ಬೆಳಗಾವಿ: ಕಳೆದು ಹದಿನೈದು ದಿನಗಳಿಂದ ಮನೆಗೂ ಹೋಗಲಾಗದೆ, ಪುಟ್ಟ ಮಗಳು, ಪತಿಯನ್ನು ಭೇಟಿ ಮಾಡಲಾಗದೆ, ಜಿಲ್ಲಾಸ್ಪತ್ರೆಯಲ್ಲಿದ್ದುಕೊಂಡು ಕರೊನಾ ವಿರುದ್ಧ ಸೆಣಸುತ್ತಿರುವ ನರ್ಸ್ ಸುಗಂಧಾ ಕೊರೆಪ್ಪಗೋಳ ಹಾಗೂ ವೈದ್ಯರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಕೃತಜ್ಞತೆ ಸಲ್ಲಿಸಿದ್ದಾರೆ.
ಅಮ್ಮ ಕಣ್ಣಿಗೆ ಕಂಡರೂ, ಹತ್ತಿರ ಹೋಗಲಾಗದೆ ಅಳುತ್ತಿದ್ದ ಕಂದಮ್ಮ ಐಶ್ವರ್ಯಾಳ ಹೃದಯ ಮಿಡಿಯುವ ಕತೆಯನ್ನು ‘ಅಮ್ಮಾ ಬಾ ಅಮ್ಮಾ’ ಎಂಬ ಶೀರ್ಷಿಕೆಯಡಿ ದಿಗ್ವಿಜಯ ನ್ಯೂಸ್ ಮಂಗಳವಾರ ಬಿತ್ತರಿಸಿತ್ತು. ವಿಜಯವಾಣಿ ಬೆಳಗಾವಿ ಆವೃತ್ತಿಯಲ್ಲೂ ಬುಧವಾರ ‘ಸಂಬಂಧವನ್ನೂ ಕಸಿದ ಕರೊನಾ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು.
ರಕ್ಷಣೆಗೆ ನಾವಿದ್ದೇವೆ: ದಿಗ್ವಿಜಯ ನ್ಯೂಸ್ ವರದಿಯನ್ನು ನೋಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ ಬೆಳಗ್ಗೆ 11 ಗಂಟೆಗೆ ಸುಗಂಧಾಗೆ ಕರೆ ಮಾಡಿದರು. ‘ಕರೊನಾ ವೈರಸ್​ನಿಂದ ಜನರನ್ನು ರಕ್ಷಿಸಲು ನಿಮ್ಮ ಮನೆ, ಮಕ್ಕಳನ್ನೂ ಲೆಕ್ಕಿಸದೆ ಹಗಲಿರುಳು ಶ್ರಮಿಸುತ್ತಿದ್ದೀರಿ. ನಿಮ್ಮ ಸಹಕಾರ ಹೀಗೆಯೇ ಇರಲಿ. ಮುಂದಿನ ದಿನಗಳಲ್ಲಿ ನಿಮಗೆಲ್ಲ ಒಳ್ಳೆಯದಾಗುತ್ತದೆ. ರಾಜ್ಯದ ವೈದ್ಯರ, ಎಲ್ಲ ನರ್ಸ್​ಗಳ ಕುಟುಂಬದ ರಕ್ಷಣೆಯ ಜವಾಬ್ದಾರಿ ಸರ್ಕಾರದ ಮೇಲಿದ್ದು, ಯಾವುದೇ ಚಿಂತೆ ಮಾಡದೆ ಸೇವೆ ಮುಂದುವರಿಸಿ. ಸಂಕಷ್ಟ ಸಂದರ್ಭದಲ್ಲಿ ಶ್ರಮಿಸುತ್ತಿರುವ ನಿಮ್ಮ ಸೇವೆಯನ್ನು ಸರ್ಕಾರ ಯಾವತ್ತೂ ಮರೆಯುವುದಿಲ್ಲ’ ಎಂದು ಹೇಳಿ ಧೈರ್ಯ ತುಂಬಿದರು.
ಕರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ನನ್ನ ಪತ್ನಿ ಸುಗಂಧಾಳಿಗೆ ಸಿಎಂ ದೂರವಾಣಿ ಮೂಲಕ ಕರೆ ಮಾಡಿ ಧೈರ್ಯ ತುಂಬಿದ್ದಾರೆ. ಮುಖ್ಯಮಂತ್ರಿಗಳ ಕೃತಜ್ಞತಾ ಮಾತುಗಳಿಗೆ ನಾವು ಆಭಾರಿ.
| ಸಂತೋಷ, ನರ್ಸ್ ಸುಗಂಧಾ ಪತಿ
ಸಿಎಂ ಯಡಿಯೂರಪ್ಪ ಮೊಬೈಲ್ ಕರೆ ಮಾಡಿ ನಮಗೆಲ್ಲ ಕೃತಜ್ಞತೆ ಸಲ್ಲಿಸಿದ್ದಾರೆ. ‘ಕರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ, ಇಂತಹ ಸಂಕಷ್ಟದ ಸಮಯದಲ್ಲಿ ಸೇವೆ ಸಲ್ಲಿಸುತ್ತಿರುವ ನಿಮ್ಮ ಬೆನ್ನಿಗೆ ಸರ್ಕಾರ ನಿಂತಿದೆ’ ಎಂದು ಧೈರ್ಯ ತುಂಬಿದ್ದಾರೆ. ಸಿಎಂ ಅವರ ಈ ಭರವಸೆಯಿಂದಾಗಿ ನಮಗೆಲ್ಲ ಹೆಚ್ಚಿನ ಜವಾಬ್ದಾರಿ ಬಂದಿದೆ.
| ಸುಗಂಧಾ ಕೊರೆಪ್ಪಗೋಳ ನರ್ಸ್
ಕಣ್ಮರೆಯಾಗಿದ್ದ ನಿಜಾಮುದ್ದೀನ್ ಮರ್ಕಾಜ್ ಮುಖ್ಯಸ್ಥ ಮೌಲಾನಾ ಸಾದ್​ ಪತ್ತೆ: ದೆಹಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − three =
Remember me
