ಬೆಂಗಳೂರು:ವಿಧಾನಪರಿಷತ್ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನತ್ತ ಮೊಟ್ಟೆ ಎಸೆದ ಪ್ರಕರಣವಾಗಿ ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತ್ತೊಮ್ಮೆ ಪ್ರತಿಕ್ರಿಯಿಸಿದ್ದು, ಎಲ್ಲ ಜಿಲ್ಲಾ ಎಸ್​ಪಿಗಳಿಗೂ ಸೂಚನೆಯನ್ನೂ ನೀಡಿದ್ದಾರೆ.
ಇಂದು ರಾತ್ರಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಸಿದ್ದರಾಮಯ್ಯ ಅವರಿಗೆ ಜೀವಭಯ ಇದೆ ಎಂಬ ಕುರಿತ ಸುದ್ದಿಗಳಿಗೆ ಸಂಬಂಧಿಸಿದ ಮಾತನಾಡಿದರು. ಸಿದ್ದರಾಮಯ್ಯ ಅವರಿಗೆ ಜೀವಭಯ ಇದೆ ಎಂಬ ಮಾಹಿತಿಯನ್ನು ಮಾಧ್ಯಮದ ಮೂಲಕ ತಿಳಿದಿದ್ದೇನೆ. ಈ ಬಗ್ಗೆ ಅವರ ಬಳಿಯೂ ಮಾತನಾಡಿದ್ದೇನೆ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಸಂಪೂರ್ಣ ತನಿಖೆ ಮಾಡುವುದಾಗಿ ಭರವಸೆ ನೀಡಿದ್ದೇನೆ ಎಂದರು.
ಮೊಟ್ಟೆ ಎಸೆತದ ವಿಷಯವಾಗಿ ಮಾತನಾಡಿದ ಸಿಎಂ, ಈ ಥರದ್ದು ಎರಡೂ ಕಡೆಯಲ್ಲಿ ನಡೆಯುತ್ತಿದೆ ಎಂದರು. ಇನ್ನೊಬ್ಬರ ಮನಸು ಕೆಡಿಸುವ, ಪ್ರಚೋದನೆ ಕೊಡುವ ಹಾಗೂ ಕಾನೂನುಸುವ್ಯವಸ್ಥೆಗೆ ಭಂಗ ತರುವ ರೀತಿಯಲ್ಲಿ ಯಾರೂ ನಡೆದುಕೊಳ್ಳಬಾರದು. ಆ ರೀತಿಯಲ್ಲಿ ಸೂಕ್ತ ಕ್ರಮಕೈಗೊಳ್ಳುವಂತೆ ಎಲ್ಲ ಎಸ್​​ಪಿಗಳಿಗೂ ಆದೇಶಿಸುವಂತೆ ಸೂಚನೆ ನೀಡಿದ್ದೇನೆ ಎಂಬುದಾಗಿ ಸಿಎಂ ಹೇಳಿದರು.
ಸಾವರ್ಕರ್ ಫ್ಲೆಕ್ಸ್ ಸಂಘರ್ಷ ಮುಂದುವರಿಕೆ: ಅಲ್ಪಸಂಖ್ಯಾತ ಮುಖಂಡ ಹಾಕಿದ್ದ ಫ್ಲೆಕ್ಸ್ ತೆರವು..

ಕಸದ ತೊಟ್ಟಿ ಮೇಲೂ ಸಾವರ್ಕರ್ ಫೋಟೋ ಹಾಕಲು ಯೋಗ್ಯತೆ ಇಲ್ಲ: ಬಿ.ಕೆ. ಹರಿಪ್ರಸಾದ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + sixteen =
Remember me
