ದಾರೆ. ಪ್ರಧಾನಿ ಕರೆ ಮೇರೆಗೆ ಬಹಳಷ್ಟು ಭಾರತೀಯರು ಸ್ವದೇಶಿ ಮಂತ್ರಕ್ಕೆ ಮಾರುಹೋಗಿದ್ದರೆ ಬಿಜೆಪಿಯ, ಅದರಲ್ಲೂ ಸಿಎಂ ರಾಜಕೀಯ ಕಾರ್ಯದರ್ಶಿ ಆಗಿರುವ ಎಂ.ಪಿ. ರೇಣುಕಾಚಾರ್ಯ ಪ್ರಧಾನಿಯ ಮಾತನ್ನೇ ಧಿಕ್ಕರಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಚೀನಾ ಮೂಲದ ಕಾರು ಖರೀದಿಸಿ ಇಂಥದ್ದೊಂದು ಆರೋಪಕ್ಕೆ ಗುರಿಯಾಗಿದ್ದಾರೆ. ಮಾತ್ರವಲ್ಲ ಆತ್ಮನಿರ್ಭರವನ್ನು ರೇಣುಕಾಚಾರ್ಯ ಆತ್ಮಬರ್ಬರಗೊಳಿಸಿದ್ದಾರೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.

ಚೀನಾದ ಕಂಪನಿಯ ಮೋರಿಸ್ ಗ್ಯಾರೇಜಸ್​ನ ಗ್ಲೋಸ್ಟರ್​ ಅಂದರೆ ಎಂಜಿ-ಗ್ಲೋಸ್ಟರ್ ಕಾರನ್ನು ಖರೀದಿಸಿರುವ ರೇಣುಕಾಚಾರ್ಯ, ಕಾರ್​ ಕೀ ಸ್ವೀಕರಿಸಿದ ಫೋಟೋವೊಂದನ್ನು ಟ್ವೀಟ್​ ಮಾಡಿ ಹೊಸ ಕಾರಿನ ವಿಷಯ ಹೇಳಿಕೊಂಡಿದ್ದರು. ಆದರೆ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿರುವ, ಆತ್ಮನಿರ್ಭರ ಭಾರತಕ್ಕೆ ಕರೆ ನೀಡಿರುವ, ಸ್ವದೇಶಿ ಉತ್ಪನ್ನಗಳಿಗೆ ಒತ್ತು ನೀಡುವಂತೆ ಹೇಳುವವರೇ ಹೀಗೆ ಚೀನಾದ ಕಾರನ್ನು ಖರೀದಿಸಿದರೆ ಹೇಗೆ ಎಂದು ಸಿಟ್ಟಾಗಿರುವ ಸಾರ್ವಜನಿಕರು ಟ್ವಿಟರ್​ನಲ್ಲಿ ರೇಣುಕಾಚಾರ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


ನಮ್ಮ ಮನೆಯ ಹೊಸ ಸದಸ್ಯ
MG Gloster 🚙@MGMotorInpic.twitter.com/1OCh8peO4a
— M P Renukacharya (@MPRBJP)December 9, 2020

ನಾಪತ್ತೆಯಾದ 7 ಮಂದಿ ಕಾಡಿನಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಶವಗಳಾಗಿ ಪತ್ತೆ; ಇಲ್ಯಾಕೆ ಮತ್ತೆ ಮತ್ತೆ ಹೀಗಾಗಿದೆ!?

ಅಬ್ಬಬ್ಬಾ ಇದೆಂಥ ಮದ್ವೆ!; ಊಟಕ್ಕೆ ಕರೆಯೋ ಬದಲು ಮನೆಮನೆಗೂ ಊಟ ಕಳಿಸಿದ್ರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + fifteen =
Remember me
