ಮೈಸೂರು:ಜಾತಿ ಜನಗಣತಿ ಕುರಿತಂತೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ವರದಿ ಬಿಡುಗಡೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಒತ್ತಾಯಿಸಿದ್ದಾರೆ. ಇದೀಗ ಈ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ತಮ್ಮ ಮೈಸೂರಿನ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:ಕಾವೇರಿ ಹೋರಾಟಕ್ಕೆ ಬೆಂಬಲ: ರಾಜಸ್ಥಾನ ಸಮುದಾಯದಿಂದ ಪ್ರತಿಭಟನಾ ಮೆರವಣಿಗೆ
“ವರದಿಯೇ ನನ್ನ ಕೈ ಸೇರಿಲ್ಲ. ಆಗಲೇ ಅದಕ್ಕೆ ವಿರೋಧ ಎಂದರೆ ನಾನೇನು ಮಾಡಲಿ? ವರದಿಯಲ್ಲಿ ಏನಿದೆ ಏಂಬುದೇ ಗೊತ್ತಿಲ್ಲ. ಅಂಕಿ ಅಂಶವೇ ತಿಳಿಯದೆ, ಅದರ ಬಗ್ಗೆ ಮಾತನಾಡುವುದು ಹೇಗೆ‌? ನವೆಂಬರ್ ಒಳಗೆ ವರದಿ ಕೊಡಬಹುದೆನೋ, ಕೊಡಲಿ ತದನಂತರ ನೋಡೋಣ” ಎಂದು ಸಿಎಂ ಹೇಳಿದರು.
“ಈಶ್ವರಪ್ಪ ಒಂದು ಸವಕಲು ನಾಣ್ಯ. ಅವರಿಗೆ ಸವಕಲು ಆಗಿರುವ ಕಾರಣಕ್ಕೆ ಅವರಿಗೆ ಟಿಕೆಟ್ ಕೊಟ್ಟಿಲ್ಲ. ಈಶ್ವರಪ್ಪ ಮಾತುಗಳಿಗೆ ಬೆಲೆಯೇ ಇಲ್ಲ. ಕಾಂತರಾಜು ವರದಿ ಪರ ವಿಧಾನಸಭೆಯಲ್ಲಿ ಅವರು ಮಾತನಾಡಿಲ್ವಾ? ಈಗ ಅದನ್ನು ಸುಟ್ಟು ಹಾಕುತ್ತೇವೆ ಎಂದರೆ ಅದರ ಅರ್ಥವೇನು. ಈಶ್ವರಪ್ಪ ಮಾತುಗಳಿಗೆ ಹೆಚ್ಚು ಬೆಲೆ ಕೊಡಬೇಡಿ‌” ಎಂದರು.
ಎಚ್​ಡಿಕೆ ಅವರದು ವ್ಯಂಗ್ಯ ಬಿಟ್ಟರೆ ಬೇರೇನೂ ಇಲ್ಲ!; ಕುಮಾರಸ್ವಾಮಿ ಆಫರ್​ಗೆ ಸಿಎಂ ತಿರುಗೇಟು

ಟೀಸರ್​ಗೆ ‘ದಿಲ್ ಖುಷ್’!; ನವೀರಾದ ಪ್ರೇಮಕಥೆಯ ಹಾದಿ ಹೀಗಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
